ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕು ನಾಯಿಗೂ ಬಂತು ಕೋವಿಡ್, ಮನೆಯಲ್ಲಿಯೇ ಚಿಕಿತ್ಸೆ!

|
Google Oneindia Kannada News

ಲಂಡನ್, ನವೆಂಬರ್ 11; ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವಾಗಲೇ ಆಘಾತಕಾರಿ ಸುದ್ದಿಯೊಂದು ಹೊರ ಬಂದಿದೆ. ಯುನೈಟೆಡ್ ಕಿಂಗ್ ಡಮ್‌ನಲ್ಲಿ ಸಾಕು ನಾಯಿಯಲ್ಲಿ ಸಹ ಕೋವಿಡ್ ಸೋಂಕು ಪತ್ತೆಯಾಗಿದೆ.

ಯುಕೆಯ ಮುಖ್ಯ ಪಶುವೈದ್ಯಾಧಿಕಾರಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ನವೆಂಬರ್ 3ರಂದು ನಾಯಿಯ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಎಪಿಹೆಚ್‌ಎ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ನಾಯಿ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದೆ.

ಬೆಂಗಳೂರಲ್ಲಿ ಇನ್ನು ನಾಯಿ ಸಾಕೋಕೆ ಲೈಸೆನ್ಸ್‌ ಬೇಕು! ಬೆಂಗಳೂರಲ್ಲಿ ಇನ್ನು ನಾಯಿ ಸಾಕೋಕೆ ಲೈಸೆನ್ಸ್‌ ಬೇಕು!

ನಾಯಿಯ ಮಾಲೀಕನಿಗೆ ಕೋವಿಡ್ ಸೋಂಕು ತಗುಲಿತ್ತು. ಈ ಮೂಲಕ ನಾಯಿಗೆ ಸೋಂಕು ಹರಡಿದೆ ಎಂದು ಪತ್ತೆ ಹಚ್ಚಲಾಗಿದೆ. ನಾಯಿಯಿಂದ ಮನುಷ್ಯರಿಗೆ ಸೋಂಕು ಹಬ್ಬಿದೆ. ಸೋಂಕು ಹರಡುವಿಕೆ ಇದು ಸೇತುವೆಯಾಗಬಲ್ಲದು ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.

 ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ಅಡ್ಡಪರಿಣಾಮದ ಬಗ್ಗೆ Fact-Check ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ಅಡ್ಡಪರಿಣಾಮದ ಬಗ್ಗೆ Fact-Check

Coronavirus Detected In Pet Dog At UK

ಪ್ರಾಣಿಗಳಿಂದ ಮನುಷ್ಯರಿಗೆ ಕೋವಿಡ್ ಸೋಂಕು ಹರಡಬಹುದೇ? ಎಂದು ಪ್ರಾಣಿ ಮತ್ತು ಸಸ್ಯ ಆರೋಗ್ಯ ಸಂಸ್ಥೆ (ಎಪಿಹೆಚ್‌ಎ)ಯ ಪ್ರಯೋಗಾಲಯದಲ್ಲಿ ವಿವರವಾದ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಖಾಸಗಿ ಕ್ಲಿನಿಕ್‌ಗಳಲ್ಲಿ SARI ಹಾಗೂ ILI ಲಕ್ಷಣಗಳಿರುವವರಿಗೆ ಕೋವಿಡ್ ಪರೀಕ್ಷೆ ಖಾಸಗಿ ಕ್ಲಿನಿಕ್‌ಗಳಲ್ಲಿ SARI ಹಾಗೂ ILI ಲಕ್ಷಣಗಳಿರುವವರಿಗೆ ಕೋವಿಡ್ ಪರೀಕ್ಷೆ

ಸೋಂಕು ತಗುಲಿದ ನಾಯಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅದು ಚೇತರಿಸಿಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ನಾಯಿಗೆ ಸೋಂಕು ತಗುಲಿರುವುದು ಅಪರೂಪದ ಪ್ರಕರಣವಾಗಿದೆ. ಕೆಲವೇ ದಿನಗಳಲ್ಲಿ ಅವುಗಳು ಚೇತರಿಸಿಕೊಳ್ಳಲಿವೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡುತ್ತದೆ ಎಂಬುದಕ್ಕೆ ಸೂಕ್ತವಾದ ಪುರಾವೆ ಸಿಕ್ಕಿಲ್ಲ. ನಾವು ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಸೋಂಕು ಹರಡುವಿಕೆ ಖಚಿತಗೊಂಡರೆ ನಾಯಿ ಮಾಲೀಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯುಕೆಯ ಕನ್ಸಲ್ಟೆಂಟ್ ಮೆಡಿಕಲ್ ಎಪಿಡೆಮಿಯಾಲಜಿಸ್ಟ್ ಡಾ. ಕ್ಯಾಥರೀನ್ ರಸೆಲ್ ಈ ಕುರಿತು ಮಾಹಿತಿ ನೀಡಿದ್ದು, "ಕೋವಿಡ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಆದರೆ ಕೆಲವು ಸಂದರ್ಭಗಳಲ್ಲಿ ಸೋಂಕು ಜನರಿಂದ ಪ್ರಾಣಿಗಳಿಗೆ ಹರಡಬಹುದು" ಎಂದು ಹೇಳಿದ್ದಾರೆ.

"ಈಗಾಗಲೇ ಪ್ರಕಟಿಸಿರುವ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿ ಪ್ರಕಾರ ಪ್ರಾಣಿಗಳ ಸಂಪರ್ಕದ ಮೊದಲು ಮತ್ತು ನಂತರ ನಿಯಮಿತವಾಗಿ ಕೈಗಳನ್ನು ತೆಗೆದುಕೊಳ್ಳಬೇಕು. ಸಾಕುಪ್ರಾಣಿಗಳ ಮಾಲೀಕರು ಕೋವಿಡ್ ಸಂದರ್ಭದಲ್ಲಿ ಪ್ರಾಣಿಗಳ ಆರೈಕೆಯನ್ನು ಹೇಗೆ ಮಾಡಬೇಕು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ" ಎಂದು ತಿಳಿಸಿದ್ದಾರೆ.

ಯುಕೆ ಮಾತ್ರವಲ್ಲ ಯುರೋಪ್, ಉತ್ತರ ಅಮೆರಿಕ, ಏಷ್ಯಾದ ಕೆಲವು ದೇಶಗಳಲ್ಲಿಯೂ ಸಾಕು ನಾಯಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವರದಿಗಳಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಖಚಿತಪಡಿಸಿಲ್ಲ.

ಮೊದಲು ಪತ್ತೆ ಆಗಿರಲಿಲ್ಲ; ಸಾಕು ಪ್ರಾಣಿಗಳಿಂದ ಕೋವಿಡ್ ಹರಡುವುದೇ? ಎಂಬ ಪ್ರಶ್ನೆ ಮೊದಲಿನಿಂದಲು ಇದೆ. ಹಾಂಕಾಂಗ್‍ನಲ್ಲಿ ಒಂದು ಸಾಕು ನಾಯಿಗೆ ಸೋಂಕು ತಗುಲಿರುವುದನ್ನು ಹೊರತುಪಡಿಸಿದರೆ ಇದುವರೆಗೂ ನಾಯಿ, ಬೆಕ್ಕು ಅಥವಾ ಇನ್ನಾವುದೇ ಸಾಕು ಪ್ರಾಣಿಗಳಿಗೆ ಕೋವಿಡ್ ಹರಡಿರುವ ಪ್ರಕರಣಗಳು ತೀರಾ ಕಡಿಮೆ.

ಕೋವಿಡ್ ವೈರಾಣು ಪ್ರಾಣಿಗಳಲ್ಲಿ ಕಾಲ ಜೀವಂತವಾಗಿರುತ್ತದೆ ಎಂಬುದು ಖಚಿತವಾಗಿಲ್ಲ. ವೈರಾಣುಗಳು ವಸ್ತುಗಳ ಮೇಲೆ ಕೆಲವು ಗಂಟೆಗಳ ಕಾಲ ಅಥವಾ ಹಲವಾರು ದಿನಗಳ ಕಾಲ ಜೀವಿಸಬಹುದೆಂದು ಅಧ್ಯಯನಗಳು ತಿಳಿಸುತ್ತವೆ. ಆದರೆ ಪ್ರಾಣಿಗಳ ವಿಚಾರದಲ್ಲಿ ಯಾವುದೇ ಅಧ್ಯಯನ ನಡೆದಿಲ್ಲ.

ಆಕ್ಲಾಂಡ್‌ನಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಕರಡಿ, ಸಿಂಹ, ಚಿರತೆ ಮುಂತಾದ ಪ್ರಾಣಿಗಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ವಿವಿಧ ಪ್ರಾಣಿ ಪ್ರಭೇದಗಳನನ್ನು ರಕ್ಷಣೆ ಮಾಡಲು ರಾಷ್ಟ್ರೀಯ ಅಭಿಯಾನದ ಭಾಗವಾಗಿ ನ್ಯುಜೆರ್ಸಿಯ ಪಶುವೈದ್ಯಕೀಯ ಔಷಧಿ ಕಂಪನಿ ಜೊಯಿಟಿಸ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿ ದೇಣಿಗೆಯಾಗಿ ನೀಡಿತ್ತು.

ನಾಯಿ, ಬೆಕ್ಕು ಮುಂತಾದ ಸೌಮ್ಯ ಲಕ್ಷಣಗಳ ಪ್ರಾಣಿಗಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೂ ಅವು ರಚನೆಯಲ್ಲಿ ಕೊರೊನಾ-2 ರೋಗಾಣುಗಳಿಗಿಂತ ಭಿನ್ನವಾಗಿದ್ದು, ಅವು ಮನುಷ್ಯರಿಗೆ ಹರಡುವುದಿಲ್ಲ.

ಮಾನವ ಮತ್ತು ಪ್ರಾಣಿಗಳ ಜೀವಕೋಶ ರಚನೆಯಲ್ಲಿ ವ್ಯತ್ಯಾಸವಿದ್ದು, ಕೊರೊನಾ ವೈರಾಣು ಮಾನವನ ದೇಹದಲ್ಲಿ ಆದಂತೆ ವೇಗವಾಗಿ ವೃದ್ಧಿಯಾಗುವುದಿಲ್ಲ, ಹರಡುವಿಕೆ ಅಪಾಯವೂ ಸಹ ಕಡಿಮೆಯಾಗಿದೆ.

English summary
Coronavirus detected in pet dog at UK. Chief veterinary officer confirmed after test in APHA laboratory.The dog is now recovering at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X