• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ಫೋಸಿಸ್ ನಾರಾಯಣ ಮೂರ್ತಿ ಮಗಳು ಬ್ರಿಟನ್ ಎಲಿಜಬೆತ್ ರಾಣಿಗಿಂತ ಶ್ರೀಮಂತೆ!

|

ಲಂಡನ್, ಡಿಸೆಂಬರ್ 03: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ಹಾಗೂ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಅವರ ಪತ್ನಿ ಅಕ್ಷತಾ ಮೂರ್ತಿ ಹಣಕಾಸಿನ ವ್ಯವಹಾರಗಳನ್ನು ಬಹಿರಂಗಪಡಿಸದೇ ಇರುವುದು ಮುಳುವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ನಡೆಸಿದ ತನಿಖೆಯ ಪ್ರಕಾರ, ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮ ಬಹು ಮಿಲಿಯನ್ ಪೌಂಡ್‌ ಮೌಲ್ಯದ ಆಸ್ತಿಯನ್ನು ಘೋಷಿಸದೆ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಆಕೆ ರಾಣಿ ಎಲಿಜಬೆತ್‌ಗಿಂತ ಶ್ರೀಮಂತೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇಂಗ್ಲೆಂಡ್ 300 ವರ್ಷಗಳಲ್ಲೇ ಕಾಣದ ಭೀಕರ ಆರ್ಥಿಕ ಹಿಂಜರಿತ ಎದುರಿಸಲಿದೆ!

ಅಕ್ಷತಾ ಮೂರ್ತಿ ತಮ್ಮ ತಂದೆಯ ಇನ್ಪೋಸಿಸ್ ಕಂಪನಿಯಲ್ಲಿ ಸುಮಾರು 430 ಮಿಲಿಯನ್ ಪೌಂಡ್‌ (ಅಂದಾಜು 4,200 ಕೋಟಿ) ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಆದರೆ ಬ್ರಿಟನ್ ಸೇರಿದಂತೆ 15 ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್ ಎಲೆಜಬೆತ್‌ಗಿಂತ ಶ್ರೀಮಂತೆ ಎಂದು ಬಹಿರಂಗವಾಗಿದೆ. ಕ್ವೀನ್ ಎಲಿಜಬೆತ್ ಆಸ್ತಿಯು ಸುಮಾರು 350 ಮಿಲಿಯನ್ ಪೌಂಡ್ (ಅಂದಾಜು 3,400 ಕೋಟಿ ರೂ.) ನಷ್ಟಿದೆ.

ಇಂಗ್ಲೆಂಡ್‌ನ ಕಾನೂನಿನ ಪ್ರಕಾರ ದೇಶದ ಎಲ್ಲಾ ಮಂತ್ರಿಗಳು ತಮ್ಮ ಕುಟುಂಬ ಸದಸ್ಯರ ಹಣಕಾಸಿನ ವ್ಯವಹಾರಗಳನ್ನು ಬಹಿರಂಗವಾಗಿ ಪ್ರಕಟಿಸಬೇಕಾಗುತ್ತದೆ. ಆದರೆ ಅಕ್ಷತಾ ಮೂರ್ತಿ ತಮ್ಮ ಆಸ್ತಿಯನ್ನು ಘೋಷಿಸದೇ ಇರುವುದು, ಪತಿ ರಿಷಿ ಸುನಕ್‌ ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ತುತ್ತಾಗುವ ಸಾಧ್ಯತೆ ಇದೆ.

ದಿ ಗಾರ್ಡಿಯನ್ ಪತ್ರಿಕೆ ಇನ್ನಷ್ಟು ಮಾಹಿತಿಯನ್ನು ಹೊರಹಾಕಿದ್ದು, ಅಕ್ಷತಾ ಮೂರ್ತಿ ಇಂಗ್ಲೆಂಡ್‌ನಲ್ಲಿ ಅಮೆಜಾನ್‌ನಲ್ಲಿ 900 ಮಿಲಿಯನ್ ಪೌಂಡ್ ಜಂಟಿ ಸಹಭಾಗಿತ್ವ ಸೇರಿದಂತೆ ಕನಿಷ್ಠ ಆರು ಕಂಪನಿಗಳಲ್ಲಿ ಅಘೋಷಿತ ಪಾಲನ್ನು(ಷೇರುಗಳು) ಹೊಂದಿದ್ದಾರೆ ಎನ್ನಲಾಗಿದೆ.

English summary
According To the an investigation by british newspaper the Guardian, Narayana murthy daughter Akshata Murthy's multimillion-pound assets which make her richer than Queen Elizabeth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X