PUBG ಬೆಳೆಸಿದ ಪ್ರೀತಿ: ಗಂಡನಿಗೆ ಟಾಟಾ ಪ್ರಿಯಕರನ ಜೊತೆ ಪತ್ನಿ ಓಟ
ಮಹಾರಾಜ್‌ಗಂಜ್, ಮಾರ್ಚ್ 17: ಯುಪಿಯ ಮಹಾರಾಜ್‌ಗಂಜ್‌ನಲ್ಲಿ PUBG ಗೇಮ್‌ಗೆ ಸಂಬಂಧಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅಚ್ಚರಿ ಮೂಡಿಸಿದೆ. ಇಲ್ಲಿ ವಿವಾಹಿತ ಮಹಿಳೆಯೊಬ್ಬರು ಮೊಬೈಲ್ ನಲ್ಲಿ PUBG ಗೇಮ್ ಆಡುತ್ತಿದ್ದಾಗ ಯುವಕನೊಬ್ಬನನ್ನು ಪ್ರೀತಿಸಿದ್ದಾಳೆ. ಮಹಿಳೆ PUBG ಪ್ಲೇಯರ್ ಅನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತಿದ್ದಾಳೆಂದರೆ, ಅವಳು ತನ್ನ ಗಂಡನನ್ನು ಬಿಟ್ಟು ಬಿಹಾರದಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋಗಿದ್ದಳು. ಇತ್ತ ಪತಿಗೆ ಎಲ್ಲಿಯೂ ಮಹಿಳೆ ಸಿಗದೇ ಇದ್ದಾಗ ಪೊಲೀಸರ ನೆರವು ಕೋರಿದ್ದಾರೆ. ಪೊಲೀಸರ ನೆರವಿನಿಂದ ಪತ್ನಿ ಪತ್ತೆಯಾದರೂ ಆಕೆಯ ನಾಪತ್ತೆಯಾದ ಸತ್ಯಾಂಶ ಬೆಳಕಿಗೆ ಬಂದಾಗ ಪತಿ ಬೆಚ್ಚಿಬಿದ್ದಿದ್ದಾನೆ.
ವಾಸ್ತವವಾಗಿ ಮಹಿಳೆಗೆ ಮೊಬೈಲ್‌ನಲ್ಲಿ PUBG ಆಟವಾಡಲು ಇಷ್ಟವಾಗಿತ್ತು. ಅವಳು ಹಲವಾರು ಗಂಟೆಗಳ ಕಾಲ ಫೋನ್‌ನಲ್ಲಿ PUBG ಅನ್ನು ಪ್ಲೇ ಮಾಡಿ ಆಡುತ್ತಿದ್ದಳು. ಈ ಸಮಯದಲ್ಲಿ ಆಕೆ ಬಿಹಾರದಲ್ಲಿ ವಾಸಿಸುವ ಪಬ್ಜಿ ಆಟಗಾರನಿಗೆ ತನ್ನ ಹೃದಯವನ್ನು ನೀಡಿದ್ದಾಳೆ. ಪ್ರೇಮ ಎಷ್ಟರಮಟ್ಟಿಗೆ ಅರಳಿತೆಂದರೆ ವಿವಾಹಿತ ಮಹಿಳೆ ತನ್ನ ಪತಿಯನ್ನು ತೊರೆದು ಬಿಹಾರ ತಲುಪಿ ತನ್ನ ಪಬ್ಜಿ ಪ್ಲೇಯರ್ ಪ್ರಿಯಕರನನ್ನು ಭೇಟಿಯಾಗಲು ಸುಮಾರು 350 ಕಿ.ಮೀ ಪ್ರಯಾಣಿಸಿದ್ದಾಳೆ. ತಾನು ಪ್ರಯಾಣಿಸುವ ಬಗ್ಗೆ ತನ್ನ ಪತಿಗೂ ಮಾಹಿತಿ ನೀಡಿಲ್ಲ.

ಪಬ್ಜಿ ಪ್ರಿಯಕರನೊಂದಿಗೆ ಪತ್ನಿ ಪಲಾಯನ
ಅಸಲಿಗೆ ಪತ್ನಿ ಹೀಗೆ ಪರ ಪುರುಷನನ್ನು ಪ್ರೀತಿಸುವ ಹಾಗೂ ಅವನೊಂದಿಗೆ ಪಬ್ಜಿ ಆಡಿದ ಯಾವುದೇ ಮಾಹಿತಿ ಪತಿಗೆ ಇರಲಿಲ್ಲ. ತನ್ನ ಕೆಲಸದ ನಿಮಿತ್ಯ ಹೊರಗೋಗಿದ್ದ ಪತಿಗೆ ಮನೆಗೆ ಮರಳಿ ಬಂದಾಗ ಪತ್ನಿ ಇರದೇ ಇರುವುದು ಆತಂಕ ಮೂಡಿಸಿತ್ತು. ತನ್ನ ಸಂಬಂಧಿಕರಿಗೆ ಹಾಗೂ ಪತ್ನಿಯ ಮನೆ ಸಂಬಂಧಿಕರಿಗೆಲ್ಲಾ ಕರೆ ಮಾಡಿ ಪತ್ನಿ ಬಗ್ಗೆ ವಿಚಾರಿಸಿದ್ದಾನೆ. ಆದರೂ ಹೆಂಡತಿ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಗಾಬರಿಗೊಂಡ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪೊಲೀಸರ ಹುಡುಕಾಟ
ವಿಷಯವು ಮಹಾರಾಜ್‌ಗಂಜ್ ಜಿಲ್ಲೆಯ ಶ್ಯಾಮ್‌ದೇರ್ವಾ ಪೊಲೀಸ್ ಠಾಣೆ ವ್ಯಾಪ್ತಿಯದ್ದಾಗಿದೆ. ಇಲ್ಲಿ ವಾಸಿಸುವ ವಿವಾಹಿತ ಮಹಿಳೆ ಮಾರ್ಚ್ 3 ರಂದು ತನ್ನ ಪಬ್ಜಿ ಪ್ಲೇಯರ್ ಪ್ರೇಮಿಯನ್ನು ಭೇಟಿ ಮಾಡಲು ಬಿಹಾರಕ್ಕೆ ತೆರಳಿದ್ದಳು. ಎಲ್ಲಿಯೂ ಪತ್ನಿ ಪತ್ತೆಯಾಗದಿದ್ದಾಗ ಪತಿ ಶ್ಯಾಮದೇರ್ವ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪತಿ ದೂರಿನ ಮೇರೆಗೆ ಪೊಲೀಸರು ಆತನ ಪತ್ನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮಹಿಳೆ ಆಗಾಗ್ಗೆ ಮೊಬೈಲ್‌ನಲ್ಲಿ PUBG ಗೇಮ್ ಆಡುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಮಯದಲ್ಲಿ ಅವರು ಬಿಹಾರದ ಮುಜಾಫರ್‌ಪುರದಲ್ಲಿ ವಾಸಿಸುವ PUBG ಪ್ಲೇಯರ್‌ನೊಂದಿಗೆ ಮಾತನಾಡುತ್ತಿದ್ದರು ಎಂದು ತನಿಖೆಯಿಂದ ವಿಚಾರ ತಿಳಿದು ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿ ಮಹಿಳೆಯನ್ನು ವಶಪಡಿಸಿಕೊಂಡು ಪತಿಗೆ ಒಪ್ಪಿಸಿದ್ದಾರೆ.

ಪ್ರಿಯಕರನ್ನು ಭೇಟಿಯಾಗಲು 350 ಕಿ.ಮೀ ಪ್ರಯಾಣ
ಮಹಿಳೆ ನಾಪತ್ತೆಯಾದ ನಂತರ ಪತಿ ಮಾರ್ಚ್ 4 ರಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಗೆ PUBG ಆಡುವ ಅಭ್ಯಾಸವಿತ್ತು. ಈ ಸಮಯದಲ್ಲಿ, ಅವರು ಮುಜಾಫರ್‌ಪುರದ ಹುಡುಗನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಇಬ್ಬರ ನಡುವಿನ ಮಾತುಕತೆ ಪ್ರೇಮಕ್ಕೆ ತಿರುಗಿದ್ದು, ಪ್ರಿಯಕರನ್ನು ಭೇಟಿಯಾಗಲು ಮಹಿಳೆ ಮನೆಯಿಂದ ಪರಾರಿಯಾಗಿದ್ದಾಳೆ. ಇಬ್ಬರೂ ಒಟ್ಟಿಗೆ ಜೀವನ ಮಾಡಲು ಮದುವೆಯಾಗಲು ಯೋಚಿಸಿದ್ದರು. ಹೀಗಾಗಿ ವಿವಾಹಿತೆ ತನ್ನ ಗಂಡನನ್ನು ತೊರೆದಿದ್ದಾಳೆ ಎಂದು ತಿಳಿದು ಬಂದಿದೆ. ಜೊತೆಗೆ ಪ್ರಿಯಕರನನ್ನು ಭೇಟಿಯಾಗಲು ಸುಮಾರು 350 ಕಿ.ಮೀ ಪ್ರಯಾಣಿಸಿದ್ದಾಳೆ.

ಪುನ: ಮದುವೆಯಾಗಲು ಬಯಸಿದ್ದ ಪತ್ನಿ
ಪತ್ನಿಯ ಪ್ರೀತಿ ವಿಚಾರ ಕೇಳಿ ಪತಿಯ ಹೃದಯ ಒಡೆದು ಹೋಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ಇಬ್ಬರು ಚೆನ್ನಾಗಿ ಜೀವನ ಮಾಡುತ್ತಿದ್ದರು. ನಿರಂತರವಾಗಿ ಪಬ್ಜಿ ಆಡುತ್ತಾ ಪತ್ನಿ ಪರ ಪುರುಷನ ಬಲೆಗೆ ಬಿದ್ದಿರುವ ವಿಚಾರ ಕೇಳಿ ಪತಿಗೆ ಸಿಡಿಲು ಬಡಿದಂತಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications