ಬಿಜೆಪಿಗೆ ಆರೆಸ್ಸೆಸ್ ಬೆಂಬಲವೂ ಇಲ್ಲ,ಮೋದಿಗೆ ಅದೇ ಭಯ:ಮಾಯಾವತಿ
ಲಕ್ನೋ, ಮೇ 14: "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಲಿದೆ. ಏಕೆಂದರೆ ಅದಕ್ಕೆ ಸದ್ಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲವೂ ಇಲ್ಲ" ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.
"ಬಿಜೆಪಿ ಮುಳುಗುತ್ತಿರುವ ಹಡಗು. ಬಿಜೆಪಿಯ ಐಡಿಯಾಲಾಜಿಕಲ್ ಮೆಂಟರ್ ಆರೆಸ್ಸೆಸ್ ಗೂ ಮೋದಿ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಆದ್ದರಿಂದ ಅವರು ಬಿಜೆಪಿಯನ್ನು ಬೆಂಬಲಿಸುವುದನ್ನು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಆರೆಸ್ಸೆಸ್ ಸ್ವಯಂಸೇವಕರು ಕೆಲಸ ಮಾಡಲು ಬಂದಿಲ್ಲ. ಇದು ಮೋದಿ ಅವರಲ್ಲಿ ಭಯ ಮೂಡಿಸಿದೆ" ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಯಾವತಿ, "ನರೇಂದ್ರ ಮೋದಿ ಅವರು 2014 ರಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಇದು ಆರೆಸ್ಸೆಸ್ ಸ್ವಯಂ ಸೇವಕರಲ್ಲಿ ಬೇಸರವನ್ನುಂಟು ಮಾಡಿದೆ. ಆದ್ದರಿಂದ ಅವರು ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಲು ಹೊರಗೆ ಬರುತ್ತಿಲ್ಲ. ಇದೇ ಮೋದಿಯವರು ಭಯ ಪಡಲು ಕಾರಣ" ಎಂದು ಮಾಯಾವತಿ ಹೇಳಿದರು.












Click it and Unblock the Notifications