ಉತ್ತರ ಪ್ರದೇಶದಲ್ಲಿ 47 ಡಿಗ್ರಿ ಸೆಲ್ಸಿಯಸ್ ತಾಪಮಾನ: 20 ವರ್ಷಗಳಲ್ಲೇ ಅಧಿಕ

ಪ್ರಯಾಗ್‌ರಾಜ್, ಏಪ್ರಿಲ್ 29: ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಗರಿಷ್ಟ ಮಟ್ಟಕ್ಕೆ ಏರಿಕೆಯಾಗಿದೆ. ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗರಿಷ್ಟ 47 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದ್ದು, ಇದು 20 ವರ್ಷಗಳಲ್ಲಿ ಏಪ್ರಿಲ್‌ನಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ.

1999 ಏಪ್ರಿಲ್ 30 ರಂದು ಗರಿಷ್ಟ ತಾಪಮಾನ 46.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು, ಇದಾದ ಬಳಿಕ 2020ರಲ್ಲಿ 43.7 ಸೆಲ್ಸಿಯಸ್‌ ನಷ್ಟು ಹಾಗೂ 2021 ರಲ್ಲಿ 44.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಈ ವರ್ಷ 47 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏರಿಕೆಯಾಗಿದ್ದು, ಬಿಸಿಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ.

ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಶುಕ್ರವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, ಆದರೆ ಮೇ 2 ರಿಂದ 4ರವರೆಗೆ ರಾಜಸ್ಥಾನ, ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಲಘು ಮಳೆಯಾಗುವ ಮುನ್ಸೂಚನೆ ಇದೆ. ಆ ಸಮಯದಲ್ಲಿ ನಗರದಲ್ಲಿ 36 ರಿಂದ 39 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

Heat Wave in India : UPs Prayagraj Hits Record 47 Degrees on April 29

ದೇಶದಲ್ಲಿ ತಾಪಮಾನದ ಹೆಚ್ಚಳದ ಜೊತೆಗೆ ಕಲ್ಲಿದ್ದಲೂ ಪೂರೈಕೆ ಕೂಡ ಕುಂಠಿತವಾಗಿದೆ. ಇದರಿಂದ ವಿದ್ಯುತ್ ಬಿಕ್ಕಟ್ಟು ಉಂಟಾಗಿದ್ದು, ಜನರು ಬಿಸಿಗಾಳಿಯ ಜೊತೆಗೆ ವಿದ್ಯುತ್‌ ಇಲ್ಲದೆಯೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ದೆಹಲಿಯಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ, ಮೆಟ್ರೋ ಓಡಾಟ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

Heat Wave in India : UPs Prayagraj Hits Record 47 Degrees on April 29

ಮಾರ್ಚ್ ಕೊನೆಯ ವಾರದಿಂದ ವಾಯುವ್ಯ ಭಾರತದಲ್ಲಿ ತಾಪಮಾನ ಮಟ್ಟ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ. ಈ ವರ್ಷ ಬೇಸಿಗೆ ಕಾಲ ಬೇಗನೇ ಆರಂಭವಾಗಿದ್ದು, ಹಲವು ರಾಜ್ಯಗಳು ಬಿಸಿಲಿನ ತಾಪಮಾನಕ್ಕೆ ಕಂಗೆಟ್ಟಿದೆ. ಬಿಸಿಗಾಳಿಯ ಪರಿಣಾಮ ಜನರಿಗೆ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿದೆ. ಮಕ್ಕಳು, ವೃದ್ದರಿಗೆ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುವವರಿಗೆ ಈ ವಾತಾವರಣ ಕೆಟ್ಟ ಪರಿಣಾಮ ಬೀರಲಿದ್ದು, ಮುಂಜಾಗ್ರತ ಕ್ರಮ ವಹಿಸುವಂತೆ ಐಎಂಡಿ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+