ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ ಸರ್ಕಾರದಲ್ಲಿ ನಾರಾಯಣಮೂರ್ತಿ ಅಳಿಯನಿಗೆ ಅತಿದೊಡ್ಡ ಹುದ್ದೆ

|
Google Oneindia Kannada News

ಲಂಡನ್, ಫೆಬ್ರವರಿ 13: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರು ಬ್ರಿಟನ್ ಸರ್ಕಾರದಲ್ಲಿ ಅತಿದೊಡ್ಡ ಹುದ್ದೆಗೆ ನೇಮಕವಾಗಿದ್ದಾರೆ.

ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರನ್ನಾಗಿ ರಿಷಿ ಸುನಾಕ್ ಅವರನ್ನು ನೇಮಕ ಮಾಡಲಾಗಿದೆ. ಬ್ರಿಟನ್ ಸರ್ಕಾರದ ಎರಡನೇಯ ಅತಿ ದೊಡ್ಡ ಸ್ಥಾನ ಇದಾಗಿದೆ.

ರಿಷಿ ಸುನಾಕ್ ಅವರು ನಾರಾಯಣಮೂರ್ತಿ-ಸುಧಾ ಮೂರ್ತಿ ಪುತ್ರಿ ಅಕ್ಷತಾ ಅವರನ್ನು 2015 ರಲ್ಲಿ ವಿವಾಹವಾಗಿದ್ದರು. ಕನ್ಸರ್ವೇಟಿವ್ ಪಕ್ಷದ ಪ್ರಮುಖ ನಾಯಕರಾಗಿರುವ ಅವರು 2015 ರಲ್ಲಿ ಅವರು ಬ್ರಿಟನ್ ಪ್ರವೇಶಿಸಿದ್ದರು.

Infosys Narayana Murthys Son In Law Become Britain Finance Minister

ಈ ಮೊದಲು ಬ್ರಿಟನ್‌ ನ ಹಣಕಾಸು ಸಚಿವ ಆಗಿದ್ದ ಪಾಕಿಸ್ತಾನ ಮೂಲದ ಸಾಜಿದ್ ಜಾವೀದ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸ್ಥಾನಕ್ಕೆ ರಿಷಿ ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹಣಕಾಸು ಸಚಿವರನ್ನಾಗಿ ನೇಮಕ ಮಾಡಿದ್ದಾರೆ.

ಈ ಹಿಂದಿನ ಹಣಕಾಸು ಸಚಿವ ಸಾಜಿದ್ ಜಾವೀದ್ ಅವರ ಜತೆಗೆ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ರಿಷಿ ಸುನಾಕ್ ಅವರು ಕಾರ್ಯನಿರ್ವಹಿಸುತ್ತಿದ್ದರು.

ರಿಷಿ ಸುನಾಕ್ ಜೊತೆಗೆ ಮತ್ತೊಬ್ಬ ಭಾರತೀಯ ಸಂಜಾತ ಅಲೋಕ್ ಶರ್ಮಾ ಸಹ ಬ್ರಿಟಕ್ ಸಂಪುಟ ಸೇರಿದ್ದಾರೆ. ಅವರಿಗೆ ಉದ್ಯಮ ಖಾತೆ ನೀಡಲಾಗಿದೆ. ಭಾರತ ಮೂಲದ ಪ್ರೀತಿ ಪಟೇಲ್ ಈಗಾಗಲೇ ಬ್ರಿಟನ್‌ ನ ಗೃಹ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Infosys Narayana Murthy-Sudha Murthy's son in law Rishi Sunak become Britain's finance minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X