ಕೊರೊನಾ ನಂತರದ ಸಮಸ್ಯೆಗಳಿಂದ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಾವು
ಲಕ್ನೋ, ಮೇ 07: ಕೊರೊನಾ ನಂತರದ ಸಮಸ್ಯೆಯಿಂದ ಉತ್ತರ ಪ್ರದೇಶದ ಬಿಜೆಪಿ ಶಾಸಕ ದಲ್ ಬಹದ್ದೂರ್ ಕೋರಿ ಅವರು ನಿಧನರಾಗಿದ್ದಾರೆ.
ಲಕ್ನೋನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಕೊರೊನಾ ನಂತರದ ತೊಂದರೆಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಶುಕ್ರವಾರ ತಿಳಿಸಿವೆ.
ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಶಾಸಕರಿಗೆ ಮತ್ತೆ ಆರೋಗ್ಯ ಸಮಸ್ಸೆ ಕಾಣಿಸಿಕೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿಧಾನಸಭೆ ಸ್ಪೀಕರ್ ಹೃದಯ್ ನರೈನ್ ದೀಕ್ಷಿತ್ ಮತ್ತು ಬಿಜೆಪಿಯ ಹಿರಿಯ ಮುಖಂಡರು ಕೋರಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದು ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ
ಕುಟುಂಬದ ಪ್ರಕಾರ, ರಾಯಬರೇಲಿಯ ಸಲೋನ್ ಕ್ಷೇತ್ರದ 64 ವರ್ಷದ ಬಿಜೆಪಿ ಶಾಸಕ ಕೋರಿ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಕೋರಿ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ನಂತರ ಅವರನ್ನು ಲಕ್ನೋನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಎಸ್‌ಜಿಪಿಜಿಐ) ದಾಖಲಿಸಲಾಗಿತ್ತು. ಕೊರೊನಾ ನೆಗಟಿವ್ ಬಂದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.












Click it and Unblock the Notifications