ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವವಿದ್ಯಾಲಯದಲ್ಲಿ ಗೋಮಾಂಸಕ್ಕೆ ನಿಷೇಧ ಹೇರಿದ ವಿದ್ಯಾರ್ಥಿಗಳು

|
Google Oneindia Kannada News

ಲಂಡನ್, ನ. 18: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಯ ಕೆಟರಿಂಗ್ ಮಳಿಗೆಗಳಲ್ಲಿ ಗೋಮಾಂಸ ಹಾಗೂ ಕುರಿಮಾಂಸ ಮಾರಾಟಕ್ಕೆ ನಿಷೇಧ ಹೇರಲು ಮುಂದಾಗಿದ್ದಾರೆ. ಗ್ರೀನ್ ಹೌಸ್ ಪರಿಣಾಮ ದಕ್ಕಿಸಲು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಕ್ಸ್‌ಫರ್ಡ್ ವಿವಿ ಯೂನಿಯನ್ ಈ ನಿರ್ಣಯ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳ ಕೌನ್ಸಿಲ್ ನಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆದು ಬೀಫ್ ಹಾಗೂ ಮಟನ್ ವಿರುದ್ಧ ಅಭಿಮತ ವ್ಯಕ್ತವಾಗಿದೆ. ಯೂನಿಯನ್ ಕಾರ್ಯಕಾರಿ ಸದಸ್ಯರು ಭಾರಿ ಲಾಬಿ ನಡೆಸುತ್ತಿದ್ದು, ವಿವಿ ಕ್ಯಾಂಪಸಲ್ಲಿ ಬೀಫ್ ಬ್ಯಾನ್ ಮಾಡಲು ಮುಂದಾಗಿದ್ದಾರೆ.

ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?

ನಿಷೇಧದ ಪರಿಣಾಮ ವಿವಿ ನಿಯಂತ್ರಣದ ಕೆಟರಿಂಗ್ ಔಟ್ ಲೆಟ್ ಹಾಗೂ ವಿವಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಬೀಫ್, ಮಟನ್ ಸಿಗುವುದಿಲ್ಲ ಆದರೆ, ಕಾಲೇಜ್ ಹಾಲ್, ಕೆಫೆಗಳಲ್ಲಿ ಲಭ್ಯವಿರಲಿದೆ.

Oxford University students vote to ban beef from campus

ಕಾರ್ಬನ್ ಫುಟ್ ಪ್ರಿಂಟ್ ಕಡಿಮೆ ಮಾಡಲು ಬೇರೆ ವಿಧಾನಗಳಿವೆ. ಆಹಾರ ಪದ್ಧತಿ ಅನುಸರಿಸಲು ಯೂನಿಯನ್ ನವರು ಒತ್ತಡ ಹೇರದಿದ್ದರೆ ಸಾಕು, ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಬಗ್ಗೆ ಗೌರವ ನೀಡಬೇಕಾಗುತ್ತದೆ ಎಂದು ಯೂನಿಯನ್ ನಿರ್ಣಯದ ಬಗ್ಗೆ ಟೀಕೆ ಕೂಡಾ ಕೇಳಿ ಬಂದಿವೆ.

ಯುಕೆಯಲ್ಲಿ ಇತ್ತೀಚೆಗೆ ಗೋ ಗ್ರೀನ್, ವೇಗಾನಿಸಂ, ಮಾಂಸ ಉದ್ಯಮದಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಹೆಚ್ಚಿನ ಜನಪ್ರಿಯತೆ ಹಾಗೂ ಜಾಗೃತಿ ಉಂಟಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚಿನ ಮಟ್ಟಿಗೆ ಅನುಷ್ಠಾನಗೊಳ್ಳುತ್ತಿದೆ.

ಕಳೆದ ವರ್ಷ ಕೇಂಬ್ರಿಜ್ ವಿವಿ, ಲಂಡನ್ ವಿವಿ ಹಾಗೂ ಗೋಲ್ಡ್ ಸ್ಮಿತ್ಸ್ ಕೂಡಾ ತಮ್ಮ ಕೆಫೆ ಮೆನುನಿಂದ ಬೀಫ್ ನಿಷೇಧಿಸಿವೆ. ಕಾರ್ಬನ್ ಹೊರಸೂಸುವಿಕೆಯನ್ನು ಶೇ 33ರಷ್ಟು ತಗ್ಗಿಸಲಾಗಿದೆ ಎಂದು ವಿವಿ ಹೇಳಿದೆ. ಸರಿ ಸುಮಾರು 44 ವಿವಿಗಳು ವೆಗಾನ್ ಕೆಫೆ, ಶಾಖಾಹಾರವನ್ನು ಅಳವಡಿಸಿಕೊಂಡಿವೆ. ಇನ್ನು 18 ವಿವಿಗಳು ಈ ಪದ್ಧತಿ ಜಾರಿಗೊಳಿಸಲು ಮುಂದಾಗಿರುವ ಸುದ್ದಿಯಿದೆ.

English summary
Students of Oxford University in the UK have voted to ban beef and lamb at catering outlets with the aim of reducing greenhouse emissions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X