ನಿಮಗೆ 'ಅಲಿ'ಯಲ್ಲಿ ನಂಬಿಕೆಯಾದರೆ ನಮಗೆ 'ಬಜರಂಗ ಬಲಿ'ಯಲ್ಲಿ ನಂಬಿಕೆ: ಯೋಗಿ
ಮೀರತ್, ಏಪ್ರಿಲ್ 10: ಮುಸ್ಲಿಮರ ಮತದ ಕುರಿತಂತೆ ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿರೋಧಪಕ್ಷಗಳು 'ಅಲಿ'ಯಲ್ಲಿ ನಂಬಿಕೆ ಹೊಂದಿದ್ದರೆ, ಬಿಜೆಪಿಗೆ 'ಬಜರಂಗ ಬಲಿ'ಯಲ್ಲಿ ನಂಬಿಕೆ ಇದೆ ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ದೇಶದಾದ್ಯಂತ ಹಸಿರು ವೈರನ್ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೀರತ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಅವರು, ವಿರೋಧಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

'ಶಹರಾನ್ಪುರ ಸಭೆಯಲ್ಲಿ ಮಾಯಾವತಿ ಅವರು ಹೇಳಿದ್ದನ್ನು ನೀವು ಕೇಳಿರಬೇಕು. 'ನಾವು (ಮಹಾಮೈತ್ರಿಕೂಟ) ಮುಸ್ಲಿಮರ ಮತಗಳನ್ನು ಪಡೆದುಕೊಂಡರೆ ಬೇರೆಯವರ ಬೆಂಬಲ ಅಗತ್ಯವೇ ಇರುವುದಿಲ್ಲ' ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ನಾನೂ ಹೇಳಲು ಬಯಸುತ್ತೇನೆ, ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ 'ಅಲಿ'ಯಲ್ಲಿ ನಂಬಿಕೆ ಹೊಂದಿದ್ದರೆ ನಾವು 'ಬಜರಂಗ ಬಲಿ'ಯಲ್ಲಿ ನಂಬಿಕೆ ಹೊಂದಿದ್ದೇವೆ' ಎಂದು ಯೋಗಿ ಹೇಳಿದ್ದಾರೆ.
ಬಜರಂಗ ಬಲಿಯ ಅನುಯಾಯಿಗಳು ತಮ್ಮನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಪಕ್ಷಗಳು ಒಪ್ಪಿಕೊಂಡಿವೆ. ಹೀಗಾಗಿಯೇ ಅವರು 'ಅಲಿ ಅಲಿ' ಎಂದು ವೇದಿಕೆ ಮೇಲಿಂದಲೇ ಕೂಗುತ್ತಾರೆ. ಜತೆಗೆ ದೇಶದಾದ್ಯಂತ ಹಸಿರು ವೈರಸ್ ಹರಡಲು ಬಯಸಿದ್ದಾರೆ. ಆದರೆ, ಈ ವೈರಸ್‌ನಿಂದ ಪಶ್ಚಿಮ ಉತ್ತರ ಪ್ರದೇಶ ತೊಂದರೆಗೆ ಒಳಗಾಗಬಾರದು ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಿಂದ ಕೇರಳಕ್ಕೆ ಹಾರಿದ್ದಾರೆ. ಅಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಬಳಿ ಕಾಂಗ್ರೆಸ್ ಬಾವುಟಗಳಿರಲಿಲ್ಲ. ಆದರೆ, ದೇಶದ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನ ಹಸಿರು ಬಾವುಟಗಳು ಹಾರುತ್ತಿದ್ದವು ಎಂದು ಹೇಳಿದ್ದಾರೆ.












Click it and Unblock the Notifications