ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ನಾಮಪತ್ರದ ಬಗ್ಗೆ ಆಕ್ಷೇಪಣೆ; ಸೋಮವಾರ ಉತ್ತರಿಸಬೇಕು

|
Google Oneindia Kannada News

ಅಮೇಥಿ (ಉತ್ತರಪ್ರದೇಶ), ಏಪ್ರಿಲ್ 21: ಅಮೇಥಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪಕ್ಷೇತರ ಅಭ್ಯರ್ಥಿಯೊಬ್ಬರು ಶನಿವಾರ ಆಕ್ಷೇಪಣೆ ಸಲ್ಲಿಸಿದ್ದಾರೆ. ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ರಾಹುಲ್ ಗಾಂಧಿ ಅವರ ಪೌರತ್ವ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿನ ಲೋಪದ ಬಗ್ಗೆ ತಕರಾರು ತೆಗೆದಿದ್ದಾರೆ.

ಈ ದೂರು ಹೊರಬಂದ ನಂತರ ಬಿಜೆಪಿಯ ವಕ್ತಾರರಾದ ಜಿ.ವಿ.ಎಲ್.ನರಸಿಂಹ ರಾವ್ ಅವರು, ಈ ವಿಷಯದಲ್ಲಿ ರಾಹುಲ್ ಗಾಂಧಿ ತಾವು ಪರಿಶುದ್ಧರೆಂದು ಸಾಬೀತು ಮಾಡಬೇಕು ಎಂದು ಹೇಳಿದ್ದಾರೆ. ಧ್ರುವ್ ರಾಜ್ ವಕೀಲರಾದ ರವಿಪ್ರಕಾಶ್ ಸಲ್ಲಿಸಿದ ದೂರಿನಲ್ಲಿ ಯು.ಕೆ.ನಲ್ಲಿ ಮಾಡಿರುವ ನೋಂದಣಿ ಪ್ರಕಾರ, ರಾಹುಲ್ ತಾವು ಬ್ರಿಟಿಷ್ ನಾಗರಿಕ ಎಂದು ದಾಖಲೆ ಸಲ್ಲಿಸಿದ್ದಾರೆ.

AICC president Rahul Gandhi’s nomination from Amethi challenged

ಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಕೀಲರಾದ ರಾಹುಲ್ ಕೌಶಿಕ್ ಅವರಿಗೆ ಸೂಚನೆ ನೀಡಿರುವ ಚುನಾವಣೆ ಅಧಿಕಾರಿ, ಈ ಬಗ್ಗೆ ಸೋಮವಾರದಂದು ಉತ್ತರ ನೀಡುವಂತೆ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇಂದ್ರ ಮಿಶ್ರಾ ಮಾತನಾಡಿ, ಆಕ್ಷೇಪಣೆಗೆ ಸೋಮವಾರದಂದು ಕಾನೂನುಬದ್ಧವಾಗಿಯೇ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

English summary
An independent candidate on Saturday raised objections over Congress president Rahul Gandhi’s nomination from Amethi, alleging discrepancies over citizenship and educational qualifications in his election affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X