ಯುನೈಟೆಡ್ ಕಿಂಗ್ ಡಮ್ ಪ್ರಧಾನಿ ಆಗಲಿದ್ದಾರೆ ಬೋರಿಸ್ ಜಾನ್ಸನ್
ಬ್ರೆಕ್ಸಿಟ್ ಚಳವಳಿಯ ಮುಖ್ಯ ಹಾಗೂ ದೊಡ್ಡ ಧ್ವನಿ ಆಗಿದ್ದ ಬೋರಿಸ್ ಜಾನ್ಸನ್ ಮಂಗಳವಾರದಂದು ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಗೆದ್ದಿರುವ ಅವರು, ಯುನೈಟೆಡ್ ಕಿಂಗ್ ಡಮ್ ನ ಮುಂದಿನ ಪ್ರಧಾನಮಂತ್ರಿ ಆಗಲಿದ್ದಾರೆ. 55 ವರ್ಷದ ಬೋರಿಸ್ ಜಾನ್ಸನ್ ಪಕ್ಷದ ನಾಯಕರಾಗಿ, 92,153 ಸದಸ್ಯರ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆ ರೇಸಿನಲ್ಲಿ ಇದ್ದ ವಿದೇಶಾಂಗ ಸಚಿವರಾದ ಜೆರೆಮಿ ಹಂಟ್ ಅವರಿಗೆ 46,656 ಮತಗಳು ಬಂದಿವೆ. ಜಾನ್ಸನ್ ಅವರು ಬುಧವಾರದಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕವಾಗಿಯೇ ಜಾನ್ಸನ್ ಅವರನ್ನು ಹಲವು ಸಂದರ್ಭದಲ್ಲಿ ಬೆಂಬಲಿಸಿದ್ದಾರೆ. ಇದೀಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಿ ಆಗಲಿರುವ ಬೋರಿಸ್ ಜಾನ್ಸನ್ ಅವರಿಗೆ ಅಭಿನಂದನೆಗಳು. ಅವರು ಅದ್ಭುತವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಹೊಸ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಈ ಹಿಂದೆ ವಿದೇಶಾಂಗ ಸಚಿವ ಹಾಗೂ ಲಂಡನ್ ನ ಮೇಯರ್ ಆಗಿದ್ದರು. ಹೊಸ ಸಚಿವರನ್ನು ಆಯ್ಕೆ ಮಾಡಲಾಗುವುದು.

ಬ್ರೆಕ್ಸಿಟ್ ವಿಚಾರವಾಗಿ ಭಿನ್ನಾಭಿಪ್ರಾಯ ಇರುವ ಕಾರಣಕ್ಕೆ ಹಲವು ಸಚಿವರು ತಮ್ಮ ಹುದ್ದೆ ತ್ಯಜಿಸಿದ್ದಾರೆ. ತಮ್ಮ ಮನದ ಇಂಗಿತವನ್ನು ತಿಳಿಸಿದ್ದಾರೆ. ಬ್ರೆಕ್ಸಿಟ್ ನ ಜತೆಗೆ ತಕ್ಷಣವೇ ಇರಾನ್ ನ ಬಿಕ್ಕಟ್ಟನ್ನೂ ಎದುರಿಸಬೇಕಾಗುತ್ತದೆ. ಏಕೆಂದರೆ, ಇರಾನ್ ನಿಂದ ಬ್ರಿಟಿಷ್ ನ ತೈಲ ಟ್ಯಾಂಕರ್ ಅನ್ನು ಕಳೆದ ಶುಕ್ರವಾರ ವಶಕ್ಕೆ ಪಡೆಯಲಾಗಿದೆ.
ತಮ್ಮ ಆಯ್ಕೆ ಬಗ್ಗೆ ಘೋಷಣೆ ಆದ ನಂತರ ಮಂಗಳವಾರದಂದು ಸದಸ್ಯರ ಜತೆ ಮಾತನಾಡಿದ ಅವರು, ಬ್ರಿಟನ್ ಅನ್ನು ಒಗ್ಗೂಡಿಸುವ ಬಗ್ಗೆ ಹೇಳಿದ್ದಾರೆ. "ಉತ್ತಮ ಮೂಲಸೌಕರ್ಯ, ಉತ್ತಮ ಶಿಕ್ಷಣ, ಹೆಚ್ಚು ಪೊಲೀಸರು, ಅದ್ಭುತವಾದ ಪೂರ್ತಿ- ಫೈಬರ್ ಬ್ರಾಂಡ್ ಬ್ಯಾಂಡ್ ಪ್ರತಿ ಮನೆಗೆ. ಈ ಅದ್ಭುತವಾದ ದೇಶವನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತೇವೆ" ಎಂದು ಹೇಳಿದ್ದಾರೆ.
ಯುರೋಪಿಯನ್ ಒಕ್ಕೂಟದಿಂದ ಬ್ರೆಕ್ಸಿಟ್ ಮಾತುಕತೆ ಪದೇ ಪದೇ ತಿರಸ್ಕೃತವಾದ ಮೇಲೆ ತೆರೇಸಾ ಮೇ ಅವರು ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಿ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದರು. ಬ್ರೆಕ್ಸಿಟ್ ವಿಚಾರವನ್ನು ಹೇಗೆ ನಡೆಸುತ್ತಾರೆ ಎಂಬುದು ಜಾನ್ಸನ್ ಮೇಲೆ ಇರುವ ಕುತೂಹಲ. ಅಕ್ಟೋಬರ್ 31 ಗಡುವು ನಿಗದಿ ಆಗಿದೆ. ಸದ್ಯಕ್ಕೆ ಯು.ಕೆ. ಸಂಸತ್ ನಲ್ಲಿ ಯಾವುದೂ ಅಂತಿಮವಾಗಿಲ್ಲ.












Click it and Unblock the Notifications