ಕೊಪ್ಪಳ ಗ್ಯಾಂಗ್‌ ರೇಪ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Koppal Gang Rape Case: ಕೊಪ್ಪಳದ ಗಂಗಾವತಿಯಲ್ಲಿ ಇಬ್ಬರು ಮಹಿಳಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿದ್ದಾರೆ ಎಂದು ತಿಳಿದುಬಂದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ವಿದೇಶಿ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾತಾವತಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಬಂಧಿತ ಆರೋಪಿಗಳಾಗಿದ್ದಾರೆ.

Israeli woman among 2 raped Near Karnataka s Hampi Two Accused Arrested

ಬಂಧಿತರಾಗಿರುವ ಆರೋಪಿಗಳಿಬ್ಬರು ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಮಾರ್ಚ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ದೇಶ, ವಿದೇಶದ 5 ಮಂದಿ ಪ್ರವಾಸಿಗರ ಮೇಲೆ ದುರುಳರು ಹಲ್ಲೆ ನಡೆಸಿದ್ದರು. ಆ ಪೈಕಿ ಎರಡು ದಿನದ ಹಿಂದೆ ನಾಪತ್ತೆ ಆಗಿದ್ದ ಪ್ರವಾಸಿಗ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಪ್ರವಾಸಿಗ ಒರಿಸ್ಸಾ ಮೂಲದ ಬಿಬಾಸ್ (33) ಎಂದು ಗುರುತಿಸಲಾಗಿದೆ.

ದುಷ್ಕರ್ಮಿಗಳು ಹಣಕ್ಕಾಗಿ ಹಲ್ಲೆ ಮಾಡಿ ಎಡದಂಡೆ ಕಾಲುವೆಗೆ ದೂಡಿದ್ದರು. ನಾಲ್ವರು ಸುರಕ್ಷಿತ ಆಗಿದ್ದರೆ, ಬಿಬಾಸ್ ನಾಪತ್ತೆ ಆಗಿದ್ದರು. ಬಿಬಾಸ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಅವರು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಶವವಾಗಿ ಪತ್ತೆ ಆಗಿದ್ದಾರೆ.

ಇನ್ನು ಗಂಗಾವತಿಯಲ್ಲಿ ಎಸ್​​ಪಿ ಡಾ.ರಾಮ್ ಅರಸಿದ್ದಿ ಈ ಬಗ್ಗೆ ಪ್ರತಿಕ್ರಿಯಿಸಿ, ಗಾರೆ ಕೆಲಸ ಮಾಡುವ ಆರೋಪಿಗಳಿಬ್ಬರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರವಾಸಿಗರನ್ನು ನೋಡಿ ಅವರ ಬಳಿಯಿದ್ದ ಹಣ ಕಿತ್ತುಕೊಳ್ಳಲು ಮುಂದಾಗಿದ್ದರು. ಈ ವೇಳೆ ಪ್ರವಾಸಿಗರು ಮತ್ತು ದುಷ್ಕರ್ಮಿಗಳ ನಡುವೆ ಗಲಾಟೆ ಆಗಿದೆ. ಕೃತ್ಯ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಳ್ಳಾರಿ ವಲಯ ಐಜಿಪಿ ಲೋಕೇಶ ಕುಮಾರ್ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ನಾಲ್ವರು ಪ್ರವಾಸಿಗರು, ಓರ್ವ ಹೋಮ್ ಸ್ಟೇ ಮಹಿಳೆ ಬಂದಿದ್ದರು. ಇಸ್ರೇಲ್ ಮಹಿಳೆ, ಅಮೆರಿಕದ ಪ್ರವಾಸಿಗ, ಮಹರಾಷ್ಟ್ರ ಮತ್ತು ಒರಿಸ್ಸಾ ಪ್ರವಾಸಿಗರು ಸಾಣಾಪುರ ಕೆರೆ ಬಳಿಯಿರುವ ಎಡದಂಡೆ ಕಾಲುವೆಗೆ ಬಂದಿದ್ದರು. ಇಲ್ಲಿನ ವಾಯು ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಮೂವರು ಯುವಕರು ಬಂದಿದ್ದರು ಎಂದರು.

ಪೆಟ್ರೋಲ್‌ಗೆ ತಮಗೆ ಹಣ ಬೇಕು ಅಂತಾ ಕೇಳಿದ್ದಾರೆ. ಆಗ 20 ರೂಪಾಯಿ ಕೊಟ್ಟಿದ್ದಾರೆ. ಆದರೆ, 100 ರೂಪಾಯಿ ಬೇಕೆಂದು ಕೇಳಿದ್ದರಂತೆ. ಈ ವೇಳೆ ಮೂವರು ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ ಎಡದಂಡೆ ಕಾಲುವೆಗೆ ದೂಡಿ ಓಡಿ ಹೋಗಿದ್ದರು. ಡೇನಿಯಲ್ ಮತ್ತು ಪಂಕಜ್ ಈಜಿ ದಡಕ್ಕೆ ಬಂದಿದ್ದಾರೆ. ಇನ್ನು ಹೋಮಸ್ಟೇ ಮಹಿಳಾ ಓನರ್​, ಇಸ್ರೆಲ್ ಪ್ರವಾಸಿ ಮಹಿಳೆ ಮೇಲೆ ಸಾಮೂಹಿತ ಅತ್ಯಾವಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ 6 ತಂಡ ರಚನೆ ಮಾಡಿದ್ದೇವೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+