ಲಂಡನ್ : ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ ಬಂಧನ
ಲಂಡನ್, ಮಾರ್ಚ್ 20: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ವಂಚನೆ ಹಗರಣದ ರೂವಾರಿ, ದೇಶ ಭ್ರಷ್ಟ ಉದ್ಯಮಿ ನೀರವ್ ಮೋದಿ ಅವರನ್ನು ಲಂಡನ್ನಿನಲ್ಲಿ ಬಂಧಿಸಲಾಗಿದೆ.
ದೇಶಭ್ರಷ್ಟ ಉದ್ಯಮಿ, ಪಿಎನ್‌ಬಿ ವಂಚನೆ ಪ್ರಕರಣದ ರೂವಾರಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿದೆ. ಮಾ.25ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಕೋರಿಕೆಯನ್ನು ಸಲ್ಲಿಸಿದೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟೇಟ್ ಬಂಧನದ ವಾರೆಂಟ್ ಹೊರಡಿಸಿದ್ದು, ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಇಂದು ಮಧ್ಯಾಹ್ನ 3.30ರ ಸುಮಾರಿಗೆ ಕೋರ್ಟಿನ ಮುಂದೆ ಹಾಜರು ಪಡಿಸುತ್ತಿದ್ದಾರೆ. ನೀರವ್ ಮೋದಿ ಅವರು ಜಾಮೀನಿಗೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಧಾನ ಆರೋಪಿ ನೀರವ್ ಮೋದಿ ಪ್ರಸ್ತುತ ಪಶ್ಚಿಮ ಲಂಡನ್‌ನ 80 ಲಕ್ಷ ಪೌಂಡ್ ಬೆಲೆಯ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಭಾರತ ನೀರವ್ ಮೋದಿ ಗಡಿಪಾರಿಗೆ ಮನವಿ ಸಲ್ಲಿಸಿದೆ ಎಂದು ಯುಕೆಯ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಕೋರ್ಟ್‌ಗೆ ಹೇಳಿದ್ದಾರೆ.












Click it and Unblock the Notifications