Lingsugur Elections : ಲಿಂಗಸುಗೂರು ಕ್ಷೇತ್ರಕ್ಕೆ ಯಾರಾಗ್ತಾರೆ ಅಧಿಪತಿ? ತ್ರಿಪಕ್ಷಗಳಿಗೂ ಸಮಾನ ಅವಕಾಶ!
ಲಿಂಗಸುಗೂರು ವಿಧಾನಸಭಾ ಕ್ಷೇತ್ರ ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು, 2008ರ ಕ್ಷೇತ್ರ ಪುನರ್‌ವಿಂಗಡಣೆಯ ಸಮಯದಿಂದ ಪರಿಶಿಷ್ಟ ಜಾತಿಗೆ ಕ್ಷೇತ್ರ ಮೀಸಲಾಗಿದೆ. ಒಂದು ಕಾಲದಲ್ಲಿ ಲಿಂಗಸುಗೂರು ರಾಜಕಾರಣಿಗಳ ತವರು ಎನ್ನುತ್ತಿದ್ದರು ಈಗ ಇಲ್ಲಿಗೆ ಬೇರೆ ಜಿಲ್ಲೆಯವರು ಬಂದು ರಾಜಕಾರಣ ಮಾಡುತ್ತಿದ್ದಾರೆ. ಬ್ರಿಟಿಷರ ಆಡಳಿತದಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವಾಗಿ ಪ್ರಸಿದ್ಧಿಯಾಗಿತ್ತು.
ಲಿಂಗಸುಗೂರು ಕ್ಷೇತ್ರದಲ್ಲಿಯೇ ಹಟ್ಟಿ ಚಿನ್ನದ ಗಣಿ ಇದ್ದು, ಸದ್ಯ ಭಾರತದಲ್ಲಿ ಚಿನ್ನ ಉತ್ಪಾದಿಸುವ ಏಕೈಕ ಸ್ಥಳವಾಗಿದೆ. ಇಲ್ಲಿನ ಮುದಗಲ್ ಗ್ರೇಗ್ರಾನೆಟ್ ನಸುಬೂದಿ ಬಣ್ಣದ ಅಲಂಕಾರಿಕ ಶಿಲೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ನಾರಾಯಣಪುರ ಜಲಾಶಯಕ್ಕೆ ಕ್ಷೇತ್ರ ಹೊಂದಿಕೊಂಡಿದೆ. ನಾರಾಯಣಪುರ ಬಲದಂಡೆ, ಜಡಿಶಂಕರಲಿಂಗ (ರಾಂಪೂರ) ಏತ ನೀರಾವರಿ ಯೋಜನೆಯಿಂದ ನೀರು ಹರಿದರೂ ಶೇ.70ರಷ್ಟು ಖುಷ್ಕಿ ಭೂಮಿ ಇದೆ.

ಐತಿಹಾಸಿಕ, ದಾಸರು, ಶರಣರ ಬೀಡಾದ ಲಿಂಗಸುಗೂರು ಕ್ಷೇತ್ರ ಹಲವು ಪುರಾತನ ಸ್ಮಾರಕಗಳನ್ನು ಹೊಂದಿದೆ. ಜಲದುರ್ಗ ಛಾಯಾಭಗವತಿ ಡ್ರಾಪ್ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, 12ನೇ ಶತಮಾನದಲ್ಲಿ ದೇವಗಿರಿಯ ಯಾದವ ರಾಜನಿಂದ ನಿರ್ಮಿಸಲಾಗಿದೆ. ಏಳು ಸುತ್ತು ಕೋಟೆ ಏಳು ಅಗಸಿ ಬಾಗಿಲು ಈ ಕೋಟೆಗಿವೆ. ಲಿಂಗಸುಗೂರಿನ ನೆರೆಯ ಕ್ಷೇತ್ರಗಳಾದ ಕುಷ್ಟಗಿ, ಮಾನ್ವಿ, ರಾಯಚೂರು ನಗರ, ರಾಯಚೂರು ಗ್ರಾಮೀಣ ಕ್ಷೇತ್ರಗಳಲ್ಲಿ ನಾನಾ ರಾಜಕೀಯ ಪಕ್ಷಗಳಿಂದ ಗೆದ್ದವರಲ್ಲಿ ಈ ಕ್ಷೇತ್ರದವರು ಸಿಂಹಪಾಲು ಎಂಬುದು ವಿಶೇಷ. ಇಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಫೈಟ್ ಇದೆ.
ಕ್ಷೇತ್ರದ ರಾಜಕೀಯ ಹಿನ್ನೆಲೆ!
ಇಲ್ಲಿಯವರೆಗೂ ಲಿಂಗಸುಗೂರು ಕ್ಷೇತ್ರ 15 ಚುನಾವಣೆಗಳನ್ನು ಕಂಡಿದ್ದು, 8 ಬಾರಿ ಕಾಂಗ್ರೆಸ್ ಗೆದ್ದಿದೆ. ಒಂದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಜನತಾ ದಳ (ಸಂಯುಕ್ತ ಮತ್ತು ಜಾತ್ಯಾತೀತ) 4 ಬಾರಿ ಗೆಲುವು ಕಂಡಿದ್ದು, ಒಂದು ಬಾರಿ ಜೆಎನ್‌ಪಿ ಗೆದ್ದಿದೆ. ಸದ್ಯ ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಅಮರೇಗೌಡ ಪಾಟೀಲ್ ಬಯ್ಯಾಪೂರ ಇದೇ ಕ್ಷೇತ್ರದಿಂದ 1994, 1999, 2004ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್‌ವಿಂಗಡಣೆಯಾಗಿ ಲಿಂಗಸುಗೂರು ಎಸ್‌ಸಿ ಮೀಸಲು ಕ್ಷೇತ್ರ ಆದ ಮೇಲೆ ಅವರು ಕುಷ್ಟಗಿಗೆ ವಲಸೆ ಬಂದರು.

ಎಸ್‌ಸಿ ಮೀಸಲು ಕ್ಷೇತ್ರವಾದ ಬಳಿಕ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾನಪ್ಪ ಡಿ ವಜ್ಜಲ್ ಗೆದ್ದಿದ್ದರು. 2013ರಲ್ಲಿ ಪಕ್ಷ ಬದಲಿಸಿದ ಮಾನಪ್ಪ ವಜ್ಜಲ್ ಜೆಡಿಎಸ್‌ನಿಂದ ಶಾಸಕರಾಗಿದ್ದರು. ಆದರೆ, 2018ರಲ್ಲಿ ಕಾಂಗ್ರೆಸ್‌ನ ಡಿಎಸ್ ಹೂಲಗೇರಿ ಗೆಲ್ಲುವ ಮೂಲಕ ಮಾನಪ್ಪ ವಜ್ಜಲ್ ಅವರ ಹ್ಯಾಟ್ರಿಕ್ ಗೆಲುವಿಗೆ ಅಡ್ಡಿಯಾದರು. ಈ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಮತ್ತೆ ಬಿಜೆಪಿಗೆ ಬಂದಿದ್ದು ವಿಶೇಷ.
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2018 | ಡಿ.ಎಸ್. ಹೊಲಗೇರಿ (ಕಾಂಗ್ರೆಸ್) | 54,230 | ಸಿದ್ದು ಬಂಡಿ(ಜೆಡಿಎಸ್) | 49,284 |
| 2013 | ಮಾನಪ್ಪ ಡಿ. ವಜ್ಜಲ (ಜೆಡಿಎಸ್) | 31,737 | ಡಿ ಎಸ್ ಹೂಲಗೇರಿ(ಕಾಂಗ್ರೆಸ್) | 30,451 |
| 2008 | ಮಾನಪ್ಪ ಡಿ. ವಜ್ಜಲ (ಬಿಜೆಪಿ) | 51,017 | ಎ ವಸಂತಕುಮಾರ್( ಕಾಂಗ್ರೆಸ್) | 31,837 |
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿಎಸ್ ಹೂಲಗೇರಿ 54,230 ಮತಗಳನ್ನು ಪಡೆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಿದ್ದು ಬಂಡಿ 49,284 ಮತಗಳನ್ನು ಪಡೆದು ಸುಮಾರು 5 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕ್ಷೇತ್ರದ ಹಾಲಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್ 47,385 ಮತ ಪಡೆಯುವುದರೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಸಲದ ಚುನಾವಣೆಯಲ್ಲಿ ಮೂರು ಪಕ್ಷಕ್ಕೂ ಸಮಾನ ಅವಕಾಶವಿದ್ದು, ಯಾರು ಗೆಲ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಆಕಾಂಕ್ಷಿಗಳು ಯಾರಾರು?
ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಡಿಎಸ್ ಹೂಲಗೇರಿಗೆ ಟಿಕೆಟ್ ಬಹುತೇಕ ಫೈನಲ್ ಎನ್ನಲಾಗಿದ್ದರೂ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಇವರನ್ನು ಹೊರತುಪಡಿಸಿ ನಿವೃತ್ತ ಇಂಜಿನಿಯರ್ ಆರ್ ರುದ್ರಯ್ಯ, ಎಚ್‌ಬಿ ಮುರಾರಿ ಹಾಗೂ ಹನುಮಂತಪ್ಪ ಆಲ್ಕೋಡ್ ಟಿಕೆಟ್ ರೇಸ್‌ನಲ್ಲಿದ್ದಾರೆ. ಜೆಡಿಎಸ್‌ನಿಂದ ಸಿದ್ದು ಬಂಡಿ ಅವರನ್ನೇ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಘೋಷಿಸಿಯಾಗಿದೆ. ಬಿಜೆಪಿಯಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯಲ್ಲಿ ಡಾ. ಸುದರ್ಶನ ಸಜ್ಜನ್ ಎಂಬುವವರು ಕೂಡ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್ ಸಿಗೋದು ಡೌಟ್.
ಜಾತಿ ಲೆಕ್ಕಾಚಾರ!
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ನಾಯಕರ ಸಂಖ್ಯೆಯಲ್ಲಿ ಹೆಚ್ಚು, ಕಡಿಮೆ ಸಮಬಲವಿದೆ. ಆದರೂ, 1983ರ ತನಕ ಲಿಂಗಾಯತರದೇ ಪಾರುಪತ್ಯ ಕ್ಷೇತ್ರದಲ್ಲಿ ಇತ್ತು. 1985ರ ವಿಧಾನಸಭೆ ಚುನಾವಣೆಯಲ್ಲಿ . ಲಿಂಗಾಯತರಲ್ಲಿನ ಒಡಕಿನ ಫಲವಾಗಿ ನಾಯಕರಿಗೆ ಲಾಭ ತಂದುಕೊಟ್ಟಿತು. ಬಳಿಕ ಮತ್ತೆ ಲಿಂಗಾಯತರ ತೆಕ್ಕೆಗೆ ಕ್ಷೇತ್ರ ಜಾರಿತು. ಆದರೆ, 2008ರ ಚುನಾವಣೆಯಿಂದ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಆ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದ್ದರೂ ಇದೀಗ ಲಿಂಗಾಯತರು, ನಾಯಕರು ಮತ್ತು ಕುರುಬರು ಅಭ್ಯರ್ಥಿಗಳ ಭವಿಷ್ಯ ಬರೆಯುವ ಶಕ್ತಿ ಪಡೆದುಕೊಂಡಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications