ಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿ

ಲಖನೌ, ಮೇ 20: ಲೋಕಸಭೆ ಚುನಾವಣೆ 2019ರ ಅಂತಿಮ ಹಂತದ ಮತದಾನ ಮುಗಿದ ಮರುದಿನವೇ ಉತ್ತರ ಪ್ರದೇಶ ಬಿಜೆಪಿಯು ತನ್ನ ಮಿತ್ರ ಪಕ್ಷವೊಂದನ್ನು ಹೊರಹಾಕಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಉತ್ತರ ಪ್ರದೇಶ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಎಸ್‌ಬಿಎಸ್‌ಪಿ ಪಕ್ಷದ ಓಂ ಪ್ರಕಾಶ್ ರಾಜ್‌ಬಾರ್‌ ಅವರನ್ನು ಮಂತ್ರಿಮಂಡಲದಿಂದ ಸಿಎಂ ಯೋಗಿ ಆದಿತ್ಯನಾಥ ಅವರು ಕೈಬಿಟ್ಟಿದ್ದಾರೆ.

ಓಂ ಪ್ರಕಾಶ್ ರಾಜ್‌ಬಾರ್ ಅವರು ಬಿಜೆಪಿ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಬೈದಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಆರೋಪ ಕೇಳಿಬಂದಿತ್ತು ಹಾಗಾಗಿ ಇಂದು ಅವರನ್ನು ಮಂತ್ರಿಮಂಡಲದಿಂದ ಉಚ್ಛಾಟಿಸಲಾಗಿದೆ.

CM Yogi Adithyanath sacks BJP ally from cabinet

ಲೋಕಸಭೆ ಚುನಾವಣೆಗೆ ಮತದಾನ ಪ್ರಾರಂಭಕ್ಕೆ ಮುನ್ನಾ ಇದೇ ರಾಜ್‌ಬಾರ್ ಅವರನ್ನು ಸಂತುಷ್ಟಗೊಳಿಸಲೆಂದು ಎಲ್ಲ ನಿಗಮ, ಮಂಡಳಿಗಳ ನೇಮಕಾತಿಗಳನ್ನು ಬದಲಾಯಿಸಲಾಗಿತ್ತು, ಆದರೆ ಮತದಾನ ಮುಗಿದ ನಂತರ ರಾಜ್‌ಬಾರ್ ಅವರನ್ನೇ ಉಚ್ಛಾಟಿಸಲಾಗಿದೆ.

ಓಂ ಪ್ರಕಾಶ್ ರಾಜ್‌ಬಾರ್ ಅವರು ಮಂತ್ರಿಯಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿಲ್ಲದ ಕಾರಣ ಅವರನ್ನು ಮಂತ್ರಿಮಂಡಲದಿಂದ ತೆಗೆಯಲಾಗಿದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕಾಶ್ ರಾಜ್‌ಬಾರ್ ಅವರ ಬಳಿ ಇದ್ದ ಖಾತೆಯನ್ನು ಅವರದ್ದೇ ಸಮುದಾಯದ ಬಿಜೆಪಿ ಶಾಸಕ ಅನಿಲ್ ರಾಜ್‌ಬಾರ್ ಅವರಿಗೆ ವರ್ಗಾಯಿಸಲಾಗಿದ್ದು, ಪ್ರಕಾಶ್ ರಾಜ್‌ಬಾರ್ ಅವರು ಅಸಮಾಧಾನಗೊಂಡ ನಂತರ ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+