ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಹೊಸ ಕೊರೊನಾ ಸೋಂಕು ಹೆಚ್ಚಳ: ಕಠಿಣ ಲಾಕ್‌ಡೌನ್ ಸಾಧ್ಯತೆಯಿದೆ ಎಂದ ಪ್ರಧಾನಿ

|
Google Oneindia Kannada News

ಲಂಡನ್, ಜನವರಿ 03: ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಂದ ಕಠಿಣ ಲಾಕ್‌ಡೌನ್ ನಿರ್ಬಂಧಗಳು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾನುವಾರ ಹೇಳಿದ್ದಾರೆ.

ಕೊರೊನಾ ಹೊಸ ರೂಪಾಂತರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದ್ದು ಕಠಿಣ ನಿರ್ಬಂಧಗಳು ಬಹುಶಃ ಹಾದಿಯಲ್ಲಿವೆ ಎಂದಿದ್ದಾರೆ. ಆದರೆ ಶಾಲೆಗಳು ಸುರಕ್ಷಿತವಾಗಿವೆ , ಮಕ್ಕಳು ಹಾಜರಾಗುವುದನ್ನು ಮುಂದುವರಿಸಬೇಕು ಎಂದು ಹೇಳಿದರು.

ಅಂತರರಾಷ್ಟ್ರೀಯ ಗಡಿಯನ್ನು ತೆರೆದ ಸೌದಿ ಅರೇಬಿಯಾ: ವಿಮಾನಯಾನ ಪುನರಾರಂಭಅಂತರರಾಷ್ಟ್ರೀಯ ಗಡಿಯನ್ನು ತೆರೆದ ಸೌದಿ ಅರೇಬಿಯಾ: ವಿಮಾನಯಾನ ಪುನರಾರಂಭ

ಬ್ರಿಟನ್‌ನಲ್ಲಿ ಕೋವಿಡ್-19 ಪ್ರಕರಣಗಳು ದಾಖಲೆಯ ಮಟ್ಟದಲ್ಲಿವೆ ಮತ್ತು ಹೆಚ್ಚುತ್ತಲೇ ಸಾಗಿದೆ. ಹೊಸ ಕೊರೊನಾವೈರಸ್ ರೂಪಾಂತರದಿಂದ ಹೆಚ್ಚು ಹರಡುವಿಕೆಗೆ ಉತ್ತೇಜಿಸಲ್ಪಟ್ಟಿದೆ. ಲಂಡನ್ ಮತ್ತು ಸುತ್ತಮುತ್ತಲಿನ ಶಾಲೆಗಳನ್ನು ಇನ್ನೇನು ತೆರೆಯಬೇಕೆಂದು ಯೋಜಿಸಲಾಗಿತ್ತು. ಆದರೆ ಸೋಂಕು ಹೆಚ್ಚಳದಿಂದಾಗಿ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆ ಇದೆ.

Covid-19: Tougher Lockdown Restriction Likely On The Way; says UK PM Boris Johnson

ಈಗಾಗಲೇ ವೈರಸ್ ಹರಡುವುದನ್ನು ತಡೆಯಲು ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ಇಂಗ್ಲೆಂಡ್‌ನ ಹೆಚ್ಚಿನ ಭಾಗವು ಈಗಾಗಲೇ ಕಠಿಣ ಮಟ್ಟದ ನಿರ್ಬಂಧದಲ್ಲಿದೆ. ಆದರೆ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬರದಿದ್ದರೆ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.

English summary
British Prime Minister Boris Johnson said on Sunday that tougher lockdown restrictions were probably on the way as COVID-19 cases keep rising
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X