• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹತ್ರಾಸ್ ಅತ್ಯಾಚಾರ ಆರೋಪಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸಂತ್ರಸ್ತೆ ಸಹೋದರ

|

ಹತ್ರಾಸ್, ಅಕ್ಟೋಬರ್ 08: ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಸಹೋದರ ಮತ್ತು ಆರೋಪಿಗಳ ಕರೆ ದಾಖಲೆಗಳು ಬೆಳಕಿಗೆ ಬಂದ ಬಳಿಕ ತನ್ನ ವಿರುದ್ಧದ ಎಲ್ಲಾ ಆರೋಪವನ್ನು ನಿರಾಕರಿಸಿದ್ದಾರೆ.

ಪೊಲೀಸರು ನೀಡಿರುವ ದೂರವಾಣಿ ನನಗೆ ಸೇರಿದ್ದ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.ಹಾಗೆಯೇ ಪೊಲೀಸರು ತೋರಿಸುತ್ತಿರುವ ದೂರವಾಣಿ ಸಂಖ್ಯೆ ತನ್ನ ತಂದೆಗೆ ಸೇರಿದೆ. ಆರೋಪಿಯೊಂದಿಗೆ ಯಾರೂ ಸಂಪರ್ಕಹೊಂದಿಲ್ಲ. ಇಲ್ಲ ಈ ಸಂಖ್ಯೆ ನನ್ನ ಹೆಸರಿನಲ್ಲಿಲ್ಲ, ಅದು ಹಳೆಯ ಸಿಮ್ ಕಾರ್ಡ್ ಅದು ನನ್ನ ತಂದೆಯ ಬಳಿ ಇದೆ, ಅದು ಯಾವಾಗಲೂ ನನ್ನ ತಂದೆಯೊಂದಿಗೆ ಇರುತ್ತದೆ, ಆ ಮೊಬೈಲ್ ಬೇರೆ ಯಾರೂ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ಇದಕ್ಕೂ ಮುನ್ನ, ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಸಹೋದರ ಮತ್ತು ತಾಯಿಯೇ 19 ವರ್ಷದ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ನಾಲ್ವರೂ ಆರೋಪಿಗಳೂ ಈ ಪತ್ರಕ್ಕೆ ಸಹಿ ಹಾಕಿದ್ದು, ಈ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಆದರೂ ಸಹ ನಮ್ಮನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸುಳ್ಳು ಆರೋಪಗಳೊಂದಿಗೆ ಸಿಲುಕಿಸಲಾಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸಂದೀಪ್, ರಾಮು, ಲವಕುಶ್ ಹಾಗೂ ರವಿ ಅವರುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರ ಬರೆದಿದ್ದು, ಹೆಬ್ಬೆಟ್ಟು ಹಾಕಿದ್ದಾರೆ.

ಸಂತ್ರಸ್ತೆಯ ಪರಿಚಯ ನನಗೆ ಇತ್ತು. ಆಕೆಯೊಂದಿಗೆ ದೀರ್ಘಕಾಲದಿಂದಲೂ ಸಂಪರ್ಕದಲ್ಲಿದ್ದೆ. ಆದರೆ ಈ ಕೊಲೆ ಅಥವಾ ಅತ್ಯಾಚಾರವನ್ನು ನಾನು ಮಾಡಿಲ್ಲ.

ನಾನು ಸಂತ್ರಸ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆಕೆಯ ಸಾವಿಗೆ ಆಕೆಯ ಸಹೋದರ ಹಾಗೂ ತಾಯಿಯೇ ಕಾರಣ, ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಲಾಗಿದೆ ಎಂದು ಆರೋಪಿ ಸಂದೀಪ್ ಪತ್ರದಲ್ಲಿ ತಿಳಿಸಿದ್ದಾನೆ

English summary
Days after the call records of the Hathras gang-rape victim's brother and the accused came to the fore, the former has denied all allegations made against him. The victim's brother has alleged that phone number shared by the police does not belong to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X