ಗಂಗಾವತಿಯಲ್ಲಿ ಬೃಹತ್ ಮನೆ ನಿರ್ಮಾಣ ಮಾಡಿದ ಜನಾರ್ದನ ರೆಡ್ಡಿ, ಪ್ರಶ್ನೆಗಳ ಉದ್ಭವ
ಬಳ್ಳಾರಿ, ಡಿಸೆಂಬರ್, 05: ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬೃಹತ್ ಆಕಾರದ ಮನೆಯೊಂದನ್ನು ನಿರ್ಮಸಿದ್ದಾರೆ. ಮಂಗಳವಾರ ಅಥವಾ ಡಿಸೆಂಬರ್ 13ರಂದು ಮನೆ ಓಪನಿಂಗ್ ಕಾರ್ಯಕ್ರಮ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ ಬಹುತೇಕರು ನಾಳೆ ಮಂಗಳವಾರ (ಡಿಸೆಂಬರ್ 06) ಓಪನಿಂಗ್ ಆದರೂ ಅಚ್ಚರಿಯಿಲ್ಲ ಎಂದು ಹೇಳುತ್ತಿದ್ದಾರೆ.
ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರು, ಕುಚುಕುಗಳ ನಡುವೆ ಮನಸ್ತಾಪ?
ಜನಾರ್ದನ ರೆಡ್ಡಿ ವಾಸವಿರುವ ಬೃಹತ್ ಬಂಗ್ಲೆ ಮೂರು ಅಂತಸ್ತಿನಿಂದ ಕೂಡಿದ್ದು, ಹೈಫೈ ಮನೆಯ ಸೌಂದರ್ಯ ಯಾವ ಸಿನಿಮಾದ ಸೆಟ್‌ಗೂ ಕಡಿಮೆ ಇಲ್ಲವೆಂಬಂತೆ ಇದೆ. ಮನೆಯಲ್ಲಿ ಐದು ಬೆಡ್ ರೂಂ, ಮೂರು ಹಾಲ್, ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆಯನ್ನು ಕಾಣಬಹುದಾಗಿದೆ.
ಅಲ್ಲದೇ ಜನರೊಂದಿಗೆ ಮಾತುಕತೆ ನಡೆಸಲು ಹೊರಗೆ ದೊಡ್ಡ ಹಾಲ್ ನಿರ್ಮಾಣ ಮಾಡಿದ್ದಾರೆ. ಆಪ್ತವಾಗಿರುವ ಆಯ್ದ ಜನರೊಂದಿಗೆ ಮಾತನಾಡಲು ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿದೆ. ಕೊಪ್ಪಳ ರಸ್ತೆಯಲ್ಲಿ ಮೂರು ಹೆಕ್ಟೇರ್ ಪ್ರದೇಶದಲ್ಲಿರುವ ಮನೆ ಖರೀದಿ ಮಾಡಿದ್ದು, ಇಡೀ ಲೇಔಟ್ ಅನ್ನು ಬಾಡಿಗೆ ಪಡೆಯಲಾಗಿದೆ. ಹೀಗೆ ಮನೆ ನಿರ್ಮಾಣ ಮಾಡುವ ನೆಪದಲ್ಲಿ ಗಂಗಾವತಿಯಿಂದಲೇ ಸ್ಪರ್ಧೆ ಮಾಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಾ? ಎನ್ನುವ ಪ್ರಶ್ನೆಗಳು ಎದ್ದಿವೆ.
ಗಂಗಾವತಿಯಲ್ಲಿ ಮನೆ ಮಾಡುವುದಾಗಿ ಘೋಷಣೆ
ಗಂಗಾವತಿಯಲ್ಲಿ ಮನೆ ಮಾಡುವುದಾಗಿ ಘೋಷಣೆ ಮಾಡಿದ್ದೇನೆ ಎಂದು ಕೊಪ್ಪಳದ ಗಂಗಾವತಿ ಅಂಜನಾದ್ರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದರು. ಹನುಮಮಾಲೆ ಧರಸಿ ಗಂಗಾವತಿಯಲ್ಲಿ ಮನೆ ಮಾಡುವುದಾಗಿ ಘೋಷಣೆ ಮಾಡಿದ್ದು, ರೆಡ್ಡಿ ಹೇಳಿಕೆಯಿಂದ ಸ್ಥಳೀಯ ಬಿಜೆಪಿ ನಾಯಕರು ವಿಚಿಲತರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೆಲ್ಲವನ್ನು ಗಮನಿಸಿದರೆ ಕೋರ್ಟ್ ಆದೇಶದ ನೆಪದಲ್ಲಿ ಗಂಗಾವತಿಯಲ್ಲಿ ಮನೆ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆಗಳು ಉದ್ಭವವಾಗಿವೆ.

ಇನ್ನು ಮೊಮ್ಮಗಳ ನಾಮಕರಣಕ್ಕೆ ಶ್ರೀ ರಾಮುಲು ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಮತ್ತು ನನ್ನ ನಡುವೆ ಬಿರುಕು ಈ ಜನ್ಮದಲ್ಲಿ ಸಾಧ್ಯವಿಲ್ಲ. ಯಾರಿಗಾದರೂ ಬಿರುಕು ಅನ್ನುವ ಕನಸು ಬಿದ್ದಿದ್ದರೆ ಆ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಮಾಧ್ಯಮದವರು ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡರು.