ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೇ ನಿಜವಾದ ಚೌಕಿದಾರ, ಮೋದಿಗೆ ಆ ಪದ ಒಪ್ಪುವುದಿಲ್ಲ: ತೇಜ್ ಬಹದ್ದೂರ್

|
Google Oneindia Kannada News

Recommended Video

Varanasi Lok Sabha Elections 2019: ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ವಜಾಗೊಂಡ ಯೋಧ ಕಣದಲ್ಲಿ

ಲಕ್ನೋ, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಿರುವ ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್ ಈಗ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿ.

ಮೋದಿ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ಮುಂದಾಗಿದ್ದ ತೇಜ್ ಬಹದ್ದೂರ್ ಅವರಿಗೆ ಅಚ್ಚರಿಯ ಬೆಳವಣಿಗೆಯಲ್ಲಿ ಎಸ್‌ಪಿ ಟಿಕೆಟ್ ನೀಡಿದೆ.

'ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ. 'ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ.

ಈಗಾಗಲೇ ಚುನಾವಣಾ ಅಖಾಡಕ್ಕೆ ಧುಮುಕಿರುವ ತೇಜ್ ಬಹದ್ದೂರ್, ತಾವೇ ನಿಜವಾದ ಚೌಕಿದಾರ ಎಂದು ಹೇಳಿಕೊಂಡಿದ್ದಾರೆ.

 Lok Sabha elections 2019 i am the real chowkidar tej bahaddur yadav varanasi sp candidate

'ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಚೌಕಿದಾರ ಎಂಬ ಪದ ಮೋದಿ ಅವರಿಗೆ ಹೊಂದಿಕೆಯಾಗುವುದಿಲ್ಲ' ಎಂದು ತೇಜ್ ಬಹದ್ದೂರ್ ಹೇಳಿದ್ದಾರೆ.

ಹರಿಯಾಣದ ರೆವಾರಿ ಮೂಲದವರಾದ ತೇಜ್ ಬಹದ್ದೂರ್, ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದರು. 'ನಾನು ಯಾವುದೇ ಪಕ್ಷದ ಗುಲಾಮನಾಗಲು ಬಯಸುವುದಿಲ್ಲ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಜಯಗಳಿಸುವ ವಿಶ್ವಾಸವಿದೆ' ಎಂದು ಅವರು ಹಿಂದೆ ಹೇಳಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಎಸ್‌ಪಿ, ತನ್ನ ಅಭ್ಯರ್ಥಿ ಶಾಲಿನಿ ಯಾದವ್ ಅವರನ್ನು ಹಿಂದಕ್ಕೆ ಪಡೆದುಕೊಂಡು ತೇಜ್ ಬಹದ್ದೂರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ವಜಾಗೊಂಡ ಬಿಎಸ್‌ಎಫ್ ಸೈನಿಕ ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ವಜಾಗೊಂಡ ಬಿಎಸ್‌ಎಫ್ ಸೈನಿಕ ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ

ಬಿಎಸ್‌ಎಫ್ ಯೋಧನಾಗಿದ್ದ ತೇಜ್ ಬಹದ್ದೂರ್, ಸೇನೆಯಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಸೇನೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.

English summary
Lok Sabha elections 2019: Varasani Samajawadi Party candidate Tej Bahaddur Yadav said he is the real chowkidar. Chowkidar term doesn't suit PM Narenda Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X