ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ : ಸಂಚಾರಿ ಸವಿರುಚಿ ಕ್ಯಾಂಟೀನ್ ಆರಂಭ, 40 ರೂ.ಗೆ ಊಟ

By Gururaj
|
Google Oneindia Kannada News

ಕೊಪ್ಪಳ, ಜುಲೈ 09 : 'ಮಹಿಳೆಯರು ಯಾವುದೇ ಉದ್ಯಮವನ್ನು ನಡೆಸಲು ಸಶಕ್ತರಾಗಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಿಳೆಯರು ಮುಂದಾಗಬೇಕು' ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹೇಳಿದರು. ಕೊಪ್ಫಳದಲ್ಲಿ ಅವರು 'ಸವಿರುಚಿ ಸಂಚಾರಿ ಕ್ಯಾಂಟೀನ್‌'ಗೆ ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 'ಸವಿರುಚಿ ಸಂಚಾರಿ ಕ್ಯಾಂಟೀನ್' ಆರಂಭಿಸಿದೆ. ಸೋಮವಾರದಂದು ಜಿಲ್ಲಾಡಳಿತ ಭವನ ಆವರಣದಲ್ಲಿ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

ಧಾರವಾಡ : ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಚಾಲನೆಧಾರವಾಡ : ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

'ಇಂದಿನ ಕಾಲದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ತೋರಿಸಲು ಸಶಕ್ತರಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಮಹಿಳೆಯರಿಗೆ ಬೆಂಬಲ ನೀಡುತ್ತಿದೆ. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ, ಸಂಪೂರ್ಣ ಮಹಿಳೆಯರೇ ನಡೆಸುವ ಸವಿರುಚಿ ಸಂಚಾರಿ ಕ್ಯಾಂಟೀನ್ ಕೂಡ ಇಂತಹದೇ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ' ಎಂದರು.

Savi Ruchi Sanchari canteen

'ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಮತ್ತು ಉಪಹಾರ ನೀಡುವ ಯೋಜನೆ ಇದಾಗಿದ್ದು, ಮಹಿಳೆಯರು ಉತ್ತಮ ಗುಣಮಟ್ಟದ ಊಟೋಪಹಾರ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಮಹಿಳಾ ಸಬಲೀಕರಣಕ್ಕೆ ಇದು ಪೂರಕ ಯೋಜನೆಯಾಗಿದೆ. ಇಂತಹ ಯೋಜನೆಗಳ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು' ಎಂದು ಕರೆ ನೀಡಿದರು.

'ಈ ಯೋಜನೆ ಯಶಸ್ಸುಗೊಂಡಲ್ಲಿ ಇಂತಹ ಕ್ಯಾಂಟೀನ್‍ಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗಲಿದೆ. ಸವಿರುಚಿ ಕ್ಯಾಂಟೀನ್‍ನಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ಕೊರತೆಯಾಗದಂತೆ ಮಹಿಳೆಯರು ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಇಂದಿರಾ ಕ್ಯಾಂಟೀನ್ ಬಳಿಕ ಈಗ ಸವಿರುಚಿ ಸಂಚಾರಿ ಕ್ಯಾಂಟೀನ್ಇಂದಿರಾ ಕ್ಯಾಂಟೀನ್ ಬಳಿಕ ಈಗ ಸವಿರುಚಿ ಸಂಚಾರಿ ಕ್ಯಾಂಟೀನ್

ಸವಿರುಚಿ ಕ್ಯಾಂಟೀನ್‍ನಲ್ಲಿ 40 ರೂ. ದರದಲ್ಲಿ ಉತ್ತಮ ಊಟ ದೊರೆಯಲಿದ್ದು, ಇದರಲ್ಲಿ ರೊಟ್ಟಿ/ಚಪಾತಿ, ಎರಡು ಬಗೆಯ ಪಲ್ಯ, ಅನ್ನ, ಸಾಂಬಾರ್ ಕೂಡ ನೀಡಲಾಗುತ್ತದೆ. ಅಲ್ಲದೆ 20 ರೂ. ದರದಲ್ಲಿ ಉಪಹಾರ ನೀಡಲಾಗುತ್ತದೆ.

ಇದು ಸಂಚಾರಿ ಕ್ಯಾಂಟೀನ್ ಆಗಿರುವುದರಿಂದ, ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಕೋರ್ಟ್ ಆವರಣ, ಬಸ್‍ಸ್ಟ್ಯಾಂಡ್ ಹೀಗೆ ಎಲ್ಲೆಲ್ಲಿ ಜನಸಂದಣಿ ಹೆಚ್ಚಿದ್ದು, ಊಟೋಪಹಾರದ ಬೇಡಿಕೆ ಲಭ್ಯವಾಗುವ ಸಾಧ್ಯತೆಗಳಿದೆಯೋ ಅಂತಹ ಸ್ಥಳಗಳಿಗೆ ತೆರಳಿ ಊಟೋಪಹಾರ ನೀಡಲಾಗುತ್ತದೆ.

Koppal DC

ಸವಿರುಚಿ ಸಂಚಾರಿ ಕ್ಯಾಂಟೀನ್ ಯೋಜನೆಗೆ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಕ್ಕೆ 10 ಲಕ್ಷ ರೂ. ಗಳ ಬಡ್ಡಿರಹಿತ ಸಾಲವನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು, 9 ರಿಂದ 11 ಸದಸ್ಯರನ್ನೊಳಗೊಂಡ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದವರು, ಈ ಹಣದಲ್ಲಿ ಸಂಚಾರಿ ವಾಹನ, ಪಾಕೋಪಕರಣ ಅಲ್ಲದೆ ಅಗತ್ಯ ಸಲಕರಣೆಗಳನ್ನು ಖರೀದಿಸಿ, ರುಚಿ-ಶುಚಿಯಾದ ಉಪಹಾರ, ಊಟ, ಕಾಫಿ, ಟೀ ಪೂರೈಸಬಹುದಾಗಿದೆ.

ಬಂದಂತಹ ಲಾಭಾಂಶದಲ್ಲಿ ಪ್ರತಿ ತಿಂಗಳು 15,000 ರೂ. ಗಳಂತೆ 67 ಕಂತುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಸವಿರುಚಿ ಸಂಚಾರಿ ಕ್ಯಾಂಟೀನ್ ಅನ್ನು ಸುಸಜ್ಜಿತ ವಾಹನದಲ್ಲಿ ಅಳವಡಿಸಲಾಗಿದ್ದು, ವಾಹನವನ್ನು ಕ್ಯಾಂಟೀನ್ ಮಾಡಲು ಅಗತ್ಯವಿರುವ ವಿನ್ಯಾಸದಲ್ಲಿ ಸಿದ್ಧಪಡಿಸಲಾಗಿದೆ.

ಸ್ವಸಹಾಯ ಮಹಿಳಾ ಗುಂಪುಗಳು ತಯಾರಿಸುವ ಉಪ್ಪಿನಕಾಯಿ, ವಿವಿಧ ಬಗೆಯ ಚಟ್ನಿ, ಹಪ್ಪಳ, ರೊಟ್ಟಿ ಮುಂತಾದ ತಿನಿಸುಗಳನ್ನು ಸ್ತ್ರೀಶಕ್ತಿ ಒಕ್ಕೂಟದವರಿಂದ ಖರೀದಿಸಿ, ಕ್ಯಾಂಟೀನ್‍ಗೆ ಬಳಕೆ ಮಾಡುವ ಕುರಿತಂತೆ ಯೋಜಿಸಲಾಗುತ್ತಿದೆ, ಇದರಿಂದಾಗಿ ಮಹಿಳೆಯರ ಆರ್ಥಿಕ ಸಬಲತೆಗೆ ಪೂರಕವಾಗಲಿದೆ.

English summary
Koppal Deputy Commissioner M.Kanagavalli flagged off for the Savi Ruchi Sanchari (mobile) canteen on July 9, 2018. Subsidised food will be made available at canteens run by women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X