Rahul Gandhi : ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸಿ: ರಾಹುಲ್ ಗಾಂಧಿ

ನವದೆಹಲಿ ಮಾರ್ಚ್ 10: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳೊಂದಿಗೆ ಕೊನೆಗೊಂಡಿದ್ದು, "ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. "ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸಿ. ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು. ನಾವು ಇದರಿಂದ ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Recommended Video

      ರಾಹುಲ್ ಗಾಂಧಿ ಆತ್ಮಾವಲೋಕನ ಮಾದಕೊಂಡಿದ್ದು ಹೀಗೆ! | Oneindia Kannada

      ಇಂದು ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದೆ. ಪ್ರವೃತ್ತಿಯಲ್ಲಿ ಪಂಜಾಬ್ ಬಿಟ್ಟು ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಪಂಜಾಬ್‌ನಲ್ಲಿ ಎಎಪಿ ಬಹುಮತದ ಗಡಿ ದಾಟಿದೆ. ಉತ್ತರ ಪ್ರದೇಶ ವಿಧಾನಸಭೆಯ 403, ಪಂಜಾಬ್‌ನ 117, ಉತ್ತರಾಖಂಡದ 70, ಗೋವಾದ 40 ಮತ್ತು ಮಣಿಪುರದ 60 ಸ್ಥಾನಗಳಿಗೆ ಇಂದು ಮತ ಎಣಿಕೆ ನಡೆಯುತ್ತಿದೆ.

      ಅಖಿಲೇಶ್ ತಪ್ಪು ಮಾಡಿಲ್ಲ ಎಂದು ಶರದ್ ಪವಾರ್

      ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಖಿಲೇಶ್ ಯಾದವ್ ಅವರು ದೇಶದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿದ್ದಾರೆ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅಖಿಲೇಶ್ ಹಿಂದೆಂದಿಗಿಂತಲೂ ಉತ್ತಮವಾಗಿ ಹೋರಾಡಿದ್ದಾರೆ ಎಂದು ಪವಾರ್ ಹೇಳಿದ್ದಾರೆ.

      UP Election Result 2022: Humbly accept peoples verdict: Rahul Gandhi

      ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನದಲ್ಲಿ ಗೋರಖ್‌ಪುರ ಕ್ಷೇತ್ರವೂ ಒಂದು. ಈ ಕ್ಷೇತ್ರದಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಹುಮತದೊಂದಿಗೆ ಕೇಸರಿ ಕಮಾಲ್ ಮಾಡಿದೆ. ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಪ್ರಭವತಿ ಶುಕ್ಲಾ ಅವರು ಸೋತಿದ್ದಾರೆ.

      ಇನ್ನೂ ಮೂರನೇ ಹಂತದ ಮತದಾನದಲ್ಲಿ ಕರ್ಹಾಲ್ ಕ್ಷೇತ್ರ ಮತದಾರರ ಗಮನ ಸೆಳೆದಿದೆ. ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತ ಪಡೆದು ಮುನ್ನಡ ಸಾಧಿಸಿದ್ದು ಬಿಜೆಪಿ ಅಭ್ಯರ್ಥಿ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಎಸ್‌.ಪಿ.ಸಿಂಗ್ ಬಘೇಲ್ ಅವರನ್ನು ಸೋಲಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+