ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಗಡಿ ಪಾರು: ನ್ಯಾಯಾಲಯದ ಮೊರೆ ಹೋಗುತ್ತೇನೆಂದ ಮಲ್ಯ

|
Google Oneindia Kannada News

ಲಂಡನ್, ಫೆಬ್ರವರಿ 05: ಸಾಲಮಾಡಿ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ಮಲ್ಯ ತಾನು ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಾಕಿಕೊಂಡಿರುವ ವಿಜಯ್ ಮಲ್ಯ, ಡಿಸೆಂಬರ್ 10, 2018 ರಂದು ಗಡಿಪಾರಿನ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಾಡಿದಾಗ ಮೇಲ್ಮನವಿ ಸಲ್ಲಿಸುವ ಉದ್ದೇಶ ಇತ್ತು. ಆದರೆ ಗೃಹ ಕಾರ್ಯದರ್ಶಿ ಅವರ ನಿರ್ಧಾರ ಪ್ರಕಟವಾಗಲು ಕಾಯುತ್ತಿದೆ ಎಂದು ಮಲ್ಯ ಬರೆದುಕೊಂಡಿದ್ದಾರೆ.

Vijay Mallya to appeal against his extradition

ಇಂದು ಗೃಹ ಕಾರ್ಯದರ್ಶಿ ಅವರು ಮಲ್ಯ ಗಡಿಪಾರಿಗೆ ಒಪ್ಪಿಗೆ ನೀಡಿದ್ದು, ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶವನ್ನು ಸಹ ನೀಡಲಾಗಿದೆ. ಹಾಗಾಗಿ ಮಲ್ಯ ಅವರು ಮೇಲ್ಮನವಿ ಸಲ್ಲಿಸುವುದಾಗಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

13,700 ಕೋಟಿ ಸಾಲ ಪಾವತಿಸದೆ ದೇಶಬಿಟ್ಟು ಪರಾರಿ ಆಗಿರುವ ವಿಜಯ್ ಮಲ್ಯ ಅವರು ದೇಶಬ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಇನ್ನಿಲದ ಯತ್ನಗಳನ್ನು ಮಾಡುತ್ತಿದೆ.

ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

English summary
Vijay Mallya to appeal against his extradition, he share information through twitter. Britain home secretory office said yes to Vijay Mallya's extradition to India, and gives 14 days time to appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X