• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5ನೇ ಬಾರಿಯೂ ಕನಿಕಾ ಕಪೂರ್‌ಗೆ ಕೊರೊನಾ ಪಾಸಿಟಿವ್ ಫಲಿತಾಂಶ

|

ಲಕ್ನೌ, ಏಪ್ರಿಲ್ 1: ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಐದನೇ ಬಾರಿಯೂ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಕನಿಕಾ ಕಪೂರ್ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ಆರೋಗ್ಯವಾಗಿದ್ದಾರೆ. ಆದಷ್ಟೂ ಬೇಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕೊರೊನಾ ರೋಗಿಗಳಿಗೆ ಪ್ರತಿ 48 ಗಂಟೆಗೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಹೀಗೆ, ಕನಿಕಾ ಕಪೂರ್‌ ಅವರನ್ನು ಐದು ಬಾರಿ ಟೆಸ್ಟ್ ಮಾಡಲಾಗಿದ್ದು, ಐದು ಸಲವೂ ಪಾಸಿಟಿವ್ ಬಂದಿದೆ. ಹಾಗಾಗಿ, ಅವರ ಚಿಕಿತ್ಸೆ ಮುಂದುವರಿಯಲಿದೆ ಎಂದು ಸಂಜಯ್ ಗಾಂಧಿ ಆಸ್ಪತ್ರೆಯವರು ತಿಳಿಸಿದ್ದಾರೆ.

ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ

ಕನಿಕಾ ಕಪೂರ್ ಐಸೋಲೇಶನ್‌ ವಾರ್ಡ್‌ನಿಂದ ಹೊರಬರಬೇಕಾದರೆ, ಎರಡು ಬಾರಿ ನೆಗಿಟಿವ್ ಫಲಿತಾಂಶ ಬರಬೇಕು.

ಕ್ವಾರೆಂಟೈನ್‌ ವಾರ್ಡ್‌ನಲ್ಲಿರುವ ಕನಿಕಾ ಕಪೂರ್ ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದರು. ''ನಾನು ಐಸಿಯುನಲ್ಲಿ ಇದ್ದೀನಿ ಎಂಬುದು ಸುಳ್ಳು. ನಮ್ಮ ಶುಭಾಶಯ, ಹಾರೈಕೆಯಿಂದ ಸುರಕ್ಷಿತೆಯಾಗಿದ್ದೀನಿ. ಮುಂದಿನ ಪರೀಕ್ಷೆಯಲ್ಲಿ ನನಗೆ ನೆಗಿಟಿವ್ ಬರುತ್ತೆ ಎಂಬ ಆತ್ಮವಿಶ್ವಾಸವಿದೆ'' ಎಂದು ಕನಿಕಾ ಕಪೂರ್ ಬರೆದುಕೊಂಡಿದ್ದಳು.

ಕೊರೊನಾ ಸೋಂಕಿತೆ ಕನಿಕಾ ಜೊತೆ ಪಾರ್ಟಿಯಲ್ಲಿದ್ದ ವಸುಂಧರಾ ರಾಜೇ ಸೇಫ್

ಲಂಡನ್‌ನಿಂದ ಮಾರ್ಚ್ 9 ರಂದು ಮುಂಬೈಗೆ ಬಂದಿಳಿದಿದ್ದ ಕನಿಕಾ ಕಪೂರ್, ಒಂದು ದಿನ ಹೋಟೆಲ್‌ನಲ್ಲಿ ಉಳಿದಿದ್ದರು. ಬಳಿಕ, ಲಕ್ನೌನಲ್ಲಿರುವ ನಿವಾಸಕ್ಕೆ ಮರುಳಿದಿದ್ದರು. ನಂತರ ಮೂರು ಪಾರ್ಟಿಗಳಲ್ಲಿ ಕನಿಕಾ ಭಾಗವಹಿಸಿದ್ದರು. ಮಾರ್ಚ್ 20 ರಂದು ಕನಿಕಾಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿತ್ತು.

English summary
Bollywood singer kanika kapoor tested positive for coronavirus fifth time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X