• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಮೂಲದ ವೈದ್ಯೆ ಕೊರೊನಾಗೆ ಬಲಿ: ಕಂಬನಿ ಮಿಡಿದ ಲಂಡನ್

|

ಲಂಡನ್, ಮೇ 15: ಮಾರಣಾಂತಿಕ ಕೊರೊನಾ ವೈರಸ್ ಗೆ ಕೇರಳ ಮೂಲದ ವೈದ್ಯೆ ಡಾ.ಪೂರ್ಣಿಮಾ ನಾಯರ್ ಯು.ಕೆನಲ್ಲಿ ಬಲಿಯಾಗಿದ್ದಾರೆ. 56 ವರ್ಷ ವಯಸ್ಸಿನ ಡಾ.ಪೂರ್ಣಿಮಾ ನಾಯರ್ ಬಿಷಪ್ ಆಕ್ ಲ್ಯಾಂಡ್ ನಲ್ಲಿನ ಸ್ಟೇಷನ್ ವ್ಯೂ ಮೆಡಿಕಲ್ ಸೆಂಟರ್ ನಲ್ಲಿ ಜೆನರಲ್ ಪ್ರ್ಯಾಕ್ಟೀಷನರ್ ಆಗಿದ್ದರು.

ಮಾರ್ಚ್ 20 ರಂದು ಕೋವಿಡ್-19 ರೋಗ ಲಕ್ಷಣಗಳು ಕಂಡುಬಂದ ಮೇಲೆ ಡಾ.ಪೂರ್ಣಿಮಾ ನಾಯರ್ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್ 27 ರಂದು ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಡಾ.ಪೂರ್ಣಿಮಾ ನಾಯರ್ ಮೇ 12 ರಂದು ಮೃತಪಟ್ಟಿದ್ದಾರೆ.

ಮನುಷ್ಯನನ್ನು ಕೊರೊನಾ ವೈರಸ್ ಸಾವಿನ ದವಡೆಗೆ ದೂಡುವುದು ಹೇಗೆ? ಇಲ್ಲಿದೆ ಇಂಚಿಂಚೂ ಮಾಹಿತಿ

ಯು.ಕೆ ನಲ್ಲಿನ ನ್ಯಾಷನಲ್ ಹೆಲ್ತ್ ಸರ್ವೀಸ್ ನಲ್ಲಿ ಫ್ರಂಟ್ ಲೈನ್ ವಾರಿಯರ್ ಆಗಿದ್ದ ಡಾ.ಪೂರ್ಣಿಮಾ ನಾಯರ್ ಸಾವಿಗೆ ರಾಜಕಾರಣಿಗಳು, ಸಹೋದ್ಯೋಗಿಗಳು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಕಣ್ಣೀರಿಟ್ಟ ಆಸ್ಪತ್ರೆ ಸಿಬ್ಬಂದಿ

ಕಣ್ಣೀರಿಟ್ಟ ಆಸ್ಪತ್ರೆ ಸಿಬ್ಬಂದಿ

ಕೇರಳ ಮೂಲದ ಡಾ.ಪೂರ್ಣಿಮಾ ನಾಯರ್ 1994 ರಲ್ಲಿ ಯು.ಕೆ ಗೆ ಶಿಫ್ಟ್ ಆದರು. ಬಿಷಪ್ ಆಕ್ ಲ್ಯಾಂಡ್ ನಲ್ಲಿನ ಸ್ಟೇಷನ್ ವ್ಯೂ ಮೆಡಿಕಲ್ ಸೆಂಟರ್ ನಲ್ಲಿ ಡಾ.ಪೂರ್ಣಿಮಾ ನಾಯರ್ ಕಾರ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಹೊಂದಿಲ್ಲದ ಡಾ.ಪೂರ್ಣಿಮಾ ನಾಯರ್ ನಿಧನಕ್ಕೆ ಆಸ್ಪತ್ರೆಯ ಸಹೋದ್ಯೋಗಿಗಳು ಕಣ್ಣೀರು ಸುರಿಸಿದ್ದಾರೆ.

ಸ್ಮರಿಸಿದ ಮಾಜಿ ಯೂನಿಯನ್ ಬ್ರಾಂಚ್ ಸೆಕ್ರೆಟರಿ

ಸ್ಮರಿಸಿದ ಮಾಜಿ ಯೂನಿಯನ್ ಬ್ರಾಂಚ್ ಸೆಕ್ರೆಟರಿ

''ನನ್ನ ಪ್ರಾಣ ಉಳಿಸಿದ ದೇವತೆ ಆಕೆ'' ಎಂದು ಮಾಜಿ ಯೂನಿಯನ್ ಬ್ರಾಂಚ್ ಸೆಕ್ರೆಟರಿ ಫಿಲ್ ಗ್ರಹಾಮ್, ಡಾ.ಪೂರ್ಣಿಮಾ ನಾಯರ್ ರನ್ನು ಸ್ಮರಿಸಿದ್ದಾರೆ. 2013 ರಲ್ಲಿ ಅಪರೂಪದ Guillain-Barre Syndrome ಗೆ ಒಳಗಾಗಿದ್ದ ಫಿಲ್ ಗ್ರಹಾಮ್ ಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡಿದ್ದವರು ಇದೇ ಡಾ.ಪೂರ್ಣಿಮಾ ನಾಯರ್.

ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಷ್ಯಾ.!

ತುಂಬಲಾರದ ನಷ್ಟ

ತುಂಬಲಾರದ ನಷ್ಟ

ಯು.ಕೆ ನಲ್ಲಿನ ನ್ಯಾಷನಲ್ ಹೆಲ್ತ್ ಸರ್ವೀಸ್ ಗಾಗಿ ಡಾ.ಪೂರ್ಣಿಮಾ ನಾಯರ್ 26 ವರ್ಷ ಸೇವೆ ಸಲ್ಲಿಸಿದ್ದರು. ಡಾ.ಪೂರ್ಣಿಮಾ ನಾಯರ್ ನಿಧನದಿಂದ ಎನ್.ಎಚ್.ಎಸ್ ಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಲ್ಲಿನ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

ದುರಾದೃಷ್ಟಕರ

ದುರಾದೃಷ್ಟಕರ

ಇನ್ನೂ ಡರ್ಹಾಮ್ ಕೌಂಟಿ ಕೌನ್ಸಿಲರ್ ಜಾಯ್ ಅಲೆನ್, ''ಡಾ.ಪೂರ್ಣಿಮಾ ನಾಯರ್ ಗೌರವಾನ್ವಿತ ವೈದ್ಯೆ. ಹಲವು ರೋಗಿಗಳ ಜೀವವನ್ನು ಆಕೆ ಉಳಿಸಿದ್ದಾರೆ. ಕೋವಿಡ್-19 ನಿಂದ ಅವರು ಮೃತಪಟ್ಟಿರುವುದು ದುರಾದೃಷ್ಟಕರ'' ಎಂದಿದ್ದಾರೆ.

English summary
Kerala Doctor dies in UK after long battle with Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X