ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮನೆಗೆ ಹೋಗಿ ಡೇಟಾ ನೋಡಿಕೊಳ್ಳಿ': ಅಖಿಲೇಶ್‌ಗೆ ಅಮಿತ್‌ ಟಾಂಗ್‌

|
Google Oneindia Kannada News

ಲಕ್ನೋ, ಡಿಸೆಂಬರ್‌ 02: ಉತ್ತರ ಪ್ರದೇಶದಲ್ಲಿ ಲೂಟಿ ಮತ್ತು ಕೊಲೆಯ ಘಟನೆಗಳು ಕಡಿಮೆಯಾಗಿವೆ ಇಳಿಕೆ ಆಗಿದೆ ಎಂದು ಗುರುವಾರ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಮಾಣ ಏರಿಕೆ ಆಗಿದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಮನೆಗೆ ಹೋಗಿ ಡೇಟಾವನ್ನು ಪರಿಶೀಲನೆ ಮಾಡಿ," ಎಂದು ಅಖಿಲೇಶ್ ಯಾದವ್‌ಗೆ ಟಾಂಗ್‌ ನೀಡಿದ್ದಾರೆ.

ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯವನ್ನು ನಡೆಸುತ್ತಿದೆ. ಈ ನಡುವೆ ವಿರೋಧ ಪಕ್ಷಗಳು ಉತ್ತರ ಪ್ರದೇಶದಲ್ಲಿ ವರದಿ ಆಗುತ್ತಿರುವ ಅಪರಾಧ ಪ್ರಕರಣಗಳು ಮುಂದಿಟ್ಟುಕೊಂಡು ಆಡಾಳಿತರೂಢ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಉತ್ತರ ಪ್ರದೇಶದಲ್ಲಿ ಪರಸ್ಪರ ಭದ್ರಕೋಟೆಗಳ ಮೇಲೆ ಬಿಜೆಪಿ, ಸಮಾಜವಾದಿ ಕಣ್ಣು ಉತ್ತರ ಪ್ರದೇಶದಲ್ಲಿ ಪರಸ್ಪರ ಭದ್ರಕೋಟೆಗಳ ಮೇಲೆ ಬಿಜೆಪಿ, ಸಮಾಜವಾದಿ ಕಣ್ಣು

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, "ನಾನು ಟಿವಿಯಲ್ಲಿ ಅಖಿಲೇಶ್‌ ಯಾದವ್‌ರ ಭಾಷಣವನ್ನು ಕೇಳಿದೆ. ಈ ಭಾಷಣದಲ್ಲಿ ಅಖಿಲೇಶ್‌ ಯಾದವ್‌ ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಮಾಣವು ಅಧಿಕ ಆಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಅಖಲೇಶ್‌ ಜೀ, ನಿಮ್ಮ ಈ ಕನ್ನಡಕವನ್ನು ಎಲ್ಲಿಂದ ತಂದಿದ್ದೀರಿ, ನೀವು ಯಾವ ಕನ್ನಡಕವನ್ನು ಬಳಸುತ್ತೀರಿ?," ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Go home and check data Said Amit Shah to Akhilesh for claiming crime has gone up in UP

"ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೀ ಅವರ ಹಾಗೂ ನಿಮ್ಮ ಐದು ವರ್ಷದ ಆಡಳಿತದ ನಡುವೆ ಹೋಲಿಕೆಯನ್ನು ಮಾಡಿದ್ದೇನೆ. ಯೋಗಿ ಜಿ ಸರ್ಕಾರದ ಆಡಳಿತ ಅವಧಿಯಲ್ಲಿ ಶೇಕಡ ಶೇ.70ರಷ್ಟು ಡಕಾಯಿತಿ ಪ್ರಮಾಣಗಳು ಕಡಿಮೆ ಆಗಿದೆ," ಎಂದು ಅಮಿತ್‌ ಶಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಪರಾಧ ಪ್ರಮಾಣ ಈ ಮಟ್ಟಕ್ಕೆ ಇಳಿಕೆ ಆಗಿದೆ ಎಂದ ಅಮಿತ್‌ ಶಾ

"ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಜೀ ಅವರ ಆಳ್ವಿಕೆ ಅವಧಿಯಲ್ಲಿ ಅಪರಾಧ ಪ್ರಮಾಣವು ತೀವ್ರ ಇಳಿಕೆ ಕಂಡಿದೆ. ಯೋಗಿ ಜಿ ಸರ್ಕಾರದ ಆಡಳಿತ ಅವಧಿಯಲ್ಲಿ ಶೇಕಡ ಶೇ.70ರಷ್ಟು ಡಕಾಯಿತಿ ಪ್ರಮಾಣಗಳು ಕಡಿಮೆ ಆಗಿದೆ. ಆಯುಧಗಳನ್ನು ಬಳಸಿ ಲೂಟಿ ಮಾಡುವ ಘಟನೆಗಳು ಶೇಕಡ 69 ರಷ್ಟು ಕಡಿಮೆ ಆಗಿದೆ. ಕೊಲೆಗಳು ಶೇಕಡ 30 ರಷ್ಟು ಕಡಿಮೆ ಆಗಿದೆ. ವರದಕ್ಷಿಣೆಗಾಗಿ ಉಂಟಾಗುವ ಕೊಲೆಗಳು ಅಥವಾ ಸಾವುಗಳು ಶೇಕಡ 22.5 ಷ್ಟು ಕಡಿಮೆಯಾಗಿದೆ," ಎಂದು ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಮಾಣ ಇಳಿಕೆ ಆಗಿರುವ ಬಗ್ಗೆ ಅಮಿತ್‌ ಶಾ ವಿವರಿಸಿದ್ದಾರೆ.

 ಸಿಂದಗಿಯಲ್ಲಿ ಬಿಜೆಪಿ ಗೆದ್ದರೂ ಅಭಿನಂದನೆ ತಿಳಿಸದ ಅಮಿತ್ ಶಾ- ನಡ್ಡಾ ಜೋಡಿ; ಕಾರಣ? ಸಿಂದಗಿಯಲ್ಲಿ ಬಿಜೆಪಿ ಗೆದ್ದರೂ ಅಭಿನಂದನೆ ತಿಳಿಸದ ಅಮಿತ್ ಶಾ- ನಡ್ಡಾ ಜೋಡಿ; ಕಾರಣ?

"ಭಾರತೀಯ ಜನತಾ ಪಕ್ಷವು ಗಲಭೆ ರಹಿತ ರಾಜ್ಯವನ್ನು ಸೃಷ್ಟಿ ಮಾಡುವಲ್ಲಿ ಸಫಲವಾಗಿದೆ," ಎಂದು ಗೃಹ ಸಚಿವರು ಹೇಳಿದರು. "ಈ ಹಿಂದಿನ ಸರ್ಕಾರದಲ್ಲಿ ಹಲವಾರು ಗಲಭೆಗಳು ನಡೆದಿದೆ, ಯುವಕರು ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಆ ರೀತಿ ಆಗದ್ದಂತೆ ನೋಡಿಕೊಳ್ಳಲಾಗಿದೆ," ಎಂದು ಅಮಿತ್‌ ಶಾ ಹೇಳಿದರು.

ಕಳೆದ 70 ವರ್ಷಗಳಲ್ಲಿ ಆಗದ್ದನ್ನು ಮೋದಿ ಮಾಡಿದ್ದಾರೆ ಎಂದ ಅಮಿತ್‌

Recommended Video

ವಿರಾಟ್ ಕಂಬ್ಯಾಕ್ ಆಗಿದ್ದಕ್ಕೆ ಕೋಚ್ ದ್ರಾವಿಡ್ ತೆಗೆದುಕೊಂಡ ನಿರ್ಧಾರ ಏನು? | Oneindia Kannada

"ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಈ ಹಿಂದಿನ ಸರ್ಕಾರಗಳಿಗೆ ಮಾಡಲು ಆಗದ್ದನ್ನು ಮೋದಿ ಮಾಡಿದ್ದಾರೆ. ಸಂವಿಧಾನದ 370 ಅನ್ನು ರದ್ದುಗೊಳಿಸಿದರು. ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದರು. ಸಮಾಜವಾದಿ ಪಕ್ಷವು 2014 ರಲ್ಲಿ ರಾಮಮಂದಿರ ಬನಾಯೇಂಗೆ, ಲೇಕಿನ್ ದಶಾಂಶ ನಹೀ ಬತಾಯೇಂಗೆ ಎಂದು ವ್ಯಂಗ್ಯ ಮಾಡುತ್ತಿತ್ತು. ಆದರೆ ಈಗ ಭವ್ಯ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ," ಎಂದು ಅಮಿತ್‌ ಶಾ ಹೇಳಿದರು. ರಾಜ್ಯ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಸಹರಾನ್‌ಪುರದ ಬೆಹತ್ ವಿಧಾನಸಭಾ ಕ್ಷೇತ್ರದಲ್ಲಿ ಮಾ ಶಕುಂಭಾರಿ ದೇವಿ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಿದ ಸಂದರ್ಭದಲ್ಲಿ ಅಮಿತ್‌ ಶಾ ಈ ಹೇಳಿಕೆಯನ್ನು ನೀಡಿದ್ದಾರೆ.

English summary
Go home and check data Said Amit Shah to Akhilesh for claiming crime has gone up in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X