• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

|

ನವದೆಹಲಿ, ಮಾರ್ಚ್ 03: ಅತ್ಯಂತ ಜನಪ್ರಿಯ ಆಯುಧ ಎಕೆ 47 ಹೋಲುವ ಎಕೆ -203 ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ರಷ್ಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತವು ಸುಮಾರು 7,50,000 ರೈಫಲ್ ಗಳನ್ನು ಉತ್ಪಾದಿಸಿ ಭಾರತೀಯ ಭದ್ರತಾ ಪಡೆಗಳ ಬಳಕೆಗೆ ನೀಡಲಾಗುತ್ತದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆ ಬಳಸುತ್ತಿರುವ INSAS ರೈಫಲ್ ಗಳನ್ನು ಬದಲಾಯಿಸಿ ಎಕೆ 203ಗಳನ್ನು ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪ್ಯಾರಾ ಮಿಲಿಟರಿ ಹಾಗೂ ರಾಜ್ಯದ ಪೊಲೀಸ್ ಪಡೆಗಳಿಗೂ ನೀಡಲಾಗುತ್ತದೆ. ಮುಂಬರುವ 15 ರಿಂದ 20 ವರ್ಷಗಳಲ್ಲಿ ಭಾರತದ ಎಲ್ಲಾ ಭದ್ರತಾ ಪಡೆಗಳ ಕೈಲಿ ಎಕೆ 203 ರೈಫಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಅಮೆರಿಕದ ಸಿಗ್ ಸಾರ್ ಜತೆ ಒಪ್ಪಂದ ಮಾಡಿಕೊಂಡಿದ್ದು, 7.69 ಎಂಎಂ 59 ಕ್ಯಾಲಿಬೆರ್ ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲಾಗುತ್ತಿದೆ.

ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?

ಗಡಿಯಲ್ಲಿ ಉಗ್ರರು ಹಾಗೂ ಪಾಕಿಸ್ತಾನದ ನಡುವಿನ ಶೀತಲ ಸಮರದಲ್ಲಿ ತಕ್ಕ ಉತ್ತರ ನೀಡಲು ಭದ್ರತಾ ಪಡೆಗೆ ಅತ್ಯಾಧುನಿಕ ಆಯುಧವನ್ನು ನೀಡುವುದು ಮುಖ್ಯ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಎಕೆ 47: 2015ರ ಆರಂಭದಲ್ಲೇ ಅಲೆಕ್ಸಿ ಕ್ರಿವೋರುಚಾಕೋ ಅವರು ಕಲಷ್ನಿಕೋವ್ ರೈಫಲ್ ಅನ್ನು ಭಾರತಕ್ಕೆ ತರಲು ಯತ್ನಿಸಿದ್ದರು. 5.56 ಎಂಎಂ ಹಾಗೂ 7.62 ಎಂಎಂ ಸ್ವಯಂಚಾಲಿತ ರೈಫಲ್ ಗೆ ಭಾರತದಲ್ಲಿ ಬೇಡಿಕೆ ಇದೆ.

20ನೇ ಶತಮಾನದ ಆವಿಷ್ಕಾರಗಳಲ್ಲಿ ಒಂದೆನಿಸಿರುವ ಎಕೆ 47 ಆಯುಧ ರಫ್ತು ಮಾಡುವುದನ್ನು ರಷ್ಯಾ ಎಂದೋ ನಿಲ್ಲಿಸಿಬಿಟ್ಟಿದೆ. 1946-47ರಲ್ಲಿ ಮಿಕೈಲ್ ಕಲಷ್ನಿಕೋವ್ ವಿನ್ಯಾಸಗೊಳಿಸಿದ ಎಕೆ 47 ರೈಫಲ್ ಗಳು ವಿಶ್ವದ ಅತ್ಯಂತ ಜನಪ್ರಿಯ ಆಯುಧಗಳಲ್ಲಿ ಒಂದಾಗಿದೆ. ಹಲವು ದೇಶಗಳ ಅಧಿಕೃತ ಸುರಕ್ಷತಾ ಪಡೆಗಳ ಕೈಗಳಲ್ಲಿ ಇರಬೇಕಾದ ಎಕೆ 47, ವಿಧ್ವಂಸಕ ಕೃತ್ಯ ಎಸಗುವವರ ಕೈಸೇರುತ್ತಿದೆ ಎಂಬುದು ಸರ್ವವಿದಿತ.

English summary
AK-203 is the latest derivative of the legendary AK 47 rifle. India has signed a deal with a Russian firm to manufacture 7,50,000 of these assault files which would be given to the Army's infantry troops. Modi will inaugurate manufacturing facility in Amethi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X