ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ ಇಂದಿನಿಂದ ಆ್ಯಂಟಿ ರೋಮಿಯೋ ಸ್ಕ್ವಾಡ್ ಮತ್ತೆ ಸಕ್ರಿಯ

|
Google Oneindia Kannada News

ಲಕ್ನೋ ಏಪ್ರಿಲ್ 02: ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಪ್ರವೃತ್ತರಾಗಿದ್ದಾರೆ. ನವರಾತ್ರಿಯ ಮೊದಲ ದಿನದಿಂದಲೇ ಮಹಿಳೆಯರ ಸುರಕ್ಷತೆಗಾಗಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಅನ್ನು ಸಕ್ರಿಯಗೊಳಿಸುವಂತೆ ಸಿಎಂ ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೂಚನೆಗಳ ಪ್ರಕಾರ ಇಂದಿನಿಂದ ಆ್ಯಂಟಿ ರೋಮಿಯೋ ಸ್ಕ್ವಾಡ್ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಹಾಗೂ ರಸ್ತೆಗಳಲ್ಲಿ ಸಕ್ರಿಯವಾಗಿರುತ್ತದೆ. ಇದಲ್ಲದೆ ಮಿಷನ್ ಶಕ್ತಿಯ ನಾಲ್ಕನೇ ಹಂತಕ್ಕೆ ಏಪ್ರಿಲ್ 10 ರಿಂದ ರಾಜ್ಯಾದ್ಯಂತ ಚಾಲನೆ ಸಿಗಲಿದೆ.

ಶುಕ್ರವಾರ ತಂಡದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಈವ್ ಟೀಸಿಂಗ್ ತಡೆಯಲು ಪ್ರತಿ ಶಾಲಾ-ಕಾಲೇಜುಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಕಾರ್ಯಾರಂಭ ಮಾಡಬೇಕು. ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು ಮತ್ತು ಮಹಿಳೆಯರ ಸುರಕ್ಷತೆಗಾಗಿ ಎಲ್ಲಾ 75 ಜಿಲ್ಲೆಗಳಲ್ಲಿ 3,000 ಕ್ಕೂ ಹೆಚ್ಚು ಪಿಂಕ್ ಬೂತ್‌ಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.

UP Election Result 2022: 5 ವರ್ಷದ ಅವಧಿ ಮುಗಿಸಿ ಮರಳಿದ ಮೊದಲ ಸಿಎಂ ಯೋಗಿUP Election Result 2022: 5 ವರ್ಷದ ಅವಧಿ ಮುಗಿಸಿ ಮರಳಿದ ಮೊದಲ ಸಿಎಂ ಯೋಗಿ

ತಂಡ 9ರೊಂದಿಗಿನ ಸಭೆಯಲ್ಲಿ ಆದಿತ್ಯನಾಥ್ ಅವರು ಗ್ರಾಮೀಣ ಪ್ರದೇಶದ ಮಹಿಳೆಯರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಅವರಿಗೆ ಸರ್ಕಾರದಿಂದ ನಡೆಸುತ್ತಿರುವ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿಸುವಂತೆ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅವರು ಮಿಷನ್ ಶಕ್ತಿಯ ನಾಲ್ಕನೇ ಹಂತವನ್ನು ಏಪ್ರಿಲ್ 10 ರಂದು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಈ ಮಿಷನ್ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಕೇಂದ್ರೀಕರಿಸುತ್ತದೆ, ಮಹಿಳಾ ಪೊಲೀಸರಿಗೆ ಇದರ ಕೆಲಸಕ್ಕೆ ನಿಯೋಜಿಸಲಾಗಿದೆ.

Anti Romeo Squad became active again in UP from today

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವ್ನಿಶ್ ಅವಸ್ತಿ ಅವರು ಆಜ್ ತಕ್ ಜೊತೆಗಿನ ಸಂವಾದದಲ್ಲಿ ಯೋಗಿ ಸರ್ಕಾರ 100 ದಿನಗಳ ಕಾರ್ಯಕ್ರಮವನ್ನು ಮಾಡಿದೆ. ಇದರಲ್ಲಿ ಉತ್ತರ ಪ್ರದೇಶದ ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಬಲಪಡಿಸಲು ಮೊದಲ ಸಿದ್ಧತೆ ನಡೆಸಿದೆ. ಇದರಲ್ಲಿ ನವರಾತ್ರಿಯ ಮೊದಲ ದಿನದಿಂದಲೇ ಪೊಲೀಸ್ ಆಡಳಿತದ ಆದ್ಯತೆಯಲ್ಲಿ ಈ ಕೆಲಸಗಳು ನಡೆಯಲಿವೆ. ನವರಾತ್ರಿಯಲ್ಲಿ ಎಲ್ಲಾ ಪೊಲೀಸರು ಈ ಬಗ್ಗೆ ಕಾರ್ಯ ನಿರ್ಮಹಿಸಬೇಕು ಎಂದು ಸೂಚಿಸಲಾಗಿದೆ. ಈ ಫುಟ್ ಪೆಟ್ರೋಲಿಂಗ್ ನಲ್ಲಿ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿರುತ್ತಾರೆ. ಒಂದು ವೇಳೆ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಪ್ರತಿ ಪೊಲೀಸ್ ಠಾಣೆ ಮತ್ತು ಜಿಲ್ಲಾ ಮಟ್ಟದಲ್ಲಿ ಟಾಪ್-10 ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇದೀಗ 'ಆ್ಯಂಟಿ ರೋಮಿಯೋ ದಳ'ದ ಮೂಲಕ ತಾವು ನೀಡಿದ ಭರವಸೆಯನ್ನು ಬಿಜೆಪಿ ಸರಕಾರ ಉಳಿಸಿಕೊಂಡಿದೆ.

ಉತ್ತರ ಪ್ರದೇಶದ ಜಿಲ್ಲೆಗಳ ಪೈಕಿ ಮೀರತ್‌ನಲ್ಲಿ ಬೀದಿ ಕಾಮಣ್ಣರ ನಿಗ್ರಹ ಪಡೆ ಮೊದಲು ಕಾರ್ಯರೂಪಕ್ಕೆ ಬಂದಿದೆ. ಶಾಲಾ- ಕಾಲೇಜುಗಳ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೀರತ್‌ನ ಪ್ರತಿಯೊಂದು ಪೊಲೀಸ್‌ ಠಾಣೆಯಿಂದ ಮೂರರಿಂದ ನಾಲ್ಕು ಜನ ಪೊಲೀಸರು ಆ್ಯಂಟಿ ರೋಮಿಯೋ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Recommended Video

ಯುಗಾದಿ ಹಬ್ಬಕ್ಕೆ ವಿಶ್ ಮಾಡಿದ ಅಪ್ಪು ನೋಡಿ ಕಣ್ಣೀರಿಟ್ಟ ಅಭಿಮಾನಿಗಳು,ವಿಡಿಯೋ ವೈರಲ್ | Oneindia Kannada

ಆದರೆ ಈ ಆ್ಯಂಟಿ ರೋಮಿಯೋ ಪಡೆ ಅಪರಾಧವನ್ನು ತಡೆಗಟ್ಟುವ ಬದಲು ನೈತಿಕ ಪೊಲೀಸ್‌ಗಿರಿಗೆ ಮುಂದಾಗಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. ಬೈಕ್‌ ಮೇಲೆ ಸುಮ್ಮನೆ ಕುಳಿತುಕೊಂಡ ಅಥವಾ ಪಾನ್‌ ಶಾಪ್‌ಗಳ ಮುಂದೆ ನಿಂತ ಯುವಕರನ್ನು ಪೊಲೀಸರು ಸುಖಾ ಸುಮ್ಮನೆ ಪ್ರಶ್ನಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

English summary
After regaining power in Uttar Pradesh, Chief Minister Yogi Adityanath has come into action. CM Yogi has instructed the officers to activate Anti Romeo Squad for the safety of women from the first day of Navratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X