ಯುಪಿ ಚುನಾವಣೆಯ 2ನೇ ಹಂತ: ಯೋಗಿ ಆದಿತ್ಯನಾಥ್ ವಿವಾದಾತ್ಮಕ ಟ್ವೀಟ್
ಲಕ್ನೋ ಫೆಬ್ರವರಿ 14: ಎರಡನೇ ಹಂತದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿವಾದಾದ್ಮಕ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ, "ಗಜ್ವಾ-ಎ-ಹಿಂದ್" (ಭಾರತದ ಪವಿತ್ರ ವಿಜಯ) ಕನಸು ಕಾಣುವ "ತಾಲಿಬಾನಿ ಮನಸ್ಥಿತಿಯನ್ನು ಹೊಂದಿರುವ ಧಾರ್ಮಿಕ ಮತಾಂಧರನ್ನು" ಉಲ್ಲೇಖಿಸಿದ್ದಾರೆ. ಇದನ್ನು ಪಾಕಿಸ್ತಾನ ಮೂಲದ ತೀವ್ರವಾದಿ ಇಸ್ಲಾಮಿಸ್ಟ್‌ಗಳು ಹೆಚ್ಚಾಗಿ ಬಳಸುತ್ತಾರೆ. ''ಅವರು ಉಳಿಯಲಿ ಅಥವಾ ಇಲ್ಲದಿರಲಿ, ಭಾರತವು ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತದೆ. ಇಲ್ಲಿ 'ಶರಿಯತ್' (ಇಸ್ಲಾಮಿಕ್ ಧಾರ್ಮಿಕ ಕಾನೂನು) ಇಲ್ಲ'' ಎಂದು ಬರೆದು "ಜೈ ಶ್ರೀ ರಾಮ್" ಎಂದು ಟ್ವೀಟ್ ಕೊನೆಗೊಳಿಸಲಾಗಿದೆ.
ಹಿಜಾಬ್ ವಿವಾದದ ಕುರಿತು ಮಾತನಾಡುವಾಗ ಮುಖ್ಯಮಂತ್ರಿ ನಿನ್ನೆಯೂ ಶರಿಯತ್ ಬಗ್ಗೆ ಉಲ್ಲೇಖಿಸಿದ್ದರು. "ಭಾರತವನ್ನು ಭಾರತದ ಸಂವಿಧಾನದಿಂದ ನಡೆಸಲಾಗುವುದು ಮತ್ತು ಶರಿಯತ್‌ನಿಂದ ಅಲ್ಲ, ಕೆಲವರು ಅನಗತ್ಯವಾಗಿ ವಿಷಯವನ್ನು ಎತ್ತಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಯುಪಿ: 'ರಾಮಮಂದಿರ 2,100 ಕ್ವಿಂಟಾಲ್ ಗಂಟೆ ಶಬ್ದಕ್ಕೆ ಹಗಲುಗನಸು ಬೀಳಲ್ಲ'ಯೋಗಿ
ಇಂದು 55 ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದ್ದು ಯೋಗಿ ಹೇಳಿಕೆ ವಿವಾದ ಸೃಷ್ಟಿ ಮಾಡಿದೆ. ಈ ಹಂತದ ಹಲವು ಸ್ಥಾನಗಳು ಬರೇಲ್ವಿ ಮತ್ತು ದೇವಬಂದ್ ಪಂಥಗಳ ಧಾರ್ಮಿಕ ಮುಖಂಡರಿಂದ ಪ್ರಭಾವಿತವಾಗಿರುವ ಮುಸ್ಲಿಂ ಮತದಾರರ ಗಣನೀಯ ಜನಸಂಖ್ಯೆಯನ್ನು ಹೊಂದಿವೆ. ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಚುನಾವಣೆ ವೇಳೆ ಉತ್ತರ ಪ್ರದೇಶ ಹೆಚ್ಚಾಗಿ ಧ್ರುವೀಕರಣಗೊಂಡ ಪ್ರಚಾರವನ್ನು ಕಂಡಿದೆ. ವಿಶೇಷವಾಗಿ ರಾಜ್ಯದ ಪಶ್ಚಿಮ ಭಾಗಗಳಲ್ಲಿ, 2013 ರ ಮುಜಾಫರ್‌ನಗರ ಹಿಂಸಾಚಾರದ ನಂತರ ಮತದಾನದ ಮಾದರಿಯು ಹೆಚ್ಚಾಗಿ ಬದಲಾಗಿದೆ. BJP ಮತ್ತು ಸಮಾಜವಾದಿ ಪಕ್ಷ ಎರಡೂ ಕೋಮುವಾದದ ಆರೋಪಗಳನ್ನು ಮಾಡಿವೆ.

ನಿನ್ನೆ ರಾಜೇಪುರ ಮತ್ತು ಕಮಲಗಂಜ್‌ನಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಭಾಷಣ ಮಾಡಿದ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಸರ್ಕಾರವು ರಾಜ್ಯದ ಫರೂಕಾಬಾದ್ ಜಿಲ್ಲೆಯ ಭೋಜ್‌ಪುರದಿಂದ "ಇಸ್ಲಾಮಾಬಾದ್" ಮಾಡಲು ಬಯಸಿದೆ ಎಂದು ಆರೋಪಿಸಿದರು. ಪ್ರತಿಪಕ್ಷ ಸಮಾಜವಾದಿ ಪಕ್ಷವು ಪಾಕಿಸ್ತಾನ ಮತ್ತು ಅದರ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಬೆಂಬಲಿಗರು ಎಂದು ಮುಖ್ಯಮಂತ್ರಿ ಪದೇ ಪದೇ ಆರೋಪಿಸಿದ್ದಾರೆ.
'गजवा-ए-हिन्द' का सपना देखने वाले 'तालिबानी सोच' के 'मजहबी उन्मादी' यह बात गांठ बांध लें...
— Yogi Adityanath (@myogiadityanath) February 13, 2022
वो रहें या न रहें
भारत शरीयत के हिसाब से नहीं, संविधान के हिसाब से ही चलेगा।
जय श्री राम!
ಎರಡು ದಿನಗಳ ಹಿಂದೆ ಶಹಜಹಾನ್‌ಪುರದಲ್ಲಿ ಮಾತನಾಡಿದ ಅವರು, ಸ್ಮಶಾನಗಳ ಬಗ್ಗೆ ಮತ್ತೊಂದು ಉಲ್ಲೇಖ ಮಾಡಿ, ''ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ (ಅಖಿಲೇಶ್ ಯಾದವ್) ಅವರನ್ನು ಎಲ್ಲಿ ಅಭಿವೃದ್ಧಿ ಮಾಡಿದ್ದೀರಿ ಎಂದು ಕೇಳಿದರೆ, ಅವರು ಸ್ಮಶಾನಗಳ ಗಡಿ ಗೋಡೆಗಳನ್ನು ಮಾಡಿದ್ದಾರೆ'' ಎಂದು ಹೇಳಿದರು. ಇಂಥ ರಾಜಕಾರಣವನ್ನು ಯುಪಿಯಲ್ಲಿ ಕೊನೆಗೊಳಿಸಬೇಕು ಎಂದರು. ಅಖಿಲೇಶ್ ಯಾದವ್ ಅವರನ್ನು "ಬಾಬುವಾ" (ಚಿಕ್ಕ ಹುಡುಗ) ಎಂದು ಕರೆಯುವ ಮುಖ್ಯಮಂತ್ರಿಗಳು ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರನ್ನು "ಅಬ್ಬಾ ಜಾನ್" ಎಂದು ಹಲವು ಬಾರಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ ಅವರು ಹಿಂದೂ ವಲಸೆಯ ಗ್ರೌಂಡ್ ಕೈರಾನಾದಲ್ಲಿ ಪ್ರಚಾರ ಮಾಡಿದ್ದರು. ಈ ವೇಳೆ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕೋಮು ಗಲಭೆಗಳು ಭುಗಿಲೆದ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ಅವು ದ್ವಿಗುಣಗೊಂಡಿವೆ ಎಂದು ಆರೋಪಿಸಿದರು.
ಯುಪಿಯಲ್ಲಿ ಧ್ರುವೀಕರಣಗೊಂಡ ಪ್ರಚಾರದ ವಿರುದ್ಧ ಕಳೆದ ವಾರ ರೈತ ಮುಖಂಡ ರಾಕೇಶ್ ಟಿಕಾಯತ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮುಜಫರ್ ನಗರವು "ಹಿಂದೂ-ಮುಸ್ಲಿಂ ಪಂದ್ಯಗಳ ಕ್ರೀಡಾಂಗಣವಲ್ಲ" ಎಂದು ವಾಗ್ದಾಳಿ ಮಾಡಿದ್ದರು. "ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯ ಬಗ್ಗೆ ಮಾತನಾಡಲು ಬಯಸುತ್ತದೆ. ಹಿಂದೂ, ಮುಸ್ಲಿಂ, ಜಿನ್ನಾ, ಧರ್ಮದ ಬಗ್ಗೆ ಮಾತನಾಡುವವರು ಮತಗಳನ್ನು ಕಳೆದುಕೊಳ್ಳುತ್ತಾರೆ. ಮುಜಫರ್‌ನಗರ ಹಿಂದೂ-ಮುಸ್ಲಿಂ ಪಂದ್ಯಗಳಿಗೆ ಕ್ರೀಡಾಂಗಣವಲ್ಲ," ಎಂದು ಟಿಕಾಯತ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಯುಪಿ ಚುನಾವಣೆ 2022 ಅನ್ನು ಏಳು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ಮತದಾನ ನಡೆಯಲಿದ್ದು ಇಂದು ಎರಡನೇ ಹಂತದ ಮತದಾನ ನಡೆಯಲಿದೆ.












Click it and Unblock the Notifications