ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕಡೆಯವರು ಮಾಡಿದ್ದೇನು ಗೊತ್ತೇ?

|
Google Oneindia Kannada News

ಲಕ್ನೋ, ಅಕ್ಟೋಬರ್ 23: ನಾವು ಎಷ್ಟೇ ಮುಂದುವರಿದಿದ್ದೇವೆ ಎಂದರೂ ಕೆಲವು ಸಾಮಾಜಿಕ ಪಿಡುಗುಗಳು ನಿರ್ಮೂಲನೆಯಾಗುವ ಸೂಚನೆಗಳು ಕಂಡುಬರುತ್ತಿಲ್ಲ. ಅವುಗಳಲ್ಲಿ ವರದಕ್ಷಿಣೆ ಕಿರುಕುಳವೂ ಒಂದು. ಮದುವೆ ಮನೆಯಲ್ಲಿ ವರದಕ್ಷಿಣೆ ಸಾಲಲಿಲ್ಲ ಎಂಬ ತಕರಾರು ತೆಗೆದು ಹೆಣ್ಣು ಹೆತ್ತವರ ಸಂಕಟ ಹೆಚ್ಚಿಸುವ ಕಿಡಿಗೇಡಿಗಳ ಸಂಖ್ಯೆ ಕಡಿಮೆಯಾಗಿಲ್ಲ.

ಹಣದ ದುರಾಸೆಯ ಬೆನ್ನು ಬಿದ್ದವರಿಗೆ ಕೆಲವರು ಅನಿವಾರ್ಯವಾಗಿ ಶರಣಾಗುತ್ತಾರೆ. ಮದುವೆ ನಿಂತುಹೋಗುತ್ತದೆ, ಮರ್ಯಾದೆಗೆ ಕುಂದಾಗುತ್ತದೆ, ಮಗಳ ಭವಿಷ್ಯ ಹಾಳಾಗುತ್ತದೆ ಎಂಬ ಅನೇಕ ಕಾರಣಗಳಿಂದಾಗಿ ಹೆಣ್ಣುಮಗಳ ಕಡೆಯವರು ಗಂಡಿನ ಕಡೆಯವರ ಬೇಡಿಕೆಗಳಿಗೆಲ್ಲ ಒಪ್ಪಿಕೊಂಡು ಹೈರಾಣಾಗುತ್ತಾರೆ.

ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ? ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ?

ಆದರೆ, ಮನಸ್ಸು ಮಾಡಿದರೆ ಅಂತಹವರಿಗೆ ತಾವೇ ಶಿಕ್ಷೆ ನೀಡಬಹುದು. ಅದರ ಮೂಲಕ ಹಣದ ಅಮಲು ಹೊತ್ತಿದವರಿಗೆ ಮೈಚಳಿ ಬಿಡಿಸಬಹುದು ಎಂಬ ಮಾನಸಿಕ ಸ್ಥೈರ್ಯ ಮೂಡಿದರೆ ಬಹುಶಃ ಈ ಪಿಡುಗಿಗೆ ಅಂತ್ಯ ಹಾಡಲು ಸಾಧ್ಯ. ಇದಕ್ಕೊಂದು ಉತ್ತಮ ನಿದರ್ಶನ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ವರದಕ್ಷಿಣಿಗೆ ಬೇಡಿಕೆಯ ಕಿರುಕುಳದಿಂದ ಬೇಸೆತ್ತ ವಧುವಿನ ಕಡೆಯವರು ರೊಚ್ಚಿಗೆದ್ದು ವರ, ಆತನ ತಂದೆ ಮತ್ತು ಸಹೋದರನ ಅರ್ಧ ತಲೆಯನ್ನು ಬೋಳಿಸಿದ ಘಟನೆ ಲಕ್ನೋದ ಕುರ್ರಮ್‌ನಗರದಲ್ಲಿ ನಡೆದಿದೆ.

ಪಲ್ಸರ್ ಬೇಡ, ಅಪಾಚೆ ಬೇಕು ಎಂದ

ಪಲ್ಸರ್ ಬೇಡ, ಅಪಾಚೆ ಬೇಕು ಎಂದ

ತರಕಾರಿ ವ್ಯಾಪಾರಿಯಾಗಿದ್ದ ವಧುವಿನ ತಂದೆಯ ಬಳಿ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ ವರನ ಕಡೆಯವರು, ಅದರ ಪ್ರಮಾಣವನ್ನು ಒಂದು ವಾರದಿಂದ ಹೆಚ್ಚಿಸುತ್ತಲೇ ಇದ್ದರು.

ಮೊದಲು ವರದಕ್ಷಿಣೆಯಾಗಿ ಮೋಟಾರ್‌ ಸೈಕಲ್ ನೀಡುವಂತೆ ವರ ಅಬ್ದುಲ್ ಕಲಾಂ ಬೇಡಿಕೆ ಇರಿಸಿದ್ದ. ವಧುವಿನತಂದೆ ಹಣ ಹೊಂಚಿಸಿ ಪಲ್ಸರ್ ಬೈಕ್ ಕೊಡಿಸಿದರೆ, ತನಗೆ ಆ ಬ್ರ್ಯಾಂಡ್‌ನ ಬೈಕ್ ಬೇಡ, ಟಿವಿಎಸ್ ಅಪಾಚೆ ಬೈಕ್ ಬೇಕು ಎಂದು ಹಟ ಹಿಡಿದಿದ್ದ.

ಚಿನ್ನದ ನೆಕ್ಲೇಸ್ ಬೇಕೆಂದ

ಚಿನ್ನದ ನೆಕ್ಲೇಸ್ ಬೇಕೆಂದ

ವರನ ಬೇಡಿಕೆಗೆ ಮಣಿದ ವಧುವಿನ ತಂದೆ, ಆತನದೇ ಆಯ್ಕೆಯ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದರು. ಆದರೆ, ಮದುವೆ ದಿನ ಚಿನ್ನದ ನೆಕ್ಲೇಸ್ ನೀಡುವಂತೆ ಹೊಸ ಬೇಡಿಕೆ ಇರಿಸಿದಾಗ ಅವರ ತಾಳ್ಮೆಯ ಕಟ್ಟೆಯೊಡೆಯಿತು.

ವಧುವಿನ ತಂದೆ ಮತ್ತು ವರನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ವರನ ಕಡೆಯವರು ಮದುವೆ ನಿಲ್ಲಿಸಿ ಮನೆಗೆ ಹೊರಡಲು ಸಿದ್ಧರಾದರು.

ವರದಕ್ಷಿಣೆ ಕೇಸ್: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು ವರದಕ್ಷಿಣೆ ಕೇಸ್: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು

ಕೇಶಮುಂಡನ ಮಾಡಿದರು

ಕೇಶಮುಂಡನ ಮಾಡಿದರು

ಸ್ಥಳದಲ್ಲಿದ್ದ ವಧುವಿನ ಕಡೆಯವರು ಮತ್ತು ಸ್ಥಳೀಯರು ವರ, ಆತನ ತಂದೆ ಮತ್ತು ಸಹೋದರನನ್ನು ಸುತ್ತವರಿದು ಸಮೀಪದ ಕೋಣೆಯೊಂದಕ್ಕೆ ಅವರನ್ನು ಎತ್ತಿಕೊಂಡು ಹೋಗಿ ಅರೆಬರೆ ಕೇಶಮುಂಡನ ಮಾಡಿದರು. ವಧುವಿನ ಕಡೆಯವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಪೊಲೀಸರು ಅಲ್ಲಿಗೆ ತೆರಳಿ ಬಂಧನದಲ್ಲಿದ್ದ ವರ ಮತ್ತು ಆತನ ಕಡೆಯವರನ್ನು ಬಿಡಿಸಿದರು. ವರನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಕಾನೂನಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮದುವೆಗೆ ನಿರಾಕರಿಸಿದರು

ಮೋಟಾರ್ ಸೈಕಲ್ ಬೇಕೆಂದು ಐದು ದಿನಗಳ ಹಿಂದೆ ಅವರು ಬೇಡಿಕೆ ಇರಿಸಿದರು. ಬಳಿಕ ಮದುವೆ ದಿನ ಚಿನ್ನದ ನೆಕ್ಲೇಸ್ ಬೇಕು ಎಂದರು. ಅವುಗಳನ್ನು ಕೊಡಲು ಆಗುವುದಿಲ್ಲ ಎಂದಾಗ ಮದುವೆಯಾಗಲು ನಿರಾಕರಿಸಿದರು. ಅವರ ತಲೆಯನ್ನು ಯಾರು ಬೋಳಿಸಿದರೋ ನನಗೆ ತಿಳಿದಿಲ್ಲ ಎಂದು ವಧುವಿನ ಅಜ್ಜಿ ಹೇಳಿದ್ದಾರೆ.

ಬೂಕನಕೆರೆಯಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ನಾದಿನಿಯಿಂದ ಗೃಹಿಣಿಯ ಹತ್ಯೆಬೂಕನಕೆರೆಯಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ನಾದಿನಿಯಿಂದ ಗೃಹಿಣಿಯ ಹತ್ಯೆ

English summary
Family members of a bride tonsured the groom and his family for demanding high dowry in Lucknow, Uttar Pradesh on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X