• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಸಹಾಯ ಕೇಳಿದ ಬಿಜೆಪಿ ಶಾಸಕಿ

|

ಲಕ್ನೋ, ಅಕ್ಟೋಬರ್ 28: ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಅಲ್ಕಾ ರಾಯ್ ತಮಗೆ ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವನ್ನು ಕೇಳಿಕೊಂಡಿದ್ದಾರೆ.

ಬಿಎಸ್ ಪಿ ಶಾಸಕ ಮುಖ್ತಾರ್ ಅನ್ಸಾರಿ ವಿರುದ್ಧ ಅಲ್ಕಾ ರಾಯ್ ಅವರ ಪತಿ, ಮಾಜಿ ಶಾಸಕ ಕೃಷ್ಣಾನಂದ ರಾಯ್ ಅವರನ್ನು 2005 ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪವಿತ್ತು. ಆದರೆ ಪಂಜಾಬ್ ನ ಮೊಹಾಲಿ ಜೈಲಿನಲ್ಲಿರುವ ಅನ್ಸಾರಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.

Fact Check: ಹತ್ರಾಸ್‌ಗೆ ತೆರಳುವಾಗ ರಾಹುಲ್, ಪ್ರಿಯಾಂಕಾ ತಮಾಷೆ ಮಾಡಿ ನಗುತ್ತಿದ್ದರೇ?

ಅಲ್ಕಾ ರಾಯ್ ಪ್ರಿಯಾಂಕಾ ಗಾಂಧಿಗೆ ಭಾವನಾತ್ಮಕವಾಗಿ ಪತ್ರೆ ಬರೆದಿದ್ದು, ಸರ್ಕಾರ ಕ್ರಿಮಿನಲ್ ಓರ್ವನ ಬೆನ್ನಿಗೆ ನಿಂತಿದೆ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ.

ಅಲ್ಕಾ ರಾಯ್ ಘಾಜಿಪುರದ ಮೊಹಮ್ಮದಾಬಾದ್ ನ ಬಿಜೆಪಿ ಶಾಸಕಿಯಾಗಿದ್ದಾರೆ.ತಾವು 14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ನಿಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೋಪಿ ಅನ್ಸಾರಿಯನ್ನು ಉತ್ತರ ಪ್ರದೇಶ ಜೈಲಿಗೆ ವರ್ಗಾವಣೆ ಮಾಡಲು ನಿರಾಕರಿಸಿ ಆತನ ಬೆನ್ನಿಗೆ ನಿಂತಿದೆ.

ಇವೆಲ್ಲವೂ ನಿಮ್ಮ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೆ ಬಾರದೇ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮುಖ್ತಾರ್ ಅನ್ಸಾರಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ಕುಟುಂಬಗಳನ್ನು ನಾಶ ಮಾಡಿದ್ದಾನೆ ಎಂದು ಪತ್ರದಲ್ಲಿ ಅಲ್ಕಾ ರಾಯ್ ಆರೋಪಿಸಿದ್ದಾರೆ.

ಸೂಕ್ಷ್ಮತೆ, ಸಂವೇದನೆಯನ್ನು ಪ್ರದರ್ಶಿಸಿ ಆರೋಪಿಯನ್ನು ಪುನಃ ಕಟಕಟೆಗೆ ತಂದು ನಿಲ್ಲಿಸಲು ಸಹಾಯ ಮಾಡಿ ಎಂದು ಪ್ರಿಯಾಂಕಾಗೆ ಬರೆದಿರುವ ಪತ್ರದಲ್ಲಿ ಅಲ್ಕಾ ಮನವಿ ಮಾಡಿದ್ದಾರೆ. ನನ್ನಂತೆಯೇ ಹಲವರು ಮುಖ್ತಾರ್ ಅನ್ಸಾರಿಗೆ ಶಿಕ್ಷೆಯಾಗಬೇಕೆಂದು ನಿರೀಕ್ಷಿಸುತ್ತಿದ್ದಾರೆ.

English summary
BJP MLA Alka Rai, widow of slain MLA Krishnanand Rai, has written an emotional letter to Congress General Secretary Priyanka Gandhi Vadra, urging her not to help BSP MLA Mukhtar Ansari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X