ಬಿಜೆಪಿಯನ್ನು ಕಿತ್ತೆಸೆಯುವುದೇ ರೈತರ ಆಶಯ: ಅಖಿಲೇಶ್ ಯಾದವ್
ಲಕ್ನೋ, ಅಕ್ಟೋಬರ್ 29: ಮುಂದಿನ ವರ್ಷದ ಚುನಾವಣೆಯ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಎಲ್ಲಾ ಪಕ್ಷಗಳು ಬಿರುಸಿನಿಂದ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ನಡುವೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, "ಬಿಜೆಪಿಯನ್ನು ಕಿತ್ತೆಸೆಯುವುದೇ ರೈತರ ಆಶಯ," ಎಂದು ಹೇಳಿದ್ಧಾರೆ.
"ಬಿಜೆಪಿ ಸರ್ಕಾರದಡಿಯಲ್ಲಿ ರೈತರು ಬಹಳಷ್ಟು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಮುಂಬರುವ 2022 ರ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೆಸೆಯಲು ನಿರ್ಧಾರ ಮಾಡಿದ್ದಾರೆ," ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ. "ಸರ್ಕಾರದಿಂದಾಗಿ ರೈತರು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಷ್ಟ ಅನುಭವಿಸಿದ್ದಾರೆ. ಕೃಷಿಯು ಈಗ ಸಂಕಷ್ಟದಲ್ಲಿ ಇದೆ. ಆದ್ದರಿಂದಾಗಿ ಬಿಜೆಪಿಯನ್ನು ಕಿತ್ತೆಸೆಯಲು ರೈತರು ಮುಂದಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಜನರು ಕೂಡಾ ನಿರ್ಧಾರ ಮಾಡಿದ್ದಾರೆ," ಎಂದಿದ್ದಾರೆ.
ಒಬಿಸಿ ಮತಗಳತ್ತ ಅಖಿಲೇಶ್ ಚಿತ್ತ, ಉತ್ತರಪ್ರದೇಶ ಚುನಾವಣೆ ಹೊಸ ರಣತಂತ್ರ
ಮಾಜಿ ಕಾಂಗ್ರೆಸ್ ಸಂಸದ ಹರೇಂದ್ರ ಮಲಿಕ್, ಹರೇಂದ್ರ ಮಲಿಕ್‌ರ ಪುತ್ರ, ಮಾಜಿ ಶಾಸಕ ಪಂಕಜ್ ಮಲಿಕ್‌ರನ್ನು ಸಮಾಜವಾದಿ ಪಕ್ಷಕ್ಕೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಸಂದರ್ಭದಲ್ಲೇ ಸ್ವಾಗತಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ರಾಜ್ಯ ಘಟಕದ ಉಪಾಧ್ಯಕ್ಷ ಪಂಕಜ್ ಮಲಿಕ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಲಹಾ ಸಮಿತಿಯ ಸದಸ್ಯರಾಗಿದ್ದ ಹರೇಂದ್ರ ಮಲಿಕ್ ಈ ತಿಂಗಳ ಆರಂಭದಲ್ಲಿ ಪಕ್ಷವನ್ನು ತೊರೆದಿದ್ದರು.
"ರಾಜ್ಯ ಸರ್ಕಾರವು ರೈತರನ್ನು ಕಾಪಾಡುವಲ್ಲಿ ವಿಫಲವಾಗಿದೆ," ಎಂದು ಆರೋಪ ಮಾಡಿರುವ ಅಖಿಲೇಶ್ ಯಾದವ್, "ರಾಜ್ಯ ಸರ್ಕಾರ ಬೆಳೆಯನ್ನು ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ರೈತರು ತಮ್ಮ ಬೆಳೆಯನ್ನು ತಾವಾಗಿಯೇ ನಾಶ ಮಾಡಬೇಕಾಗಿ ಬಂದಿದೆ," ಎಂದು ಕೂಡಾ ದೂರಿದ್ದಾರೆ. "ಇದು ರೈತರ ದೇಶ, ಆದರೆ ರೈತರು ದೇಶದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ," ಎಂದು ಅಖಿಲೇಶ್ ಯಾದವ್ ಲಖಿಂಪುರ ಖೇರಿ ಪ್ರಕರಣವನ್ನು ಉಲ್ಲೇಖ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯನ್ನು ತೆಗೆದು ಹಾಕುವುದೇ ನಮ್ಮ ಉದ್ದೇಶ ಎಂದಿದ್ದ ಅಖಿಲೇಶ್
"ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಕೂಡಾ ಸರ್ಕಾರವು ಈ ಸಂಕಷ್ಟದ ಸಂದರ್ಭದಲ್ಲಿ ಅಧಿಕ ಮಾಡುತ್ತಿದೆ. ರೈತರು ದೇಶದ ಆರ್ಥಿಕತೆಯನ್ನು ನೋಡಿಕೊಳ್ಳುವವರು. ಹಾಗಿರುವಾಗ ರೈತರ ವಿಚಾರದಲ್ಲಿ ಯಾಕೆ ಇಷ್ಟೊಂದು ಅನ್ಯಾಯ. ಐದು ವರ್ಷಗಳು ಆಗುತ್ತಾ ಬಂದಿದೆ, ಈಗ ರೈತರ ಆದಾಯವು ದ್ವಿಗುಣಗೊಂಡಿದೆಯಾ ಇಲ್ಲವಾ ಹೇಳುವಿರಾ," ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದಾರೆ. "ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ತೆಗೆದು ಹಾಕುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ,'' ಎಂದು ಅಖಿಲೇಶ್ ಯಾದವ್ ಈ ಹಿಂದೆ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ರೈತ ವಿರೋಧಿ ಸರ್ಕಾರ ಕಿತ್ತೆಸೆಯುವುದೇ ನಮ್ಮ ಗುರಿ: ಅಖಿಲೇಶ್ ಯಾದವ್
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಈ ಬಾರಿ ಯುಪಿಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಭಾರೀ ಪೈಪೋಟಿ ನಡೆಯುವುದು ಗೋಚರಿಸುತ್ತಿದೆ. ಯುಪಿಯಲ್ಲಿ ಚುನಾವಣೆ ನಡೆದರೆ ಒಬಿಸಿ ವೋಟ್ ಬ್ಯಾಂಕ್ ಮೇಲೆ ಬಿಜೆಪಿ ಮತ್ತು ಎಸ್ಪಿ ರಾಜಕೀಯ ಪಕ್ಷಗಳು ಮುಖಾಮುಖಿಯಾಗುತ್ತವೆ. ಉತ್ತರ ಪ್ರದೇಶದ 2014, 2017 ಮತ್ತು 2019 ರ ಚುನಾವಣೆಗಳಲ್ಲಿ ಯಾದವರಲ್ಲದ ಒಬಿಸಿ ಮತಗಳು ಬಿಜೆಪಿಯ ಕೈ ಹಿಡಿದು ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಕಾರಣವಾಗಿದೆ. ಈ ಬಾರಿಯ 2022 ಚುನಾವಣೆಯಿಂದ ಎಸ್‌ಪಿಯ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅಖಿಲೇಶ್ ಯಾದವ್ 100 ಕ್ಕೂ ಹೆಚ್ಚು ಒಬಿಸಿ ಮತ್ತು ದಲಿತ ನಾಯಕರನ್ನು ಎಸ್‌ಪಿಗೆ ಸೇರಿಸಿಕೊಂಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)