ಕೊಪ್ಪಳದಲ್ಲಿ ಕಲುಷಿತ ನೀರು ಕುಡಿದು ವೃದ್ಧೆ ಸಾವು, 10 ಮಂದಿ ಅಸ್ವಸ್ಥ
ಬೆಂಗಳೂರು, ಜೂನ್ 06: ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾದ ಘಟನೆ ಬೆನ್ನಲ್ಲೆ ಇದೀಗ ಕೊಪ್ಪಳದಲ್ಲಿ ಅಂತದ್ದೇ ಘಟನೆ ನಡೆದಿದೆ. ಇಲ್ಲಿ ಕೆಟ್ಟ ನೀರು ಸೇವಿಸಿ ಹತ್ತು ಮಂದಿ ಆಸ್ಪತ್ರೆ ಸೇರಿದಂತೆ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.
ಕೊಪ್ಪಳದ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಹೊನ್ನಮ್ಮ ಶಿವಪ್ಪ (65) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಬಾಲಕನೊಬ್ಬ ಮೃತಪಟ್ಟಿದ್ದ. ಅದರ ಬೆನ್ನಲ್ಲೆ ಇದೀಗ ಕೊಪ್ಪಳದಲ್ಲಿ ಮತ್ತೊಂದು ದುರ್ಘಟನೆ ಸಂಭಸಿದ್ದು, ಸ್ಥಳಿಯ ಆಡಳಿತ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಸರಿಹಾಳ ಗ್ರಾಮದಲ್ಲಿ ಅಶುದ್ಧ ನೀರು ಕುಡಿದ ಸುಮಾರು ಹತ್ತು ಮಂದಿ ಅಸ್ವಸ್ಥರಾಗಿದ್ದು, ಅವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹತ್ತು ಮಂದಿ ಅಸ್ವಸ್ಥರಿಗೆ ನೀಡುತ್ತಿರುವ ಚಿಕಿತ್ಸೆ ಫಲಕಾರಿಯಾಗಿದ್ದು, ಕೆಲವರು ಇಂದು ಸಂಜೆ ಹೊತ್ತಿಗೆ ಬಿಡುಗಡೆ ಹೊಂದಲಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಆಗಿದ್ದೇನು?
ಗ್ರಾಮದಲ್ಲಿ ಜನರು ಎಂದಿನಂತೆ ಗ್ರಾಮ ಪಂಚಾಯಿತಿ ಪೂರೈಸುವ ನೀರನ್ನೆ ಕುಡಿದಿದ್ದರು. ಕಳೆದ ಮೂರು ದಿನಗಳ ಹಿಂದೆ ಒಬ್ಬರ ಹಿಂದೆ ಒಬ್ಬರು ವಾಂತಿ ಮಾಡಲು ಶುರು ಮಾಡಿದರು. ಹೀಗೆ ಅನೇಕ ಮಂದಿಯಲ್ಲಿ ಆರೋಗ್ಯ ಕಾಣಿಕೊಂಡು ಆಸ್ಪತ್ರೆ ಸೇರಿದರು. ಆ ಬಳಿಕವೇ ಕಲುಷಿತ ನೀರಿನಿಂದ ಹೀಗೆ ಆಗಿದೆ ಎಂಬುದು ಗೊತ್ತಾಗಿದೆ.

ಗ್ರಾಮ ಪಂಚಾಯಿತಿ ನಿರ್ಲಕ್ಷ ವಹಿಸಿದೆ. ಕಲುಷಿತ ನೀರು ಪೂರೈಕೆ ಮಾಡಿದ್ದರಿಂದ ಜನರಿಗೆ ಈ ಗತಿ ಬಂದೊದಗಿದೆ.
ಗ್ರಾಮಸ್ಥರ ಆರೋಗ್ಯ ಹಾಳಾಗಲು ಪಂಚಾಯಿತಿಯೇ ಕಾರಣ ಎಂದು ಅಸ್ವಸ್ಥರು ದೂರಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ವೃದ್ಧೆ ಸಾವಿನ ನಂತರ ವಾಂತಿ ಬೇಧಿ/ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೇ ಇದೆ.
ಅಸ್ವಸ್ಥರ ಸಂಖ್ಯೆ ಹೆಚ್ಚಾಗುತ್ತಲೇ ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬರು ಮೃತಪಟ್ಟು, ಗ್ರಾಮಸ್ಥರು ಅಸ್ವಸ್ಥರಾದರೂ ಸಹ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿಲ್ಲ. ಸ್ಥಳಿಯ ಆಡಳಿತದ ನಿರ್ಲಕ್ಷ್ಯದಿಂದ ಜನರು ಆರೋಗ್ಯ ಸಂಕಷ್ಟ ಎದುರಿಸುವಂತಾಗಿದೆ.












Click it and Unblock the Notifications