ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ಚಂದ್ರಶೇಖರ್ ಅಜಾದ್

ಲಕ್ನೋ, ಮಾರ್ಚ್1: ದಲಿತರ ಹಿತ ಕಾಯಲು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಘೋಷಿಸಿದ್ದಾರೆ. ಉತ್ತರಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಹೊಸ ಪಕ್ಷ ಸ್ಥಾಪನೆ ಕುರಿತಂತೆ ಮಾರ್ಚ್ ತಿಂಗಳಿನಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದ್ದು, ಹಾಲಿ ಸಂಘಟನೆಯನ್ನು ರಾಜಕೀಯವಾಗಿ ವಿಸ್ತರಣೆ ಮಾಡಲಾಗುತ್ತದೆ.

ನ್ಯೂಸ್ 18 ಜೊತೆ ಮಾತನಾಡಿದ ಆಜಾದ್, "ಡಿಸೆಂಬರ್ ತಿಂಗಳಿನಲ್ಲೇ ಹೊಸ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಲು ಮುಂದಾಗಿದ್ದೆ, ಆದರೆ, ಅಸಾಂವಿಧಾನಿಕ ಕಾನೂನು ಜಾರಿಗೊಂಡಿದ್ದ ಸಿಎಎ ವಿರುದ್ಧ ಹೋರಾಟಕ್ಕಿಳಿಯಬೇಕಾಯಿತು" ಎಂದು ಹೇಳಿದರು.

Bhim Army Chief Chandrashekhar Aazad to launch political party soon

"ಈಗ ಅವರು ನನ್ನನ್ನು ಬಂಧಿಸಬಹುದು, ಜೈಲಿನಲ್ಲಿ ಹೊಡೆಯಬಹುದು ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘಿಸಬಹುದು. ನಾನು ರಾಜಕೀಯ ಸೇರುವ ಮುಖ್ಯ ಉದ್ದೇಶ ಇದೆಲ್ಲವನ್ನು ತಡೆಗಟ್ಟುವುದು, ನನ್ನ ಜನರಿಗಾಗಿ ಹೋರಾಟ ಮಾಡಿ, ಅವರ ಹಕ್ಕುಗಳಿಗಾಗಿ ಶ್ರಮಿಸುವುದನ್ನು ಮುಂದುವರೆಸುತ್ತೇನೆ" ಎಂದಿದ್ದಾರೆ.

2014ರಲ್ಲಿ ಅಜಾದ್, ಸತೀಶ್ ಕುಮಾರ್ ಹಾಗೂ ವಿನಯ್ ರತನ್ ಸಿಂಗ್ ಭೀಮ್ ಆರ್ಮಿ ಸ್ಥಾಪಿಸಿದರು. ದಲಿತ ಹಿಂದುಗಳ ಶಿಕ್ಷಣ, ಆರ್ಥಿಕ ಸುಧಾರಣೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ಈ ಸಂಘಟನೆ, ಪಶ್ಚಿಮ ಉತ್ತರ ಪ್ರದೇಶದಲ್ಲಿ ದಲಿತರಿಗಾಗಿ ಉಚಿತ ಶಾಲೆಯನ್ನು ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+