ವಿಡಿಯೋ: ಇದಪ್ಪ ತಾಕತ್ತು! ಪೊಲೀಸನ ತಲೆ ಹತ್ತಿ ಹೇನು ಆರಿಸಿದ ಕೋತಿ
ನವದೆಹಲಿ, ಅಕ್ಟೋಬರ್ 09: ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದ ಇನ್ಸ್ ಪೆಕ್ಟರ್ ವೊಬ್ಬರ ತಲೆಯನ್ನು ಕೋತಿಯೊಂದು ಮಸಾಜ್ ಮಾಡುತ್ತಿರುವ, ಮತ್ತು ಪೊಲೀಸರ ತಲೆಯಲ್ಲಿ ಹೇನಿದೆಯೇ ಎಂದು ಹುಡುಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿನ ಫಿಲಿಬಿಟ್ ಜಿಲ್ಲೆಯ ಸದಾರ್ ಕೊಟ್ವಾಲಿ ಎಂಬ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ತಮ್ಮ ಪಾಡಿಗೆ ತಾವು ಫೈಲ್ ನೋಡುತ್ತ ಕುಳಿತಿದ್ದರೆ ಕೋತಿಯೊಂದು ಅವರ ಹೆಗಲ ಮೇಲೆ ಹತ್ತು ಅವರ ತಲೆಯನ್ನು ಮಸಾಜ್ ಮಾಡುತ್ತಿತ್ತು.

ಈ ವಿಡಿಯೋವನನ್ನು ಉತ್ತರ ಪ್ರದೇದ ಹೆಚ್ಚುವರಿ ಪೊಲೀಸ್ ಇನ್ಸ್ ಪೆಕ್ಟರ್ ರಾಹುಲ್ ಶ್ರೀವಾಸ್ತವ್ ಟ್ವೀಟ್ ಮಾಡಿದ್ದಾರೆ.
पीलीभीत के इन इन्स्पेक्टर साहब का अनुभव ये बताता है कि यदि आप काम करने में व्यवधान नहीं चाहते हैं तो रीठा, शिकाकाई या अच्छा शैम्पू इस्तेमाल करें ! #Shampoo #Hair #Police #monkeylove #Monkey pic.twitter.com/7sPQtuS2A6
— RAHUL SRIVASTAV (@upcoprahul) October 8, 2019
ಹೇಗಾದರೂ ಮಾಡಿ ಕೋತಿಯನ್ನು ಬೇರೆಡೆಗೆ ಕಳಿಸಬೇಕು ಎಂದು ಉಳಿದ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದರೆ ಇದ್ಯಾವುದರ ಪರಿವೆಯೂ ಇಲ್ಲದೆ ಕೋತಿ ಮತ್ತು ಇನ್ಸ್ ಪೆಕ್ಟರ್ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications