ಸಮೀಕ್ಷೆಗಳಿಗೆ ನಿಷೇಧ, ಆದೇಶ ಉಲ್ಲಂಘಿಸಿದರೆ 2 ವರ್ಷಗಳ ಕಾಲ ಜೈಲು ಶಿಕ್ಷೆ

ಲಕ್ನೋ ಜನವರಿ 30: ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಎಲ್ಲಾ ಎಕ್ಸಿಟ್ ಪೋಲ್‌ಗಳನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಯುಪಿ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ ಅವರು ಫೆಬ್ರವರಿ 10 ರಂದು ಬೆಳಿಗ್ಗೆ 7.00 ರಿಂದ ಮಾರ್ಚ್ 7 ರ ಸಂಜೆ 6.30 ರವರೆಗೆ ಎಕ್ಸಿಟ್ ಪೋಲ್‌ಗಳನ್ನು ನಡೆಸುವುದು. ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅದರ ಪ್ರಕಟಣೆ ಅಥವಾ ಅದರ ಪ್ರಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಐದು ರಾಜ್ಯಗಳ ಒಟ್ಟು 690 ಕ್ಷೇತ್ರಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಂದು ಚುನಾವಣೆಗಳು ಪ್ರಾರಂಭವಾಗಲಿದ್ದು, ಮಾರ್ಚ್ 7 ರವರೆಗೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. 690 ಕ್ಷೇತ್ರಗಳ ಪೈಕಿ ಗರಿಷ್ಠ ಯುಪಿಯಲ್ಲಿ (403). ಪಂಜಾಬ್ 117, ಉತ್ತರಾಖಂಡ, 70, ಮಣಿಪುರ, 50 ಮತ್ತು ಗೋವಾ 40 ಕ್ಷೇತ್ರಗಳನ್ನು ಹೊಂದಿದೆ.

Elections 2022: Exit polls banned: Violation will attract two-year jail term or fine

ವಿಧಾನಸಭೆ ಚುನಾವಣೆ 2022: ವೇಳಾಪಟ್ಟಿ

ಮೊದಲ ಹಂತ: ಯುಪಿ (ಫೆ. 10)

ಎರಡನೇ ಹಂತ: ಉತ್ತರಾಖಂಡ, ಗೋವಾ (ಫೆ. 14)

ಮೂರನೇ ಹಂತ: ಪಂಜಾಬ್, ಯುಪಿ: (ಫೆ. 20)

ನಾಲ್ಕನೇ ಹಂತ: ಯುಪಿ (ಫೆ. 23)

ಐದನೇ ಹಂತ: ಮಣಿಪುರ, ಯುಪಿ (ಫೆ. 27)

ಆರನೇ ಹಂತ: ಮಣಿಪುರ, ಯುಪಿ (ಮಾರ್ಚ್ 3)

ಏಳನೇ ಹಂತ: ಯುಪಿ (ಮಾರ್ಚ್ 7)

ಮತಗಳ ಎಣಿಕೆ: ಮಾರ್ಚ್ 10

Elections 2022: Exit polls banned: Violation will attract two-year jail term or fine

ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಈ ಬಾರಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಉತ್ತರಪ್ರದೇಶದಲ್ಲಿ ಪ್ರಬಲವಾಗಿವೆ. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ಅರ್ಹವಾಗಿದೆ ಎಂದು ಬಹುತೇಕ ಜನ ನಂಬುತ್ತಾರೆ. ಇನ್ನೂ ಕೆಲವರು ರೈತರ ವಿಚಾರವಾಗಿ ಸರ್ಕಾರ ಏನನ್ನು ಮಾಡಿಲ್ಲ. ಹೀಗಾಗಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಬೇಕೆನ್ನುತ್ತಾರೆ.

ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಬಹುದಾದ ಎರಡು ಪ್ರಮುಖ ಸವಾಲುಗಳೆಂದರೆ ಮಾಯಾವತಿ ನೇತೃತ್ವದ ಬಿಎಸ್‌ಪಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ. 2007 ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ಮತಗಳ ಹಂಚಿಕೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತ ಬಿಜೆಪಿ ಮತ್ತು ಎಸ್‌ಪಿ ನಡುವಿನ ಸ್ಪರ್ಧೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2017ರಲ್ಲಿ 403 ಕ್ಷೇತ್ರಗಳಲ್ಲಿ 312 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಯಾದವೇತರ ಓಬಿಸಿ ಮತಗಳು ಮತ್ತು ಜಾತವೇತರ ದಲಿತರ ಮತಗಳನ್ನು ಒಟ್ಟುಗೂಡಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ‌ಹಿಂದೂ ಮೇಲ್ಜಾತಿ ವೋಟುಗಳು ಪ್ರಧಾನ ಪಾತ್ರ ವಹಿಸಿತು. ಇವುಗಳೇ ಬಿಜೆಪಿ ಪ್ರಮುಖ ಮತಬ್ಯಾಂಕ್ ಆಗಿ ರೂಪುಗೊಂಡವು. ಸದ್ಯ ಅಖಿಲೇಶ್ ಪಕ್ಷ ಮತ್ತೆ ಅಧಿಕಾರ ಬರಬೇಕಾದರೆ ಪ್ರತಿ ಕ್ಷೇತ್ರದಲ್ಲಿ ಮುಸ್ಲಿಮರು ಮತ್ತು ಯಾದವರ ಮತಗಳ ಹಂಚಿಕೆಯನ್ನು ಗಮನಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+