ಬ್ರಿಟನ್ ರಾಜ ಮನೆತನಕ್ಕೆ ಯುವರಾಜನ ಆಗಮನ
ಲಂಡನ್, ಮೇ 06 : ಶತಮಾನದ ರಾಯಲ್ ವೆಡ್ಡಿಂಗ್‌ಗೆ ಸಾಕ್ಷಿಯಾಗಿದ್ದ ಲಂಡನ್‌ನಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಬ್ರಿಟನ್ ರಾಜಮನೆತನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್‌ನಲ್ಲಿ ಸಂಭ್ರಮ ಮನೆ ಮಾಡಿದೆ.
ಮೇಘನ್ ಆರ್ಕೆಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಆರ್ಕೆಲ್ ದಂಪತಿಗೆ ಗಂಡು ಮಗು ಜನಿಸಿದೆ ಎಂದು ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ಸೋಮವಾರ ಘೋಷಣೆ ಮಾಡಿದೆ.
2018ರ ಮೇ ತಿಂಗಳಿನಲ್ಲಿ ಥೇಮ್ಸ್ ನದಿ ತಟದಲ್ಲಿರುವ ವಿಂಡ್ಸರ್ ಕ್ಯಾಸೆಲ್‌ನಲ್ಲಿ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಆರ್ಕೆಲ್ ವಿವಾಹ ನಡೆದಿತ್ತು. ಅಕ್ಟೋಬರ್‌ನಲ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದ್ದರು.

ಬ್ರಿಟನ್ ರಾಜಮನೆತನದ ಕುಡಿ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕದ ನಟಿ ಮೇಘನ್ ಮರ್ಕೆಲ್ ವಿವಾಹ ಜಗತ್ತಿನ ಗಮನ ಸೆಳೆದಿತ್ತು. ದೇಶ ವಿದೇಶದ ಸುಮಾರು 600ಕ್ಕೂ ಅಧಿಕ ಗಣ್ಯಾತಿಗಣ್ಯರು, ಹಾಲಿವುಡ್ ನಟ, ನಟಿಯರು ಈ ವೈಭವದ ವಿವಾಹಕ್ಕೆ ಸಾಕ್ಷಿಯಾಗಿದ್ದರು.
ವಿವಾಹ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಮುಂಬೈ ಮೂಲದ ಮಹಿಳಾ ಕಾರ್ಯಕರ್ತೆ ಸುಹಾನಿ ಸೇರಿದಂತೆ ಹಲವಾರು ಭಾರತೀಯರು ಪಾಲ್ಗೊಂಡಿದ್ದರು.












Click it and Unblock the Notifications