ಏರ್ ಇಂಡಿಯಾದಲ್ಲಿ ಕುಡಿದು ರಂಪಾಟ: ಐರಿಶ್ ವಕೀಲೆಗೆ ಜೈಲು ಶಿಕ್ಷೆ
ಲಂಡನ್, ಏಪ್ರಿಲ್ 5: ಕುಡಿಯಲು ಮದ್ಯ ನೀಡಲು ಸಾಧ್ಯವಿಲ್ಲ ಎಂದಿದ್ದ ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ಜಗಳವಾಡಿ ರಂಪಾಟ ಮಾಡಿದ್ದ ಐರ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲೆಗೆ ಇಂಗ್ಲೆಂಡ್‌ನಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಮುಂಬೈನಿಂದ ಲಂಡನ್‌ಗೆ ಏರ್ ಇಂಡಿಯಾದಲ್ಲಿ ತೆರಳುವ ಸಂದರ್ಭದಲ್ಲಿ ವಕೀಲೆ ಸಿಮೊನ್ ಬರ್ನ್ಸ್ ತಮಗೆ ಮದ್ಯ ನೀಡದ ಸಿಬ್ಬಂದಿ ವಿರುದ್ಧ ಜಗಳ ಕಾಯ್ದಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ಈ ಸಂಬಂಧ ಲಂಡನ್‌ನ ಐಸಲ್‌ವರ್ಥ್ ಕ್ರೌನ್ ಕೋರ್ಟ್‌ನಲ್ಲಿ ಗುರುವಾರ ವಿಚಾರಣೆ ನಡೆದಿತ್ತು. ಬರ್ನ್ಸ್ ಅವರು ಪಾನಮತ್ತರಾಗಿದ್ದರು ಮತ್ತು ಅಸಹ್ಯಕರವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿತ್ತು. ಅವಾಚ್ಯ ಪದಗಳಿಂದ ಸಿಬ್ಬಂದಿಯನ್ನು ನಿಂದಿಸಿದ್ದ ಅವರು, ಜನಾಂಗೀಯ ನಿಂದನೆ ಮಾಡಿದ್ದರು.
#WATCH An Irish national on board Air India London-Mumbai flight verbally abuses the crew after she was refused more wine. The incident took place on November 10. (Note: Strong language) pic.twitter.com/bdZWico5Qq
— ANI (@ANI) 14 November 2018
ವಿಮಾನದಲ್ಲಿ ಕುಡಿದು ಪ್ರಯಾಣಿಸಿದ್ದಕ್ಕಾಗಿ ಆರು ತಿಂಗಳು ಮತ್ತು ಹಲ್ಲೆಗಾಗಿ 50 ವರ್ಷದ ಬರ್ನ್ಸ್ ಅವರಿಗೆ ಎರಡು ತಿಂಗಳು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅವರು ಹಲ್ಲೆ ನಡೆಸಿದ ಏರ್ ಇಂಡಿಯಾದ ಸಿಬ್ಬಂದಿಗೆ 300 ಪೌಂಡ್ ಪರಿಹಾರ ನೀಡುವಂತೆ ಸೂಚಿಸಲಾಗಿದೆ.












Click it and Unblock the Notifications