ವಾರಣಾಸಿ: ಮೋದಿಗೆ ಮುಜುಗರ ತಂದೊಡ್ಡಲು ಹೋಗಿ ಮುಖಭಂಗ ಅನುಭವಿಸಿದ ಕಾಂಗ್ರೆಸ್

Recommended Video

      Lok Sabha Elections 2019 : ಮೋದಿ ಕೊಟ್ಟ ಉತ್ತರಕ್ಕೆ ತಬ್ಬಿಬ್ಬಾದ ಕಾಂಗ್ರೆಸ್..! Oneindia Kannada

      ಕೊನೆಯ ಹಂತದಲ್ಲಿ (ಮೇ 19) ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಸೋಮವಾರಕ್ಕೆ (ಏ 29) ಮುಕ್ತಾಯಗೊಂಡಿದೆ. ಅಲ್ಲಿಗೆ, ಮೋದಿಗೆ ಪ್ರಿಯಾಂಕ ಸ್ಪರ್ಧೆಯೊಡ್ಡಬಹುದು ಎನ್ನುವ ಕುತೂಹಲಕ್ಕೂ ತೆರೆಬಿದ್ದಂತಾಗಿದೆ.

      ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ನಾಲ್ಕೈದು ದಿನ ಮುನ್ನವೇ ಕಾಂಗ್ರೆಸ್, ಅಜಯ್ ರಾಯ್ ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೂ, ಕೊನೇ ಕ್ಷಣದಲ್ಲಿ ಪ್ರಿಯಾಂಕ, ವಾರಣಾಸಿಯಿಂದ ಕಣಕ್ಕಿಳಿಯಬಹುದು ಎನ್ನುವ ಮಾತು ಕೇಳಿಬರುತ್ತಿದ್ದರಿಂದ, ಏಪ್ರಿಲ್ 29ರ ವರೆಗೂ ಈ ವಿಷಯ ಚರ್ಚೆಯ ವಿಷಯವಾಗಿತ್ತು.

      ಲೋಕಸಭಾ ಚುನಾವಣೆ ವಿಶೇಷ ಪುಟ

      ಮೋದಿ ವಿರುದ್ದ ಪ್ರಿಯಾಂಕ ಸ್ಪರ್ಧಿಸುತ್ತಾರೆ ಎನ್ನುವ ವಿಷಯ ದೊಡ್ಡಮಟ್ಟದ ಚರ್ಚೆಯ ವಿಷಯವಾದಾಗ, ಅದಕ್ಕೆ ಹೌದು ಅಥವಾ ಇಲ್ಲ ಎನ್ನದೇ, ಕುತೂಹಲ ಹಾಗೇ ಇರಲಿ ಎಂದು ರಾಹುಲ್ ಗಾಂಧಿ ಹೇಳಿ, ಈಗ ಸುಮ್ಮನೆ ಬಿಜೆಪಿಗೆ ಆಹಾರದ ವಿಷಯವಾಗಿದ್ದಾರೆ.

      ನಾನ್ಯಾಕೆ ಸ್ಪರ್ಧಿಸಬಾರದು ಎನ್ನುವ ಹೇಳಿಕೆಯನ್ನು ನೀಡಿದ್ದ ಪ್ರಿಯಾಂಕ ಕೂಡಾ ಬಿಜೆಪಿಯ ವ್ಯಂಗ್ಯಕ್ಕೆ ಈಗ ನಿರುತ್ತರರಾಗಿದ್ದಾರೆ. 2014ರ ಚುನಾವಣೆಯಲ್ಲೂ ಮೋದಿ ವಿರುದ್ದ ಸ್ಪರ್ಧಿಸಿ ಎಂಬತ್ತು ಸಾವಿರ ಮತ ಪಡೆಯಲೂ ವಿಫಲರಾಗಿದ್ದ ಅಜಯ್ ರಾಯ್ ಅವರನ್ನು ಮತ್ತೆ ಕಣಕ್ಕಿಳಿಸಿ, ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದಂತಿದೆ ಎನ್ನುವುದು ರಾಜಕೀಯ ಪಂಡಿತರ ಅಂಬೋಣ..

      ಏನೋ ಮಾಡಲು ಹೋಗಿ ಮುಖಭಂಗ ಅನುಭವಿಸಿದ ಕಾಂಗ್ರೆಸ್

      ಏನೋ ಮಾಡಲು ಹೋಗಿ ಮುಖಭಂಗ ಅನುಭವಿಸಿದ ಕಾಂಗ್ರೆಸ್

      ಪ್ರಿಯಾಂಕ ಗಾಂಧಿ ಸ್ಪರ್ಧಿಸುವ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ಈಗ ಬಿಜೆಪಿಯಿಂದ ಆಡಿಸಿಕೊಳ್ಳಬೇಕಾಗಿರಲಿಲ್ಲ. ರಾಹುಲ್, ಪ್ರಿಯಾಂಕ, ಅಷ್ಟೇ ಯಾಕೆ ರಾಬರ್ಟ್ ವಾಧ್ರಾ ಕೂಡಾ ತನ್ನ ಪತ್ನಿ ಸ್ಪರ್ಧಿಸುವ ವಿಚಾರದಲ್ಲಿ ಅಡ್ದಗೋಡೆಯ ಮೇಲೆ ದೀಪವಿಟ್ಟ ಹಾಗೇ ಹೇಳಿಕೆ ನೀಡಿ, ಕಾಂಗ್ರೆಸ್ ಕಾರ್ಯಕರ್ತರನ್ನೂ ಹುರಿದುಂಬಿಸುವ ಕೆಲಸವನ್ನು ಮಾಡಿದ್ದರು.

      ಪ್ರಿಯಾಂಕ ಹೆಸರನ್ನು ತೇಲಿಬಿಟ್ಟು ಮುಂದೆ ಬಿಜೆಪಿಯ ನಡೆ ಏನು ಇರಬಹುದು

      ಪ್ರಿಯಾಂಕ ಹೆಸರನ್ನು ತೇಲಿಬಿಟ್ಟು ಮುಂದೆ ಬಿಜೆಪಿಯ ನಡೆ ಏನು ಇರಬಹುದು

      ಪ್ರಿಯಾಂಕ ಹೆಸರನ್ನು ತೇಲಿಬಿಟ್ಟು ಮುಂದೆ ಬಿಜೆಪಿಯ ನಡೆ ಏನು ಇರಬಹುದು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಈ ತಂತ್ರಗಾರಿಕೆ ಬಳಸಿಕೊಂಡಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ಒಂದು ವೇಳೆ, ವಾರಣಾಸಿ ಹೊರತಾಗಿ ಇನ್ನೊಂದು ಕ್ಷೇತ್ರದಲ್ಲೂ ಸ್ಪರ್ಧೆಗೆ ಮೋದಿ ಮುಂದಾಗಿದ್ದೇ ಆದಲ್ಲಿ, ವಾರಣಾಸಿಯಲ್ಲಿ ಸೋಲುವ ಭಯದಿಂದ, ಇನ್ನೊಂದು ಕ್ಷೇತ್ರದಲ್ಲಿ ಪ್ರಧಾನಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ಮೈಲೇಜ್ ತೆಗೆದುಕೊಳ್ಳಲು, ಕಾಂಗ್ರೆಸ್ ಬಯಸಿತ್ತು ಎನ್ನಲಾಗುತ್ತಿದೆ.

      ಕಾಂಗ್ರೆಸ್ಸಿನ 'ವೈಟ್ ಎಂಡ್ ವಾಚ್' ತಂತ್ರಗಾರಿಕೆ, ಬಿಜೆಪಿಗೆ ಸುಮ್ಮನೆ ಆಹಾರದ ವಸ್ತು

      ಕಾಂಗ್ರೆಸ್ಸಿನ 'ವೈಟ್ ಎಂಡ್ ವಾಚ್' ತಂತ್ರಗಾರಿಕೆ, ಬಿಜೆಪಿಗೆ ಸುಮ್ಮನೆ ಆಹಾರದ ವಸ್ತು

      ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿ, ವ್ಯಾಪಕ ಪ್ರತಿಕ್ರಿಯೆ ಬಂದ ನಂತರ, ಕಾಂಗ್ರೆಸ್ ಅದಕ್ಕೆ ತೇಪೆಹಚ್ಚುವ ಕೆಲಸಕ್ಕೆ ಮುಂದಾಗಿದೆ. ಪಕ್ಷದ ಎಲ್ಲಾ ಜವಾಬ್ದಾರಿಯನ್ನು ಅಧ್ಯಕ್ಷ ರಾಹುಲ್ ಗಾಂಧಿಯವರೇ ತೆಗೆದುಕೊಳ್ಳುವುದು ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರು ನೀಡುತ್ತಿದ್ದಾರೆ. ಕಾಂಗ್ರೆಸ್ಸಿನ 'ವೈಟ್ ಎಂಡ್ ವಾಚ್' ತಂತ್ರಗಾರಿಕೆ, ಬಿಜೆಪಿಗೆ ಸುಮ್ಮನೆ ಆಹಾರದ ವಸ್ತುವಾಗಿದ್ದಂತೂ ಹೌದು.

      ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ

      ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ

      ಸ್ಪರ್ಧಿಸುವ ವಿಚಾರ, ಪ್ರಿಯಾಂಕ ಅವರ ಸ್ವಂತದ ನಿರ್ಧಾರ ಎಂದು ಕೆಲವು ಕಾಂಗ್ರೆಸ್ ಮುಖಂಡರು ಹೇಳಿದರೆ, ಇಲ್ಲ ಅದು ನನ್ನ ವೈಯಕ್ತಿಕ ನಿರ್ಧಾರವಲ್ಲ, ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ ಎನ್ನುವ ಹೇಳಿಕೆಯನ್ನು ಪ್ರಿಯಾಂಕ ಹೇಳುವ ಮೂಲಕ, ಕಾಂಗ್ರೆಸ್ಸಿಗೆ ಇನ್ನಷ್ಟು ಮುಜುಗರವನ್ನುಂಟು ಮಾಡಿದ್ದಾರೆ.

      ರಾಹುಲ್ ಮತ್ತು ಅಖಿಲೇಶ್ ಗೆ ನಿಜವಾಗಲೂ ಮೋದಿಗೆ ಪೈಪೋಟಿ ನೀಡಬೇಕೆಂದು ಇದೆಯಾ?

      ರಾಹುಲ್ ಮತ್ತು ಅಖಿಲೇಶ್ ಗೆ ನಿಜವಾಗಲೂ ಮೋದಿಗೆ ಪೈಪೋಟಿ ನೀಡಬೇಕೆಂದು ಇದೆಯಾ?

      ಕೊನೆಯ ಕ್ಷಣದಲ್ಲಿ ಸಮಾಜವಾದಿ ಪಕ್ಷ, ಯೋಧ ತೇಜ್ ಬಹಾದ್ದೂರ್ ಗೆ ಮೋದಿ ವಿರುದ್ದ ಸ್ಪರ್ಧಿಸಲು ಟಿಕೆಟ್ ನೀಡಿದೆ. ಇವರಿಗೆ ಬಹಿರಂಗ ಪ್ರಚಾರ ನಡೆಸಲು ಇರುವುದು ಕೇವಲ ಹತ್ತೊಂಬತ್ತು ದಿವಸ, ಒಂದು ಕಡೆ ಮೋದಿ, ಇನ್ನೊಂದೆಡೆ ಕಾಂಗ್ರೆಸ್ ಮತ್ತು ಎಸ್ಪಿ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಗೆ ನಿಜವಾಗಲೂ ಮೋದಿಗೆ ಪೈಪೋಟಿ ನೀಡಬೇಕೆಂದಿದ್ದರೆ, ಯಾರಾದರೊಬ್ಬರು ತಮ್ಮ ಅಭ್ಯರ್ಥಿಯ ನಾಮಪತ್ರವನ್ನು ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದರೆ ಮೋದಿ ವಿರುದ್ದದ ಇವರ ಹೋರಾಟ, 'ದೊಡ್ಡ ಡ್ರಾಮಾ' ಎಂದು ಜನ ಕರೆಯದೇ ಇರುತ್ತಾರಾ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+