ಚೀನಾದವರು ನಮ್ ತಂಟೆಗೆ ಬಂದ್ರೆ ಸುಮ್ನೆ ಒದೆ ತಿಂದು ಹೋಗ್ತಾರೆ!

ಕೊಪ್ಪಳ, ಜೂನ್ 16: ಭಾರತ ಮತ್ತು ಚೀನಾ ಸಂಘರ್ಷದ ಬಗ್ಗೆ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ.

Recommended Video

      Ramesh Aravind's week days with ramesh is start from June 18th | Oneindia Kannada

      "ಮೋದಿಯವರು ಪ್ರಧಾನಿಯಾದ ಮೇಲೆ, ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಹಿಂದಿನ ಹಾಗೇ ಎಲ್ಲದಕ್ಕೂ ಅನುಮತಿ ಪಡೆದು ಮುನ್ನುಗ್ಗುವ ಅವಶ್ಯಕತೆಯಿಲ್ಲ"ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು.

      "ಪಾಕಿಸ್ತಾನ ಕೂಡಾ ನಮ್ಮ ತಂಟೆಗೆ ಬಂದು, ಈಗ ಬಾಲ ಮುದುಡಿ ಕೂತಿದೆ. ಚೀನಾದ ಪರಿಸ್ಥಿತಿಯೂ ಹಾಗೇ ಹಾಗಲಿದೆ. ಸುಮ್ಮನೆ ನಮ್ಮ ಯೋಧರ ತಂಟೆಗೆ ಬಂದರೆ, ಒದೆ ತಿಂದು ಹೋಗುವುದು ನಿಶ್ಚಿತ"ಎಂದು ಈಶ್ವರಪ್ಪ ಹೇಳಿದರು.

      India - China Border Conflict: Karnataka Rural Development Minister KS Eshwarappa Statement

      "ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಜೊತೆ ಮೋದಿ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಪಾಕಿಸ್ತಾನ ಅಥವಾ ಚೀನಾ, ಕಾಲುಕರೆದು ಜಗಳಕ್ಕೆ ಬಂದರೆ, ತೊಂದರೆ ಅನುಭವಿಸಿದು ಅವರೇ"ಎಂದು ಈಶ್ವರಪ್ಪ ಹೇಳಿದರು.

      ಸೋಮವಾರ (ಜೂನ್ 15) ರಾತ್ರಿ ನಡೆದ ಭಾರತ-ಚೀನಾ ಸೇನೆ ನಡುವಿನ ಮುಖಾಮುಖಿಯಲ್ಲಿ ಭಾರತೀಯ ಸೇನಾಧಿಕಾರಿ, ಇಬ್ಬರು ಸೈನಿಕರು ಸೇರಿ ಮೂರು ಮಂದಿ ಹುತಾತ್ಮರಾಗಿದ್ದರು. ಜೂನ್ 6ರಂದು ನಡೆದ ಉಭಯ ದೇಶಗಳ ಉನ್ನತ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.

      ಪೂರ್ವ ಲಡಾಖ್‌ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲಾಗಿದೆ ಎಂದು ಹೇಳಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+