ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಿಜೆಪಿಯೇ ಅಧಿಕಾರಕ್ಕೆ, ಮೋದಿ ಬಾಯಿಂದ ಖಚಿತ ಭರವಸೆ

|
Google Oneindia Kannada News

ಮೀರತ್, ಮಾರ್ಚ್ 28: "ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆಂದು ಅಭಯ ನೀಡಲು ಭಾರತದ ಜನರು ಉತ್ಸುಕರಾಗಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 11 ರಂದು ಲೋಕಸಭಾ ಚುನಾವಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್ ನಲ್ಲಿ ಚುನಾವಣಾ ಸಮಾವೇಶವೊಂದನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದರು.

ಲೋಕಸಭಾ ಚುನಾವಣಾ ಪ್ರಚಾರ : ಕರ್ನಾಟಕದಲ್ಲಿ 7 ಮೋದಿ ಸಮಾವೇಶಲೋಕಸಭಾ ಚುನಾವಣಾ ಪ್ರಚಾರ : ಕರ್ನಾಟಕದಲ್ಲಿ 7 ಮೋದಿ ಸಮಾವೇಶ

ಹಳೆಯ ಸರ್ಕಾರಗಳು ಮಾಡಿದ ಕೆಲಸಕ್ಕೂ, ಈ ಸರ್ಕಾರ ಮಾಡಿದ ಕೆಲಸಕ್ಕೂ ಹೋಲಿಸಿ ನೋಡಿದರೆ ನಮ್ಮ ಸರ್ಕಾರದ ಸಾಧನೆ ಅರ್ಥವಾಗುತ್ತದೆ. ಅದು ಜನರಿಗೂ ತಿಳಿಸಿದೆ. ಆದ್ದರಿಂದ ಜನರು ನಮ್ಮನ್ನು ಮತ್ತೆ ಗೆಲ್ಲಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಈಗಲೂ ನಿಮ್ಮ ಮುಂದೆ ಎರಡು ಆಯ್ಕೆಯಿದೆ, ಎಚ್ಚರವಿರುವ ಮತ್ತು ನಿದ್ದೆ ಮಾಡುತ್ತಿರುವ ಪಕ್ಷಗಳ ನಡುವೆ ಒಂದನ್ನು ಆರಿಸಿಕೊಳ್ಳಿ ಎಂದು ಮೋದಿ ಹೇಳಿದರು.

ಮಿಶನ್ ಶಕ್ತಿಯನ್ನು ಮುಂದೂಡಿದ್ದು ಆ ಸರ್ಕಾರ

ಮಿಶನ್ ಶಕ್ತಿಯನ್ನು ಮುಂದೂಡಿದ್ದು ಆ ಸರ್ಕಾರ

ಬಾಹ್ಯಾಕಾಶದಲ್ಲಿ ಉಪಗ್ರಹ ಪ್ರತಿರೋಧನ ಅಸ್ತ್ರವನ್ನು ಪರೀಕ್ಷಿಸುವ ಬಗ್ಗೆ ಭಾರತೀಯ ವಿಜ್ಞಾನಿಗಳು ಆಗಿನ (ಯುಪಿಎ) ಸರ್ಕಾರದ ಮುಂದೆ ಪ್ರಸ್ತಾಪವನ್ನಿಟ್ಟಿದ್ದರು. 21 ನೇ ಶತಮಾನವನ್ನು ಗಟ್ಟಿಯಾಗಿ ಮಾಡಲು, ಮತ್ತು ಭಾರತವನ್ನು ಸುಭದ್ರವಾಗಿ ಮಾಡಲು ಈ ನಿರ್ಧಾರ ಅಗತ್ಯವಾಗಿತ್ತು. ಆದರೆ ಈ ಪ್ರಸ್ತಾಪವನ್ನು ಆಗಿನ ಸರ್ಕಾರ ಮುಂದೂಡಿತ್ತು-ನರೇಂದ್ರ ಮೋದಿ

ಭಯೋತ್ಪಾದಕರ ಬಗ್ಗೆ ಮೃದು ಭಾವನೆ

ಭಯೋತ್ಪಾದಕರ ಬಗ್ಗೆ ಮೃದು ಭಾವನೆ

ಹಿಂದಿನ ಸರ್ಕಾರ(ಯುಪಿಎ) ಭಯೋತ್ಪಾದಕರ ಬಗ್ಗೆ ಮೃದು ಭಾವನೆ ಹೊಂದಿತ್ತು. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಅವರು ಯಾವ ಧರ್ಮದವರು ಎಂದು ಆ ಸರ್ಕಾರ ತನಿಖೆ ಮಾಡಿ ನಂತರ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿತ್ತು- ನರೇಂದ್ರ ಮೋದಿ

ಮೋದಿ ಭಾಷಣ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಮೋದಿ ಭಾಷಣ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಪಾಕಿಸ್ತಾನಕ್ಕೆ ಹೀರೋ ಆಗಲು ಹೊರಟಿದ್ದಾರೆ!

ಪಾಕಿಸ್ತಾನಕ್ಕೆ ಹೀರೋ ಆಗಲು ಹೊರಟಿದ್ದಾರೆ!

ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಲು ನಾವು ಕ್ರಮಕೈಗೊಂಡರೆ ಅದನ್ನು ಅವರು(ವಿರೋಧ ಪಕ್ಶಃದ ನಾಯಕರು) ಪ್ರಶ್ನಿಸುತ್ತಾರೆ. ಗಡಿನಿಯಂತ್ರಣ ರೇಖೆ ಬಳಿ ಉಗ್ರನೆಲೆಯನ್ನು ಯಾಕೆ ಧ್ವಂಸ ಮಾಡಿದಿರಿ ಎಂದು ಪ್ರಶ್ನಿಸುತ್ತಾರೆ. ಅವರು ಪಾಕಿಸ್ತಾನದ ಹೀರೋ ಆಗಲು ಹೊರಟಿದ್ದಾರೆ. ನಮ್ಮ ದೇಶಕ್ಕೆ ಪಾಕಿಸ್ತಾನದ ಹೀರೋಗಳಯ ಬೇಕೋ, ಭಾರತದ ಹೀರೋಗಳು ಬೇಕೋ ಎಂಬುದನ್ನು ನೀವೇ ಯೋಚಿಸಿ- ನರೇಂದ್ರ ಮೋದಿ

ನಾನು ಲೆಕ್ಕ ಕೊಡುತ್ತೇನೆ

ನಾನು ಲೆಕ್ಕ ಕೊಡುತ್ತೇನೆ

ಐದು ವರ್ಷದ ಹಿಂದೆ ನಾನು ಹೇಳಿದ್ದೆ, ನಾನು ನಿಮ್ಮ ಋಣ ತೀರಿಸುತ್ತೇನೆ ಎಂದು. ನಾನು ಏನೆಲ್ಲ ಕೆಲಸ ಮಾಡಿದ್ದೇನೆ ಎಂಬ ಲೆಕ್ಕವನ್ನು ನಾನು ಕೊಡುತ್ತೇನೆ, ಜೊತೆಗೆ ಹಿಂದಿನ ಸರ್ಕಾರ ಏನು ಕೆಲಸ ಮಾಡಿದೆ ಎಂಬುದನ್ನೂ ತಿಳಿಯಿರಿ- ನರೇಂದ್ರ ಮೋದಿ

ಶೇಕಡಾ 50ಕ್ಕೂ ಹೆಚ್ಚು ಭಾರತೀಯರಿಗೆ ಆಡಳಿತದ ಬಗ್ಗೆ ಸಂತೋಷ: ಸಮೀಕ್ಷೆಶೇಕಡಾ 50ಕ್ಕೂ ಹೆಚ್ಚು ಭಾರತೀಯರಿಗೆ ಆಡಳಿತದ ಬಗ್ಗೆ ಸಂತೋಷ: ಸಮೀಕ್ಷೆ

English summary
PM Narendra Modi addressing a public rally in Meerut ahead of Lok Sabha elections 2019: He opens fire at Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X