ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಐಶ್ವರ್ಯಾ ರೈ, ಸಚಿನ್ ಸಾಲಿಗೆ ಸೇರಿದ ಅಮಿತ್ ಶಾ

|
Google Oneindia Kannada News

ಉತ್ತರ ಪ್ರದೇಶದ ಹೆಸರಾಂತ ಮಾವು ಬೆಳೆಗಾರ ಹಾಜಿ ಕಲೀಮುಲ್ಲಾ ಅವರು ಮಾವಿನ ಹೊಸ ತಳಿಗೆ ಬಿಜೆಪಿ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರ ಹೆಸರಿಟ್ಟಿದ್ದಾರೆ. ಸುಮಾರು 300ಕ್ಕೂ ಅಧಿಕ ವಿವಿಧ ತಳಿಯ ಮಾವು ಬೆಳೆಯುವ ಭಾರತ ಜನಪ್ರಿಯ 'ಮ್ಯಾಂಗೋ ಮ್ಯಾನ್' ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ತಮ್ಮ ಹೊಸ ತಳಿ ಮಾವಿಗೆ ಗಣ್ಯರ ಹೆಸರಿಡುವ ಪದ್ಧತಿಯನ್ನು ಮುಂದುವರೆಸಿದ್ದಾರೆ.

2015ರಲ್ಲಿ ಹೊಸತಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟು ಸುದ್ದಿಯಾಗಿದ್ದರು. ಏಳನೇ ತರಗತಿ ತನಕ ಮಾತ್ರ ವ್ಯಾಸಂಗ ಮಾಡಿರುವ ಕಲೀಮುಲ್ಲಾ ಅವರು ಸುಮಾರು 300ಕ್ಕೂ ಅಧಿಕ ಮಾವು ತಳಿಗಳನ್ನು ಸಂಶೋಧಿಸಿದ್ದಾರೆ. ಅನಾರ್ಕಲಿ ಹೆಸರಿನ ಎರಡು ಬಣ್ಣದ ಹಣ್ಣಿಗೆ 25,000 ರು ಪ್ರೋತ್ಸಾಹ ಧನವನ್ನು ಪಡೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಸೋನಿಯಾ ಗಾಂಧಿ ಸೇರಿದಂತೆ ಹಲವಾರು ಗಣ್ಯರ ಹೆಸರನ್ನು ಹೊಸ ತಳಿಗಳಿಗೆ ನೀಡಿದ್ದಾರೆ.

ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ? ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ?

ಈ ಬಾರಿ ಹೊಸ ತಳಿಯ ಮಾವಿನಹಣ್ಣಿಗೆ ಗೃಹ ಸಚಿವ ಅಮಿತ್​ ಷಾ ಅವರ ಹೆಸರಿಟ್ಟಿದ್ದಾರೆ. ಅಮಿತ್​ ಷಾ ಅವರು ಸಮಾಜವನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಎಲ್ಲ ಸಮುದಾಯಗಳ ಜನರನ್ನೂ ಒಂದೇ ವೇದಿಕೆಗೆ ತರಲು ಪ್ರಯತ್ನಿಸುತ್ತಾರೆ. ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಹೊಸ ತಳಿಗೆ ಈ ಬಾರಿ ಅಮಿತ್​ ಷಾ ಹೆಸರು ಇಟ್ಟಿದ್ದೇನೆ ಎಂದಿದ್ದಾರೆ.

A new mango named after Amit Shah by Haji Kalimullah

ಕೃಷಿ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕೃತರಾಗಿರುವ ಹಾಜಿ ಕಲೀಮುಲ್ಲಾ ಅವರು ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ. ಮಾವಿನ ತಳಿಗಳಿಗೆ ಐಶ್ವರ್ಯಾ ರೈ, ಸಚಿನ್​ತೆಂಡೂಲ್ಕರ್ ಅಲ್ಲದೆ ಹಲವಾರು ರಾಜಕೀಯ ಮುಖಂಡರ ಹೆಸರನ್ನು ಇಡುತ್ತಾ ಬಂದಿದ್ದಾರೆ. 1999ರಲ್ಲಿ ಒಂದೇ ಮರದಲ್ಲಿ 300 ಬಗೆಯ ಮಾವಿನ ಹಣ್ಣು ಬೆಳೆಸಿ ದಾಖಲೆ ಬರೆದಿದ್ದರು.

ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು

ಮಲಿಹಾಬಾದ್ ನಲ್ಲಿ ಸುಮಾರು 14 ಎಕರೆ ವಿಸ್ತೀರ್ಣದಲ್ಲಿ ಮಾವಿನ ತೋಟ ಹೊಂದಿದ್ದು, ದಶೇಹಾರಿ, ಚಹೌಸಾ, ಲಕ್ನೋ ಸಫೆಡಾ, ಲಾಂಗ್ರಾ ತಳಿಯ ನಿಷ್ಣಾತರಾಗಿದ್ದಾರೆ. ಭೋಪಾಲ್, ರಾಯ್ ಬರೇಲಿ, ಸಹರನ್ ಪುರ್, ಬರಾಬಂಕಿ, ಸಹಜನ್ ಪುರ್ ಮುಂತಾದೆಡೆಗಳಿಂದ ಮಾವಿನ ತಳಿಗಳನ್ನು ಸಂಗ್ರಹಿಸಿ ತಂದು ಕಸಿ ಮಾಡಿ ಹೊಸ ತಳಿಗಳನ್ನು ಸೃಷ್ಟಿಸುತ್ತಿದ್ದಾರೆ.

English summary
The mango has been named after Amit Shah by mango grower Padmashree awardee Haji Kalimullah who is popularly known as the Mango Man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X