ಕಾನ್ಪುರದಲ್ಲಿ ಐಟಿ ದಾಳಿ: ಉದ್ಯಮಿಯ ಮನೆಯಲ್ಲಿ 150 ಕೋಟಿ ರೂ. ಪತ್ತೆ

ಲಕ್ನೋ ಡಿಸೆಂಬರ್ 24: ಸುಗಂಧ ದ್ರವ್ಯ ಉದ್ಯಮಕ್ಕೆ ಪ್ರಸಿದ್ಧಿಯಾದ ಉತ್ತರಪ್ರದೇಶದ ಕಾನ್ಪುರದಲ್ಲಿ ಐಟಿ ದಾಳಿ ಮಾಡಿದೆ. ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ಇಂದು ಐಟಿ ದಾಳಿ ನಡೆಸಿ ಭಾರಿ ಮೊತ್ತದ ದಾಖಲೆ ಇಲ್ಲದ ಹಣವನ್ನು ವಶಪಡಿಸಿಕೊಂಡಿದೆ. ಇದುವರೆಗೆ 150 ಕೋಟಿ ರೂ. ನಗದು ವಶಪಡಿಸಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ಶುಕ್ರವಾರ ಬೆಳಗ್ಗೆ ತಿಳಿಸಿವೆ. ದಾಳಿಯ ಫೋಟೋಗಳಲ್ಲಿ ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ಪರ್ವತದಂತೆ ಹಣವನ್ನು ತುಂಬಿರುವುದನ್ನು ತೋರಿಸಲಾಗಿದೆ. ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಪ್ರತಿ ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ.

ಮತ್ತೊಂದು ಫೋಟೋದಲ್ಲಿ ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳು ಕೋಣೆಯ ಮಧ್ಯದಲ್ಲಿ ಹರಡಿರುವ ಹಣದ ಮುಂದೆ ಕುಳಿತಿರುವುದನ್ನು ತೋರಿಸಲಾಗಿದೆ. ಇನ್ನೂ ಹೆಚ್ಚಿನ ಹಣದ ರಾಶಿಯ ಸುತ್ತ, ನೋಟು ಎಣಿಸುವ ಯಂತ್ರಗಳನ್ನು ಇಡಲಾಗಿದೆ. ವಶಪಡಿಸಿಕೊಂಡ ಅಧಿಕ ಮೊತ್ತದ ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ.

ಗುರುವಾರದಿಂದ ದಾಳಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‌ನಲ್ಲಿ ಐಟಿ ದಾಳಿ ಮಾಡಿದೆ. ತೆರಿಗೆ ವಂಚನೆಗಾಗಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ದಾಳಿಗೂ ಮುನ್ನ ವಿವರಗಳನ್ನು ಪತ್ತೆಹಚ್ಚಿದ ಐಟಿ ಅಥವಾ ಆದಾಯ ತೆರಿಗೆ ಇಲಾಖೆ ದೊಡ್ಡ ಕುಳಗಳ ಬಲೆಗೆ ಗಾಳ ಬೀಸಿದೆ. ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಕಲಿ ಇನ್‌ವಾಯ್ಸ್‌ಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ.

150 Crore (And Counting) Found At UP Businessmans Home In Tax Raid

ತಲಾ 50,000 ಮತ್ತು 200 ಕ್ಕೂ ಹೆಚ್ಚು ಇನ್‌ವಾಯ್ಸ್‌ಗಳನ್ನು ಜಿಎಸ್‌ಟಿ ಪಾವತಿಗಳಿಲ್ಲದೆ ರಚಿಸಲಾಗಿದೆ. ವ್ಯಾಪಾರಿಯ ಗೋದಾಮಿನೊಳಗೆ ನಾಲ್ಕು ಟ್ರಕ್‌ಗಳಲ್ಲಿ ಇವು ಕಂಡುಬಂದಿವೆ. ಎಲ್ಲಾ ನಾಲ್ಕು ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೈನ್ ಅವರ ಮನೆ ಮೇಲೆ ದಾಳಿ ನಡೆಸಿದ ನಂತರ ನಕಲಿ ಬಿಲ್‌ಗಳು ಮತ್ತು ನಕಲಿ ಕ್ರೆಡಿಟ್‌ಗಳ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (ಸಿಬಿಐಸಿ) ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ. ದಾಳಿಯ ಸಮಯದಲ್ಲಿ ತಂಡವು ತೆರಿಗೆ ಪಾವತಿಸದ ಹಣವನ್ನು ವಶಕ್ಕೆ ಪಡೆದಿದೆ. ಇನ್ನು ಈ ವ್ಯಕ್ತಿಗಳು ಯಾವುದೇ ಬಿಲ್ ಮತ್ತು ಇ-ವೇ ಬಿಲ್ ಇಲ್ಲದೇ ವಸ್ತುಗಳನ್ನು ಕಳುಹಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಇದು 2-3 ಪಕ್ಷಗಳನ್ನು ಒಳಗೊಂಡಿರುತ್ತದೆ. ನಮಗೆ ಬಂದ ಬಿಲ್‌ಗಳೆಲ್ಲವೂ ನಕಲಿಯಾಗಿದೆ. ಅನೇಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಪ್ರಸ್ತುತ ದಾಳಿಗಳು ಇನ್ನೂ ನಡೆಯುತ್ತಿವೆ.

150 Crore (And Counting) Found At UP Businessmans Home In Tax Raid

ಈ ವೇಳೆ ಕಂಪನಿ ಬಿಲ್‌ಗಳನ್ನು ಪಾವತಿಸದೆ ಮತ್ತು ತೆರಿಗೆ ಪಾವತಿಸದೆ ಒಂದು ಸ್ಥಳದಿಂದ ಇನ್ನೊಂದಕ್ಕೆ ಸರಕುಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇಲ್ಲಿಯವರೆಗೆ ಸುಮಾರು 150 ಕೋಟಿ ನಗದು ಹಣ ಬಂದಿದ್ದು, ಯಂತ್ರಗಳ ಮೂಲಕ ಲೆಕ್ಕ ಹಾಕಲಾಗುತ್ತಿದೆ. ದಾಳಿ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳನ್ನು ನೀಡಲಾಗುವುದು.

150 Crore (And Counting) Found At UP Businessmans Home In Tax Raid

ದಾಳಿಯ ವಿಡಿಯೋ ಕೂಡ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂದು ಕೋಣೆಯ ಸುತ್ತಲೂ ನೋಟುಗಳ ಬಂಡಲ್‌ಗಳು ಇರುವುದನ್ನು ವೀಡಿಯೊದಲ್ಲಿ ನೋಡಬಹುದು. ದಾಳಿಯ ತಂಡದ ಸದಸ್ಯರು ಆ ನೋಟುಗಳನ್ನು ಯಂತ್ರಗಳೊಂದಿಗೆ ಎಣಿಸುತ್ತಿರುವುದು ಕಂಡು ಬಂದಿದೆ. ಈ ಅಧಿಕ ಹಣದ ಪತ್ತೆಯಾದ ಬೆನ್ನಲ್ಲೆ ಸಿಬಿಐಸಿ ಮತ್ತು ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಯಂತ್ರಗಳಿಗೆ ಕರೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+