ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಣಾಸಿ, ಏಪ್ರಿಲ್ 26: ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರಾದ ಜೆಡಿಯು ನಾಯಕ ನಿತೀಶ್ ಕುಮಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ಅವರು ಈ ಮೂಲಕ ಎನ್ ಡಿಎ ಮೈತ್ರಿಕೂಟದ ಶಕ್ತಿ ಪ್ರದರ್ಶನವನ್ನೂ ಮಾಡಿದ್ದಾರೆ. ಮೊದಲಿಗೆ ಬಿಜೆಪಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಳಿಗ್ಗೆ 11:40ಕ್ಕೆ ನಾಮಪತ್ರ ಸಲ್ಲಿಸಿದರು.

Lok Sabha elections 2019: PM Narendra Modi Nomination in Varanasi: LIVE updates

ಅದಕ್ಕೂ ಮುನ್ನ ಎನ್ ಡಿಎ ಮುಖಂಡರೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಭೆ ನಡೆಸಿದರು. ವಾರಣಾಸಿ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಅಂದರೆ ಮೇ 19 ರಂದು ಚುನಾವಣೆ ನಡೆಯಲಿದ್ದು, ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಮೋದಿ ನಾಮಪತ್ರ ಸಲ್ಲಿಕೆಯ ಕುರಿತ ಕ್ಷಣಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ ಕನ್ನಡ' ನೀಡಲಿದೆ.

Apr 26, 2019, 11:44 am IST

ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ
Apr 26, 2019, 11:25 am IST

ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಉದ್ಧವ್ ಠಾಕ್ರೆ, ನಿತಿನ್ ಗಡ್ಕರಿ, ಅಮಿತ್ ಶಾ, ನಿತೀಶ್ ಕುಮಾರ್, ಪ್ರಕಾಶ್ ಸಿಂಗ್ ಬಾದಲ್, ಪನ್ನೀರ್ ಸೆಲ್ವಂ ಸೇರಿದಂತೆ ಹಲವು ನಾಯಕರು ಭಾಗಿ
Apr 26, 2019, 11:22 am IST

ವಾರಣಾಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲವೇ ಕ್ಷಣದಲ್ಲಿ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ
Apr 26, 2019, 11:20 am IST

ನಾಮಪತ್ರ ಸಲ್ಲಿಸಲು ತೆರಳಿದ ನರೇಂದ್ರ ಮೋದಿ
Apr 26, 2019, 11:17 am IST

ಮೋದಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ವಾರಣಾಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎನ್ ಡಿಎ ನಾಯಕರು.
Apr 26, 2019, 11:00 am IST

ವಾರಣಾಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ
Apr 26, 2019, 10:51 am IST

ಕಾಲಭೈರವ ದೇವಾಲಯಕ್ಕೆ ತೆರಳಿ ದರ್ಶನ ಪಡೆದ ಪ್ರಧಾನಿ ಮೋದಿ
Apr 26, 2019, 10:39 am IST

ನಾಮಪತ್ರ ಸಲ್ಲಿಕೆಗೂ ಮುನ್ನ ವಾರಣಾಸಿಯ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
Apr 26, 2019, 10:34 am IST

ವಾರಣಾಸಿಯಲ್ಲಿ ನಡೆಯುತ್ತಿರುವ ಎನ್ ಡಿಎ ಮೈತ್ರಿಕೂಟದ ಸಭೆ
Apr 26, 2019, 10:33 am IST

ವಾರಣಾಸಿಯ ಜನರು ಪುಣ್ಯವಂತರು. ದೇಶದ ಬೇರೆಲ್ಲಾ ಕ್ಷೇತ್ರದ ಜನರಿಗೆ ಸಂಸದರನ್ನು ಆರಿಸುವ ಕರ್ತವ್ಯವಿದ್ದರೆ, ವಾರಣಾಸಿಯ ಜನರಿಗೆ ಪ್ರಧಾನಿಯನ್ನು ಆರಿಸುವ ಸೌಭಾಗ್ಯ ಸಿಕ್ಕಿದೆ- ಸುಷ್ಮಾ ಸ್ವರಾಜ್, ಬಿಜೆಪಿ ನಾಯಕಿ, ವಿದೇಶಾಂಗ ಸಚಿವೆ
Apr 26, 2019, 10:29 am IST

ಎನ್ ಡಿಎ ಮ್ಐತ್ರಿಕೂಟದ ಸಭೆಗೆ ಹಾಜರಾದ ಜೆಡಿಯು ನಾಯಕ ನಿತೀಶ್ ಕುಮಾರ್, ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
Apr 26, 2019, 10:27 am IST

ಮೊತ್ತಮೊದಲ ಬಾರಿಗೆ ಭಾರತದಲ್ಲಿ ಆಡಳಿತ ಪರ ಅಲೆಯಿದೆ: ನರೇಂದ್ರ ಮೋದಿ
Apr 26, 2019, 10:24 am IST

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು.
Apr 26, 2019, 10:24 am IST

ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಶಾಲಿನಿ ಯಾದವ್ ಎಂಬುವವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಲಿಸಿದೆ.
Apr 26, 2019, 10:24 am IST

ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಅಜಯ್ ರೈ ಅವರನ್ನು ಗುರುವಾರ ಪಕ್ಷ ಕಣಕ್ಕಿಳಲಿಸಿದೆ.
Apr 26, 2019, 10:23 am IST

ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ವಾರಣಾಸಿಯಲ್ಲಿ ಮೋದಿ ಭಾಷಣ
Apr 26, 2019, 10:23 am IST

"ನಾನೂ ಬೂತ್ ಮಟ್ಟದ ಕಾರ್ಯಕರ್ತನಾಗಿದ್ದೆ. ಪಕ್ಷದ ಪೋಸ್ಟರ್ ಗಳನ್ನು ಅಂಟಿಸುವ ಸೌಭಾಗ್ಯ ನನಗೂ ಸಿಕ್ಕಿತ್ತು. ಪ್ರತಿ ನಾಯಕರ ಗೆಲುವಿನಲ್ಲೂ ನಿಮ್ಮ(ಕಾರ್ಯಕರ್ತರ) ಅವಿರತ ಪರಿಶ್ರಮವಿದೆ"- ನರೇಂದ್ರ ಮೋದಿ
Apr 26, 2019, 10:23 am IST

ಎನ್ ಡಿಎ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+