Get Updates
Get notified of breaking news, exclusive insights, and must-see stories!

ಯುಪಿ: ಇವಿಎಂ ಕಳವು ಆರೋಪ- ವಾರಣಾಸಿ ಅಧಿಕಾರಿ ಅಮಾನತು

ಲಕ್ನೋ ಮಾರ್ಚ್ 9: ಉತ್ತರ ಪ್ರದೇಶದಲ್ಲಿ ಏಳು ಹಂತದ ಮತದಾನ ಪೂರ್ಣಗೊಂಡಿದೆ. ಈಗ ಮತ ಎಣಿಕೆ ಗುರುವಾರ ಮಾರ್ಚ್ 10 ರಂದು ನಡೆಯಲಿದೆ. ಆದರೆ ಇದಕ್ಕೂ ಮೊದಲು (ಮಾರ್ಚ್ 8) ವಾರಣಾಸಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಇವಿಎಂಗಳನ್ನು ಸಾಗಿಸುತ್ತಿರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದರೊಂದಿಗೆ ಇವಿಎಂ ಕಳ್ಳತನದ ಆರೋಪವೂ ಆಡಳಿತಾಧಿಕಾರಿಗಳ ಮೇಲಿತ್ತು. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್, ಚುನಾವಣೆಯಲ್ಲಿ ಆಡಳಿತ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ. ಇದರ ಮೇಲೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದೆ.

ವಾಸ್ತವವಾಗಿ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂ ಯಂತ್ರಗಳನ್ನು ಸಾಗಿಸುತ್ತಿರುವವರನ್ನು ಎಸ್‌ಪಿ ಕಾರ್ಯಕರ್ತರಿಗೆ ಹಿಡಿದಿದ್ದಾರೆ. ಆ ನಂತರ ಅಲ್ಲಿ ಗದ್ದಲ ಉಂಟಾಗಿದೆ. ಇದರೊಂದಿಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಳಿಕ ಆಡಳಿತಾಧಿಕಾರಿಗಳು ಮಾಧ್ಯಮದವರ ಮುಂದೆ ಬಂದು ಈ ಬಗ್ಗೆ ಸ್ಪಷ್ಟನೆ ನೀಡಿದರು.

ಅಲ್ಲದೆ ಈ ಇವಿಎಂಗಳನ್ನು ತರಬೇತಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ನಂತರ ವಾರಣಾಸಿ ಕಮಿಷನರ್ ಕೂಡ ತಪ್ಪನ್ನು ಒಪ್ಪಿಕೊಂಡರು ಮತ್ತು ಇವಿಎಂಗಳ ಚಲನೆಗೆ ಪ್ರೋಟೋಕಾಲ್‌ನಲ್ಲಿ ಲೋಪವಾಗಿದೆ ಎಂದು ಹೇಳಿದ್ದಾರೆ. ಆ ಎಲ್ಲಾ ಇವಿಎಂಗಳನ್ನು ತರಬೇತಿಗೆ ತೆಗೆದುಕೊಳ್ಳಲಾಗುತ್ತಿತ್ತು ಎಂದಿದ್ದಾರೆ.

Election Commission Strict Action on Akhilesh’s EVM Theft Allegation, Varanasi Officer Suspended

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಆದರೂ ಯಾವುದೇ ಗುರುತಿನ ಚೀಟಿ ಇಲ್ಲದೆ ಮಥುರಾದಲ್ಲಿ ಇವಿಯಂ ಇಡಲಾಗಿದ್ದ ಸುರಕ್ಷಿತ ಕೊಠಡಿಗೆ ವ್ಯಕ್ತಿಯೊಬ್ಬ ಪ್ರವೇಶಿಸಿದ್ದಾನೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗದ್ದಲದ ನಡುವೆ ಉತ್ತರಪ್ರದೇಶದಲ್ಲಿ ನಾಳೆ ಮತ ಎಣಿಕೆ ಆರಂಭಗೊಳ್ಳಲಿದ್ದು ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ವ್ಯಕ್ತಿ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಎರಡು ಪಕ್ಷಗಳ ಕಾರ್ಯಕರ್ತರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Election Commission Strict Action on Akhilesh’s EVM Theft Allegation, Varanasi Officer Suspended

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಕಾರ್ಯಕರ್ತ ಸಂಜಯ್ ಲಾಥರ್, ''ಗುರುತಿನ ಚೀಟಿ ಇಲ್ಲದೆ ಯಾರನ್ನೂ ಇಲ್ಲಿಗೆ ಬಿಡುವುದಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಹೇಳಿದೆ. ಆದರೆ ವ್ಯಕ್ತಿಯೊಬ್ಬ ಕಂಪ್ಯೂಟರ್ ಹೊಂದಿಸಬೇಕು ಎಂದು ಹೇಳಿ ಒಳಗೆ ಹೋಗಿದ್ದಾನೆ ಎಂದು ನಮಗೆ ತಿಳಿದುಬಂದಿದೆ. ಅಲ್ಲಿನ ವ್ಯವಸ್ಥೆ ಆತನನ್ನು ಪ್ರಶ್ನೆ ಮಾಡಿಲ್ಲ. ಜೊತೆಗೆ ಯಾವುದೇ ಅಧಿಕಾರಿ ಆತನೊಂದಿಗೆ ಜೊತೆಗೆ ಇರಲಿಲ್ಲ. ಕಡೆಪಕ್ಷ ಆ ವ್ಯಕ್ತಿ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ. ಆ ವ್ಯಕ್ತಿ ನಾಲ್ಕು ಗಂಟೆಗಳ ಕಾಲ ಇವಿಎಂಗಳನ್ನು ಇರಿಸಲಾಗಿದ್ದ ಕೊಠಡಿಯೊಳಗೆ ಇದ್ದನು. ಹೀಗಾಗಿ ಜಿಲ್ಲಾಡಳಿತವು ಈ ಬಗ್ಗೆ ತನಿಖೆ ನಡೆಸಬೇಕು. ಇದು ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲು ಕಾರಣವಾಗಬಹುದು'' ಎಂದು ಆರೋಪಿಸಿದ್ದಾರೆ.

ವಾರಣಾಸಿಯ ಆಡಳಿತ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದಾರೆ. ವಾರಣಾಸಿಯಲ್ಲಿ ಎಸ್ಪಿ ಕಾರ್ಯಕರ್ತರು ಇವಿಎಂ ತುಂಬಿದ ಟ್ರಕ್ ಅನ್ನು ಹಿಡಿದಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ಹೇಳಿಕೆಯ ನಂತರ ಯುಪಿ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ವೇಳೆ ವಾರಣಾಸಿಯ ಡಿಎಂ ಇಡೀ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತದಾನದ ವೇಳೆ ಬಳಸಲಾದ ಎಲ್ಲಾ ಇವಿಎಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+