• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಕೊರೊನಾ ಲಸಿಕೆ ಪ್ರಮಾಣಪತ್ರದ ಕುರಿತು ಬ್ರಿಟನ್ ಹೇಳಿದ್ದೇನು?

|
Google Oneindia Kannada News

ಲಂಡನ್, ಸೆಪ್ಟೆಂಬರ್ 23: ವಿದೇಶದಿಂದ ಬ್ರಿಟನ್‌ಗೆ ಬರುವವರ ಲಸಿಕೆ ಪ್ರಮಾಣಪತ್ರಗಳು ಕನಿಷ್ಠ ಮಾನದಂಡಗಳನ್ನು ಒಳಗೊಂಡಿರುಬೇಕು ಎಂದು ಬ್ರಿಟನ್ ಹೇಳಿದೆ. ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಹಂತ ಹಂತವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ಬ್ರಿಟನ್ ನೀತಿಯಲ್ಲಿ ಬೇರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ಪ್ರವೇಶ ಕಲ್ಪಿಸಬೇಕಾದರೆ, ಫೈಜರ್, ಆಕ್ಸ್ಫರ್ಡ್ ಆಸ್ಟ್ರಾಜೆನಿಕಾ, ಮಾಡರ್ನಾ ಮತ್ತು ಜಾನ್ಸನ್ ಲಸಿಕೆಗಳನ್ನು ಪಡೆದವರ ಪ್ರಮಾಣಪತ್ರಗಳನ್ನು ಪರಿಗಣಿಸುತ್ತಿದ್ದೇವೆ.

ಕರ್ನಾಟಕ: ಸಕ್ರಿಯ ಕೊರೊನಾ ಪ್ರಕರಣಗಳೊಂದಿಗೆ ಪರೀಕ್ಷೆ ಪ್ರಮಾಣವೂ ಇಳಿಕೆಕರ್ನಾಟಕ: ಸಕ್ರಿಯ ಕೊರೊನಾ ಪ್ರಕರಣಗಳೊಂದಿಗೆ ಪರೀಕ್ಷೆ ಪ್ರಮಾಣವೂ ಇಳಿಕೆ

ಈಗ ಈ ಪಟ್ಟಿಗೆ ಆಸ್ಟ್ರಜೆನಿಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವ್ಯಾಕ್ಸೇವ್ರಿಯಾ, ಮಾಡರ್ನಾ ಟಕೆಡಾ ಲಸಿಕೆಯ ಪ್ರಮಾಣಪತ್ರಗಳನ್ನು ಸೇರಿಸಲಾಗಿದೆ ಎಂದು ಬ್ರಿಟನ್ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಹಾಗೂ ಪ್ರಯಾಣವನ್ನು ಸುರಕ್ಷಿತ, ಸ್ಥಿರ ರೀತಿಯಲ್ಲಿ ಪುನಾರಂಭಗೊಳಿಸುವುದು ನಮ್ಮ ಆದ್ಯತಾಗಿದೆ. ಆದ್ದರಿಂದ ಎಲ್ಲಾ ದೇಶಗಳ ಲಸಿಕೆ ಪ್ರಮಾಣಪತ್ರಗಳು ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಬೇಕು ಎಂದು ಬ್ರಿಟನ್ ಹೇಳಿದ್ದು ಭಾರತವೂ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ನಾವು ನಮ್ಮ ಹಂತ ಹಂತದ ವಿಧಾನವನ್ನು ಜಾರಿಗೆ ತರಲು ಕೆಲಸ ಮಾಡುತ್ತೇವೆ ಎಂದು ಬ್ರಿಟನ್ ಹೇಳಿದೆ.

ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟನ್ ನ ಪ್ರಯಾಣ ಸಲಹೆಯ ಪಟ್ಟಿಯ ಅರ್ಹತೆಯ ವಿಭಾಗಕ್ಕೆ ಸೇರಿಸಲಾಗುತ್ತಿದೆ. ಆದರೆ ಲಸಿಕೆ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನುಮೋದನೆ ಪಡೆದುಕೊಂಡಿರುವ 18 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಇಲ್ಲ. ಪರಿಣಾಮ ಭಾರತದಿಂದ ಬ್ರಿಟನ್ ಗೆ ಪ್ರಯಾಣಿಸುವವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಿ 10 ದಿನಗಳ ಕ್ವಾರಂಟೈನ್ ನ್ನು ವಿಧಿಸಲಾಗುತ್ತಿದೆ.

ಈ ಕಾರಣದಿಂದಾಗಿ ಹಲವಾರು ಗೊಂದಲಗಳುಂಟಾಗಿದ್ದು, ಬ್ರಿಟನ್ ಸರ್ಕಾರದ ಮೂಲಗಳು ಸೆ.22 ರಂದು ನೀಡಿರುವ ಮಾಹಿತಿಯ ಪ್ರಕಾರ, ಅನುಮೋದಿತ ರಾಷ್ಟ್ರಗಳ ಪಟ್ಟಿಗಳನ್ನು ನಿರಂತರ ಪರಿಗಣನೆಗೆ ಮುಕ್ತವಾಗಿಟ್ಟಿದೆ. ಆದರೆ ಭಾರತದ ಲಸಿಕೆ ಪ್ರಮಾಣಪತ್ರವನ್ನು ಅನುಮೋದಿಸುವುದಕ್ಕೆ ಬೇಕಾಗಿರುವ ಮಾನದಂಡಗಳ ಪೂರೈಕೆ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ತಾರತಮ್ಯ ಕ್ರಮದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.

ಬ್ರಿಟನ್ ಸರ್ಕಾರ ಇಂದು ಪರಿಷ್ಕೃತ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದವರು ಬ್ರಿಟನ್ ಪ್ರವೇಶಿಸಿದ ಬಳಿಕ ಕಡ್ಡಾಯವಾಗಿ 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕಿಲ್ಲ ಎಂದು ಹೇಳಿದೆ.

ಈ ಮುಂಚೆ ಬ್ರಿಟನ್ ಸರ್ಕಾರ ಭಾರತೀಯರು ಎರಡೂ ಡೋಸ್‌ ಕೋವಿ​ಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದರೂ 10 ದಿನ ಕಡ್ಡಾಯವಾಗಿ ಕ್ವಾರಂಟೈನ್‌ ಆಗಬೇಕು ಎಂಬ ನಿಯಮ ಜಾರಿಗೊಳಿಸಿತ್ತು. ಭಾರತ ಸರ್ಕಾರದ ಆಕ್ಷೇಪದ ನಂತರ ಪ್ರಯಾಣಿಕರ ನಿಯಮವನ್ನು ಸಡಿಲಗೊಳಿಸಿದೆ.

ಆಸ್ಟ್ರಾಜೆನೆಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ, ಮೊಡೆರ್ನಾ ಟಕೆಡಾ ಲಸಿಕೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬ್ರಿಟನ್‌ನ ಸಾರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಚಿವಾಲಯಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಬ್ರಿಟನ್ ಪರವಾನಗಿ ಪಡೆದ ಉತ್ಪನ್ನದ ವಿರುದ್ಧ "ತಾರತಮ್ಯ" ಕ್ರಮದ ಬಗ್ಗೆ ಸರಿಯಲ್ಲ ಎಂದಿದ್ದ ಭಾರತ, 10 ದಿನ ಕ್ವಾರಂಟೈನ್ ನಿಯಮ ಕೈಬಿಡದಿದ್ದರೆ ತಿರುಗೇಟು ನೀಡುವಂತಹ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

English summary
A day after UK added Serum Institute’s Covishield to its expanded travel advisory, the government has said Covid-19 vaccine certification from all countries must meet a minimum criteria and it is working with India on a phased approach to its international travel norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X