ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ

Recommended Video

      Lok Sabha Elections 2019 : ಟ್ವಿಟ್ಟರ್ ಲೋಕಕ್ಕೆ ಪ್ರಿಯಾಂಕಾ ಗಾಂಧಿ ಪಾದಾರ್ಪಣೆ | Oneindia Kannanda

      ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ರಾಜಕೀಯ ಸುದ್ದಿ ಆಸಕ್ತರಿಗೆ ತಿಳಿದಿರುವ ವಿಷಯ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರಿ ಪ್ರಿಯಾಂಕಾ ಅವರು ಇಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಟ್ವಿಟ್ಟರ್ ಖಾತೆ ಆರಂಭಗೊಳ್ಳುತ್ತಿದ್ದಂತೆ ಸಾವಿರಾರು ಮಂದಿ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.ಅ

      ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ಜ್ಯೋತಿರಾದಿತ್ಯಾ ಸಿಂಧಿಯ ಅವರ ತಂಡಗಳು ಯೋಗಿ ಆದಿತ್ಯನಾಥ್ ವಿರುದ್ಧ ರಣತಂತ್ರ ಹೆಣೆಯಲು ಇಂದು ಸಭೆ ಸೇರುತ್ತಿವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಭೆಯ ಅಧ್ಯಕತೆ ವಹಿಸಲಿದ್ದಾರೆ. ನಂತರ ಲಕ್ನೋದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ.

      ಸೋಮವಾರ ಬೆಳಗ್ಗೆ 11.49ರ ಸುಮಾರಿಗೆ ಪ್ರಿಯಾಂಕ ಅವರು ಟ್ವಿಟ್ಟರ್ ಖಾತೆ ಆರಂಭಗೊಂಡಿದ್ದು, ಟ್ವಿಟ್ಟರ್ ನಿಂದ ಅಧಿಕೃತ ಖಾತೆ ಎಂಬ ಮುದ್ರೆಯೂ ಸಿಕ್ಕಿದೆ.

      ಸಾವಿರಾರು ಹಿಂಬಾಲಕರನ್ನು ಪಡೆದ ಪ್ರಿಯಾಂಕಾ ಗಾಂಧಿ

      ಸಾವಿರಾರು ಹಿಂಬಾಲಕರನ್ನು ಪಡೆದ ಪ್ರಿಯಾಂಕಾ ಗಾಂಧಿ

      ಸೋಮವಾರ ಬೆಳಗ್ಗೆ 11.49ರ ಸುಮಾರಿಗೆ ಪ್ರಿಯಾಂಕ ಅವರು ಟ್ವಿಟ್ಟರ್ ಖಾತೆ ಆರಂಭಗೊಂಡಿದ್ದು, ಟ್ವಿಟ್ಟರ್ ನಿಂದ ಅಧಿಕೃತ ಖಾತೆ ಎಂಬ ಮುದ್ರೆಯೂ ಸಿಕ್ಕಿದೆ. ಮೊದಲ 15 ನಿಮಿಷಗಳಲ್ಲಿ 5000 ಮಂದಿ ಹಿಂಬಾಲಕರನ್ನು ಪಡೆದುಕೊಂಡಿದ್ದು, ಮೊದಲ ಒಂದು ಗಂಟೆ ಅವಧಿಯಲ್ಲೇ 25,000 ಹಿಂಬಾಲಕರನ್ನು ಹಿಂದಿದ್ದಾರೆ.

      ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಣೆ

      ಪ್ರಿಯಾಕಾ ಅವರು ಟ್ವಿಟ್ಟರ್ ಲೋಕಕ್ಕೆ ಎಂಟ್ರಿಕೊಟ್ಟಿದ್ದನ್ನು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಲಾಯಿತು. ಈ ಸುದ್ದಿಗೆ ಅನೇಕರು ಪ್ರತಿಕ್ರಿಯಿಸಿ, ಪ್ರಿಯಾಂಕಾ ಅವರು ಟ್ವಿಟ್ಟರ್ ಲೋಕಕ್ಕೆ ಬಂದಿರುವುದು ಒಳ್ಳೆ ಬೆಳವಣಿಗೆ ಎಂದಿದ್ದಾರೆ.

      ಸಾರ್ವಜನಿಕರ ಅಭಿಪ್ರಾಯ

      ಭಾರತಕ್ಕೆ ನಿಮ್ಮಂಥ ನಾಯಕಿ ಬೇಕಿದೆ. ಸಕ್ರಿಯ ರಾಜಕೀಯಕ್ಕೆ ಬಂದಿದ್ದಕ್ಕೆ ಧನ್ಯವಾದಗಳು

      ಪ್ರಿಯಾಂಕಾ ಗಾಂಧಿ ಅವರಿಂದ ಕರೆ

      ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಪೂರ್ವ ವಲಯದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ.

      ಯಾವ ಯಾವ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ?

      ಯಾವ ಯಾವ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ?

      ಪ್ರಿಯಾಂಕಾ(47) ಅವರು ಈ ಸಮಯಕ್ಕೆ(1.08) ಇನ್ನು ಯಾವುದೇ ಪೋಸ್ಟ್ ಮಾಡಿಲ್ಲ. ಸೋದರ ರಾಹುಲ್ ಗಾಂಧಿ ಅವರ ಖಾತೆ ಸೇರಿದಂತೆ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಕಾಂಗ್ರೆಸ್, ಅಹ್ಮದ್ ಪಟೇಲ್, ರಣದೀಪ್ ಸಿಂಗ್ ಸುರ್ಜೆವಾಲ, ಜ್ಯೋತಿರಾದಿತ್ಯಾ ಸಿಂಧಿಯಾ ಖಾತೆಗಳನ್ನು ಪ್ರಿಯಾಂಕಾ ಹಿಂಬಾಲಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+