ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ; ಲೋಕಸಭಾ ಉಪಚುನಾವಣೆ ಮತದಾನ ಆರಂಭ

|
Google Oneindia Kannada News

ಲಕ್ನೋ, ಜೂ. 23: ಉತ್ತರ ಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಪರಿಗಣಿತವಾಗಿರುವ ಲೋಕಸಭೆ ಕ್ಷೇತ್ರಗಳಾದ ಅಜಂಗಢ ಮತ್ತು ರಾಂಪುರದಲ್ಲಿ ಗುರುವಾರ ಬೆಳಗ್ಗೆ ಉಪ ಚುನಾವಣೆ ಮತದಾನ ಆರಂಭವಾಗಿದೆ.

35 ಲಕ್ಷಕ್ಕೂ ಹೆಚ್ಚು ಜನರು ಉಪಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಕಣದಲ್ಲಿರುವ 19 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈ ವರ್ಷದ ಅಂದರೆ 2022ರಲ್ಲಿಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜೀನಾಮೆಯಿಂದ ಅಜಂಗಢ ಕ್ಷೇತ್ರಕ್ಕೆ ಉಪ ಚುನಾವಣೆ ಈಗ ನಡೆಯುತ್ತಿದೆ.

ರಾಮ್‌ಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಕೂಡ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಗುರುವಾರ ಆರಂಭವಾಗಿದ್ದು, ಮತದಾರರು ಮತದಾನ ಮಾಡಲು ಮತಗಟ್ಟೆಗಳತ್ತ ತೆರಳಿದರು. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

Breaking: ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಆರಂಭBreaking: ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಆರಂಭ

ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಮತದಾನದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಸಾಮಾನ್ಯ ಮತ್ತು ಕೆಲವು ಹೆಚ್ಚುವರಿ ವೀಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲದೆ, 291 ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳು, 40 ವಲಯ ಮ್ಯಾಜಿಸ್ಟ್ರೇಟ್‌ಗಳು ಮತ್ತು 433 ಮೈಕ್ರೋ ವೀಕ್ಷಕರನ್ನು ಸಹ ನಿಯೋಜಿಸಲಾಗಿದೆ.

ಮತದಾನ ಭದ್ರತೆಯಿಂದ ಮತ್ತು ಶಾಂತಿಯುತವಾಗಿ ನಡೆಸಲು ಕೇಂದ್ರ ಮತ್ತು ರಾಜ್ಯ ಪೊಲೀಸ್‌ ಪಡೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇವಿಎಂ ಮತ್ತು ಸ್ಟ್ರಾಂಗ್‌ರೂಂಗಳ ಭದ್ರತೆಯ ಹೊಣೆಯನ್ನು ಕೇಂದ್ರ ಪಡೆಗಳಿಗೆ ನೀಡಲಾಗಿದೆ. ಸದ್ಯ ಅಜಂಗಢದಿಂದ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 18.38 ಲಕ್ಷ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 17. 06 ಲಕ್ಷ ಮತದಾರರಿರುವ ರಾಂಪುರದಿಂದ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರಪ್ರದೇಶ ಚುನಾವಣೆ 2022 ಹಂತ II: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿಉತ್ತರಪ್ರದೇಶ ಚುನಾವಣೆ 2022 ಹಂತ II: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿ

ರಾಂಪುರದಿಂದ ಬಿಎಸ್‌ಪಿ ಸ್ಪರ್ಧೆ ಇಲ್ಲ

ರಾಂಪುರದಿಂದ ಬಿಎಸ್‌ಪಿ ಸ್ಪರ್ಧೆ ಇಲ್ಲ

ಇತ್ತೀಚೆಗಷ್ಟೇ ರಾಂಪುರದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಕಣಕ್ಕಿಳಿಸಿದರೆ, ಎಸ್‌ಪಿ ಅಸೀಂ ರಾಜಾ ಅವರನ್ನು ಕಣಕ್ಕಿಳಿಸಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ರಾಂಪುರದಿಂದ ಈ ಬಾರಿ ಸ್ಪರ್ಧೆಗೆ ಇಳಿದಿಲ್ಲ. ಅಜಂಗಢ ಕ್ಷೇತ್ರದಲ್ಲಿ ಬಿಜೆಪಿಯ ಪ್ರಸಿದ್ಧ ಭೋಜ್‌ಪುರಿ ನಟ-ಗಾಯಕ ದಿನೇಶ್ ಲಾಲ್ ಯಾದವ್, ಎಸ್‌ಪಿಯ ಧರ್ಮೇಂದ್ರ ಯಾದವ್ ಮತ್ತು ಗುಡ್ಡು ಜಮಾಲಿ ಎಂದು ಕರೆಯಲ್ಪಡುವ ಬಿಎಸ್‌ಪಿಯ ಶಾ ಆಲಂ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.

 15 ಪ್ರತಿಶತದಷ್ಟು ಮುಸ್ಲಿಂ ಮತದಾರರು

15 ಪ್ರತಿಶತದಷ್ಟು ಮುಸ್ಲಿಂ ಮತದಾರರು

ಅಜಂಗಢದಲ್ಲಿ 18.38 ಲಕ್ಷ ಮತದಾರರಲ್ಲಿ 9,70,249 ಪುರುಷರು, 8,67,942 ಮಹಿಳೆಯರು ಮತ್ತು 36 ತೃತೀಯಲಿಂಗಿಗಳು. ಕ್ಷೇತ್ರದ 1,149 ಮತಗಟ್ಟೆಗಳಲ್ಲಿ 2,176 ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಅಂದಾಜು 15 ಪ್ರತಿಶತದಷ್ಟು ನಿವಾಸಿಗಳು ಮುಸ್ಲಿಮರಿದ್ದಾರೆ.

ಅಖಿಲೇಶ್ ಯಾದವ್‌ಗೆ 6.21 ಲಕ್ಷ ಮತ

ಅಖಿಲೇಶ್ ಯಾದವ್‌ಗೆ 6.21 ಲಕ್ಷ ಮತ

ಅಜಂಗಢ, ಮುಬಾರಕ್‌ಪುರ್, ಸಗ್ಡಿ, ಗೋಪಾಲ್‌ಪುರ ಮತ್ತು ಮೆಹ್‌ನಗರ ಈ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಗೆದ್ದಿದೆ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಮೈತ್ರಿ ಇತ್ತು. ವಿಧಾನಸಭೆ ಚುನಾವಣೆಯಲ್ಲಿ 3.61 ಲಕ್ಷ ಮತಗಳನ್ನು ಪಡೆದ ಬಿಜೆಪಿಯ ದಿನೇಶ್ ಲಾಲ್ ಯಾದವ್ 'ನಿರಾಹುವಾ' ವಿರುದ್ಧ ಅಖಿಲೇಶ್ ಯಾದವ್ 6.21 ಲಕ್ಷ ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಗೆದ್ದಿದ್ದರು.

ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಗೈರು

ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಗೈರು

ಕೇಂದ್ರ ಬಿಜೆಪಿ ನಾಯಕರು ಈ ಬಾರಿ ಪ್ರಚಾರಕ್ಕೆ ಗೈರು ಹಾಜರಾಗಿದ್ದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎರಡು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಕೇಳಿ ಪ್ರಚಾರ ನಡೆಸಿದ್ದರು. ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯಲಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಅಜಂ ಖಾನ್ 5,59,177 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಜಯಪ್ರದಾ 4,49,180 ಮತಗಳನ್ನು ಪಡೆದರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಕಪೂರ್ ಠೇವಣಿ ಕಳೆದುಕೊಂಡರು.

Recommended Video

Uddhav Thackeray ಅವರ ಸುದ್ದಿಗೋಷ್ಠಿಯ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ | *India | OneIndia Kannada

English summary
Polling began on Thursday morning in Lok Sabha constituencies, Ajangarh and Rampur, which are considered the bastion of the Samajwadi Party in Uttar Pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X