ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣನ ಗೋವರ್ಧನ ಗಿರಿ ಕಲ್ಲು ಆನ್ಲೈನ್‌ನಲ್ಲಿ ಮಾರಾಟ!

|
Google Oneindia Kannada News

ಮಥುರಾ, ಫೆಬ್ರವರಿ 8: ಶ್ರೀಕೃಷ್ಣಪರಮಾತ್ಮನ ಲೀಲೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಗೋವರ್ಧನ ಗಿರಿಯ ಕಲ್ಲುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಯತ್ನಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಇ ಕಾಮರ್ಸ್ ತಾಣ ಇಂಡಿಯಾಮಾರ್ಟ್ ಸಿಇಒ ಸೇರಿದಂತೆ ಮೂವರ ವಿರುದ್ಧ ಮಧುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ.

ಹಿಂದುಗಳ ಪಾಲಿನ ಪವಿತ್ರ ಯಾತ್ರಾಸ್ಥಳ ಮಥುರಾದಲ್ಲಿರುವ ಗೋವರ್ಧನ ಗಿರಿಯಿಂದ ಆಯ್ದ ಶಿಲೆಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇ ಕಾಮರ್ಸ್ ಸಂಸ್ಥೆ ಸಿಇಒ ಹಾಗೂ ಪೂರೈಕೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿ, ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮೀಣ ವಿಭಾಗದ ಎಸ್ಪಿ ಶಿರೀಶ್ ಚಂದ್ರ ಹೇಳಿದ್ದಾರೆ.

ಇಂಡಿಯಾಮಾರ್ಟ್ ಸಿಇಒ ದಿನೇಶ್ ಅಗರವಾಲ್, ಸಹ ಸ್ಥಾಪಕ ಬ್ರಜೇಶ್ ಅಗರವಾಲ್ ಹಾಗೂ ಮಥುರಾ ಮೂಲದ ಪೂರೈಕೆದಾರ ಅಂಕುರ್ ಅಗರವಾಲ್ ಎಂಬುವರ ಮೇಲೆ ಐಪಿಸಿ ಸೆಕ್ಷನ್ 265, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ರ ಅನ್ವಯ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ಮಥುರಾದ ಸಾಮಾಜಿಕ ಕಾರ್ಯಕರ್ತ ಕೇಶವ್ ಮುಖಿಯಾ ಎಂಬುವರು ಗೋವರ್ಧನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಅನೇಕ ಸ್ಥಳೀಯರು ದೂರು ನೀಡಿದ್ದಾರೆ ಎಂದು ಎಸ್ಪಿ ಶಿರೀಶ್ ಹೇಳಿದರು.

IndiaMART CEO, two others booked for selling Govardhan Hill rocks online, probe underway

ಗೋವರ್ಧನ ಗಿರಿ ಶಿಲೆ ಬೆಲೆ ಎಷ್ಟು?
ಇದು ನೈಸರ್ಗಿಕ ಶಿಲೆ ಎಂಬ ಅಡಿಬರಹದೊಂದಿಗೆ ಶಿಲೆಯ ಚೂರೊಂದಕ್ಕೆ 5,175 ರು ಬೆಲೆ ಕಟ್ಟಲಾಗಿದೆ. ಆನ್ ಲೈನ್ ನಲ್ಲಿ ಈ ಬಗ್ಗೆ ಹೆಚ್ಚಿನ ಪ್ರಸಾರವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಶಿರೀಶ್ ತಿಳಿಸಿದರು.

''ಶ್ರೀಕೃಷ್ಣ ನೆಲೆಸಿರುವ ಗೋವರ್ಧನ ಗಿರಿಯನ್ನು ಮಾರುವುದೆಂದರೆ ಕೃಷ್ಣನನ್ನು ಮಾರಾಟಕ್ಕೆ ಇಟ್ಟಿದ್ದಂತೆ, ಗೋವರ್ಧನವನ್ನು ಮಾರಲು ಯತ್ನಿಸಿದವರನ್ನು ಕೃಷ್ಣನೇ ನೋಡಿಕೊಳ್ಳುತ್ತಾನೆ'' ಎಂದು ಮಥುರಾದ ಸಂತ ಸಿಯಾರಾಮ್ ಬಾಬಾ ಪ್ರತಿಕ್ರಿಯಿಸಿದ್ದಾರೆ. ಉತ್ತರಪ್ರದೇಶ ಬ್ರಾಹ್ಮಣ ಮಹಾಸಭಾದ ಸದಸ್ಯರು ಮಥುರಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಘಟನೆ ಬಗ್ಗೆ ಚರ್ಚಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಕೋರಲು ಮುಂದಾಗಿದ್ದಾರೆ.

English summary
Three men, including the CEO of an e-commerce site, were booked on Sunday for allegedly putting up for sale online of rocks taken from the Govardhan Hill here, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X