ರಾಮಮಂದಿರದ 2 ಸಾವಿರ ಅಡಿ ಆಳದಲ್ಲಿ ಅಯೋಧ್ಯೆ ಸಂಪುಟ
ಲಕ್ನೋ, ಜುಲೈ 27: ಭವಿಷ್ಯದಲ್ಲಿ ರಾಮಮಂದಿರ ವಿವಾದ ಎಂದೂ ತಲೆ ಎತ್ತಬಾರದು ಎನ್ನುವ ಕಾರಣಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ.
ಅಯೋಧ್ಯೆಯಲ್ಲಿ ನಿಲ್ಲಿಸಲು ಉದ್ದೇಶಿಸಲಾಗಿರುವ ರಾಮಮಂದಿರದ ಕೆಳಗೆ ಮಂದಿರದ ಸಂಪೂರ್ಣ ಇತಿಹಾಸ ಕುರಿತು ಸಂಪುಟ(Time-capsule)ವನ್ನುಹುದುಗಿಡಲಾಗುತ್ತಿದೆ.
ಮಂದಿರದ ಕೆಳಗೆ ಸುಮಾರು 2 ಸಾವಿರ ಅಡಿಯಲ್ಲಿ ತಾಮ್ರದ ಕೆತ್ತನೆಯಲ್ಲಿ ಸಂಪುಟವನ್ನು ತಯಾರಿಸಿ ಹುದುಗಿಸಿಡಲು ರಾಮಮಂದಿರ ಟ್ರಸ್ಟ್ ಮುಂದಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ವಾದ-ವಿವಾದ ಪರಿಗಣಿಸಿ ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಕೂಡದು ಎನ್ನುವ ಕಾಳಜಿಯಿಂದ ಈ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಮುಂದೆ ಇತಿಹಾಸಕಾರರು ಅಥವಾ ಸಂಶೋಧಕರು ಮಂದಿರಕ್ಕೆ ಸಂಬಂಧಿಸಿ ಎಂದೂಪ್ರಶ್ನೆ ಎತ್ತಬಾರದು. ಹಾಗೆಯೇ ಮತ್ತೆ ಎಂದಾದರೂ ಕೋರ್ಟ್ ಮೆಟ್ಟಿಲೇರಿದರೆ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂದು ಈ ಸಂಪುಟವನ್ನು ಹುದುಗಿಡಲಾಗುತ್ತಿದೆ.
ಭಾರತಕ್ಕೆ ಬಾಬರ್ ದಾಳಿ ಮಾಡಿದ ಸಂದರ್ಭದಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು ಎನ್ನುವ ಆರೋಪವಿದೆ. ಇದೇ ಕಾರಣಕ್ಕಾಗಿಯೇ ಸುಪ್ರೀಂಕೋರ್ಟ್‌ನಲ್ಲಿ ಸುಮಾರು 4 ದಶಕಗಳ ಕಾಲ ಕಾನೂನು ಹೋರಾಟ ನಡೆದಿದೆ.
ಭಾರತದ ಇತರೆ ಕೋರ್ಟ್‌ನಲ್ಲಿ ನೂರಕ್ಕೂ ಅಧಿಕ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಲಾಗಿದೆ. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿ ವಿವಾದತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿತ್ತು.












Click it and Unblock the Notifications