ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಅಖಿಲೇಶ್ ಯಾದವ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ರಾಮ್ ಗೋಪಾಲ್

|
Google Oneindia Kannada News

ಲಕ್ನೋ ಜನವರಿ 22: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುಂದಿನ ತಿಂಗಳು ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಕುಟುಂಬದ ತವರು ಕ್ಷೇತ್ರದಲ್ಲಿರುವ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ಮೂಲಗಳು ಕೆಲವು ದಿನಗಳ ಹಿಂದೆ ಈ ಮಾಹಿತಿಯನ್ನು ನೀಡಿದ್ದವು. ಆದರೆ ಇಂದು ಅಖಿಲೇಶ್ ಯಾದವ್ ಅವರ ಮಾವ ಮತ್ತು ರಾಜ್ಯಸಭಾ ಸಂಸದ ರಾಮ್ ಗೋಪಾಲ್ ಯಾದವ್ ಅವರು ತಮ್ಮ ಸೋದರಳಿಯ ದಾಖಲೆ ಮತಗಳೊಂದಿಗೆ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಕರ್ಹಾಲ್ ಮತದಾರರು 1993 ರಿಂದ ಪ್ರತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ. 2007 ರಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವೇ ಮರಳಿ ಅಧಿಕಾರಕ್ಕೆ ಬಂತು. ಅಖಿಲೇಶ್ ಯಾದವ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರನ್ನು ಐದು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ ಮೈನ್‌ಪುರಿ ಲೋಕಸಭಾ ಸ್ಥಾನವನ್ನು ರೂಪಿಸುವ ಐದು ಅಸೆಂಬ್ಲಿ ಸ್ಥಾನಗಳಲ್ಲಿ ಇದು ಕೂಡ ಒಂದಾಗಿದೆ. ಯಾದವ್ ಕುಟುಂಬದ ತವರು ಗ್ರಾಮವಾದ ಸೈಫಾಯಿಯಿಂದ ಕರ್ಹಾಲ್ ಕೇವಲ 5 ಕಿ.ಮೀ. ದೂರದಲ್ಲಿದೆ.

ಆಡಳಿತಾರೂಢ ಬಿಜೆಪಿಯನ್ನು ಹೊರಹಾಕಲು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಖಿಲೇಶ್ ಯಾದವ್ ಮೊದಲ ರಾಜ್ಯ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ. ಈ ಹಿಂದೆ ನವೆಂಬರ್‌ನಲ್ಲಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ ಅಖಿಲೇಶ್ ಯಾದವ್ ಪಕ್ಷ ನಿರ್ಧರಿಸಿದರೆ ತಾವು ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಪಕ್ಷದ ನಿರ್ಧಾರದಂತೆ ಅವರು ಈ ಬಾರಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇನ್ನೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ ನಾಥ್ ಭದ್ರಕೋಟೆಯಿಂದ ಕಣಕ್ಕಿಳಿದಿದ್ದಾರೆ. ಅಖಿಲೇಶ್ ಯಾದವ್ ಮತ್ತು ಆದಿತ್ಯನಾಥ್ ಇಬ್ಬರೂ ತಮ್ಮ ರಾಜ್ಯ ಚುನಾವಣೆಗಳನ್ನು ತಮ್ಮ ತಮ್ಮ ಭದ್ರಕೋಟೆಗಳಿಂದ ಸ್ಪರ್ಧಿಸಲಿದ್ದಾರೆ.

Akhilesh Yadav To Fight His 1st UP Polls From Family Stronghold Of Karhal

ಇನ್ನೂ ಸಮಾಜವಾದಿ ಪಕ್ಷದಿಂದ ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಒಂದೆಡೆ ಅಖಿಲೇಶ್ ಯಾದವ್ ಹೊರಗಿನವರಿಗೆ ರೆಡ್ ಕಾರ್ಪೆಟ್ ಹಾಸುತ್ತಿದ್ದರೆ ಕಾರ್ಯಕರ್ತರಲ್ಲಿ ಉತ್ಸಾಹವಿದ್ದರೂ ಹೊರಗಿನ ಪ್ರಭಾವಿಗಳಿಗೆ ಆದ್ಯತೆ ಸಿಗುತ್ತಿರುವುದು ಹಾಲಿ ಶಾಸಕರಲ್ಲಿ ತಲ್ಲಣ ಮೂಡಿಸಿದೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ. ಮೈತ್ರಿಯಿಂದಾಗಿ ಸ್ವಪಕ್ಷದವರಿಗೆ ಟಿಕೆಟ್ ಕಡಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅವರು ಹೊಸ ಸ್ಥಾನಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ಹೊರಗಿನವರ ಪ್ರವೇಶದಿಂದಾಗಿ ಪಕ್ಷದೊಳಗೆ ಮನಸ್ತಾಪ ಸೃಷ್ಟಿಯಾಗುತ್ತಿದೆ. ಪಕ್ಷದ ಶಾಸಕರು ಎಸ್‌ಪಿಯ ಸಂಕಷ್ಟವನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಈ ಸಂದರ್ಭದಲ್ಲಿ ಟಿಕೆಟ್ ಕೈತಪ್ಪುತ್ತಿರುವವರು ಬೇರೆ ಪಕ್ಷಗಳಲ್ಲಿ ಸ್ಥಾನ ಹುಡುಕುತ್ತಿದ್ದಾರೆ. ಇವರ ಮೇಲೆ ಬಿಎಸ್ಪಿ ತೀವ್ರ ನಿಗಾ ಇರಿಸಿದೆ. ಅದರಲ್ಲೂ ಪಶ್ಚಿಮದಲ್ಲಿ ಅಖಿಲೇಶ್‌ ಯಾದವ್‌ ಮತ್ತು ಜಯಂತ್‌ ಚೌಧರಿ ನಡುವೆ ಟಿಕೆಟ್‌ ವಿಚಾರದಲ್ಲಿ ರಾಜಕೀಯ ಗಲಾಟೆ ನಡೆದಿದೆ. ಎಸ್‌ಪಿ ಮತ್ತು ಆರ್‌ಎಲ್‌ಡಿ ನಡುವಿನ ಆಂತರಿಕ ಭಿನ್ನಾಭಿಪ್ರಾಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಬಿಎಸ್‌ಪಿ ನಿರ್ಣಯಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ವಿವಾದಗಳು ಉದ್ಭವಿಸುವ ಸ್ಥಾನಗಳ ಮೇಲೆ ವಿಶೇಷ ನಿಗಾ ವಹಿಸುವ ಮತ್ತು ಪಕ್ಷಕ್ಕೆ ಸಂಪೂರ್ಣ ವರದಿ ನೀಡುವ ಜವಾಬ್ದಾರಿಯನ್ನು ಮಂಡಲ ಸಂಯೋಜಕರಿಗೆ ನೀಡಲಾಗಿದೆ.

Akhilesh Yadav To Fight His 1st UP Polls From Family Stronghold Of Karhal

ಎಸ್‌ಪಿ ಮತ್ತು ಆರ್‌ಎಲ್‌ಡಿ ನಡುವೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಬಿಎಸ್‌ಪಿ ಮುಖ್ಯಸ್ಥರು ಪಶ್ಚಿಮದ ನಾಯಕರಿಗೆ ವಿಶೇಷವಾಗಿ ಸಲಹೆ ನೀಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಘೋಷಣೆಯಾದ ನಂತರವೇ ಇಲ್ಲಿ ರಾಜಕೀಯ ಕಾವು ಕಾಣಿಸುತ್ತಿದೆ. ಆರ್‌ಎಲ್‌ಡಿ ಕಾರ್ಯಕರ್ತರು ಹಲವು ಸ್ಥಾನಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಹಲವು ಟಿಕೆಟ್‌ಗಳ ವಿಚಾರವಾಗಿ ಕೋಲಾಹಲ ಎದ್ದಿದ್ದು, ಜಯಂತ್‌ರ ದೆಹಲಿ ನಿವಾಸದಲ್ಲಿ ಪಿಆರ್‌ ಕಾರ್ಯಕರ್ತರು ಬೀಡುಬಿಟ್ಟಿದ್ದಾರೆ. ಜಯಂತ್ ಮೇಲೆ ಒತ್ತಡ ಹೇರುವ ಕೆಲಸದಲ್ಲಿ ಕಾರ್ಯಕರ್ತರು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

English summary
Samajwadi Party chief Akhilesh Yadav will contest next month's Assembly election - his first - from the Karhal seat in Mainpuri district, which is in his family's home turf.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X